ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನರೇಗಾದಲ್ಲಿ ಸ್ವಚ್ಛ ಸಂಕಿರಣ ಘಟಕ ನಿರ್ಮಾಣ

Last Updated 19 ಮಾರ್ಚ್ 2023, 6:46 IST
ಅಕ್ಷರ ಗಾತ್ರ

ಬೀದರ್: ತಾಲ್ಲೂಕಿನ ನಾಗೋರಾ ಗ್ರಾಮ ಪಂಚಾಯಿತಿಯು ಸ್ವಚ್ಛ ಭಾರತ ಅಭಿಯಾನಕ್ಕೆ ಪೂರಕವಾಗಿ ನಾಗೋರಾ ಗ್ರಾಮದಲ್ಲಿ ಸ್ವಚ್ಛ ಸಂಕಿರಣ ಘಟಕ ನಿರ್ಮಿಸಿ ಗಮನ ಸೆಳೆದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಅಣ್ಣಾರಾವ್ ಪಾಟೀಲ ಘಟಕವನ್ನು ಉದ್ಘಾಟಿಸಿದರು.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ₹ 17 ಲಕ್ಷ ವೆಚ್ಚದಲ್ಲಿ ಸ್ವಚ್ಛ ಸಂಕಿರಣ ಘಟಕ ನಿರ್ಮಿಸಲಾಗಿದೆ ಎಂದು ಅವರು ತಿಳಿಸಿದರು. ಪಂಚಾಯಿತಿ ವ್ಯಾಪ್ತಿಯ ಐದೂ ಗ್ರಾಮಗಳನ್ನು ಸ್ವಚ್ಛ ಹಾಗೂ ಸುಂದರ ಗ್ರಾಮಗಳನ್ನಾಗಿಸುವ ದಿಸೆಯಲ್ಲಿ ಸಂಕಿರಣ ನಿರ್ಮಾಣ ಮಾಡಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಹೇಳಿದರು.

ಸ್ವಚ್ಛ ವಾಹಿನಿ ವಾಹನದ ಮೂಲಕ ಈಗಾಗಲೇ ಗ್ರಾಮಗಳಲ್ಲಿ ಕಸ ಸಂಗ್ರಹ ಮಾಡಲಾಗುತ್ತಿದೆ. ಕಸವನ್ನು ಒಣ ಕಸ, ಹಸಿ ಕಸ ಹಾಗೂ ಅಪಾಯಕಾರಿ ಕಸವಾಗಿ ವಿಂಗಡಿಸಿ ಕೊಡಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಸ್ವ ಸಹಾಯ ಗುಂಪುಗಳ ಸದಸ್ಯೆಯರು ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಘಟಕ ನಿರ್ವಹಿಸಲಿದ್ದಾರೆ. ಅದರಿಂದ ಬರುವ ಆದಾಯ ಪಡೆಯಲಿದ್ದಾರೆ ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಕುಮಾರ ಲಕ್ಷ್ಮಣ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ನರಸಪ್ಪ ಜಾನಕನೋರ, ಝರೆಮ್ಮ ಅಮೃತ, ಖದೀರ್, ಮುಲ್ತಾನಿ ಸಾಬ, ರಾಜಪ್ಪ ರಾಮುಲು, ನಾಗೇಶ ಶಂಕರ, ಫುಲಮ್ಮ ಸುಮಂತ, ರತ್ನಮ್ಮ ನರಸಪ್ಪ, ಸಂಜುಕುಮಾರ ಭೀಮರಾವ್, ಪೂಜಾ ಚಂದ್ರಶೇಖರ, ಸಲೀಮೊದ್ದಿನ್ ಇಸ್ಮಾಯಿಲ್‍ಸಾಬ್, ಸಂಪಾವತಿ, ಸಂಗಪ್ಪ, ಸೈದಪ್ಪ, ಬಕ್ಕಮ್ಮ, ಆದಿತ್ಯ ರೆಡ್ಡಿ, ಪ್ರಭಾಕರ ರೆಡ್ಡಿ, ಶಶಿಕಲಾ, ವಿಜಯಕುಮಾರ, ಅಶೋಕ, ಜೀತೇಂದ್ರ, ಖಮರಬಿ, ನೀಲಮ್ಮ, ರಜಿಯಾ ಬೇಗಂ, ಚಂದ್ರಮ್ಮ, ಜಾಹೇದಾ ಬೇಗಂ, ಸುಜಾತಾ, ಅಶ್ರಫ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT