ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಮಾರುಕಟ್ಟೆಯಲ್ಲಿ ಘಮಘಮಿಸಿದ ಕೊತಂಬರಿ

ಮೆಂತೆ, ಸಬ್ಬಸಗಿ, ಪಾಲಕ್ ಬೆಲೆಯಲ್ಲಿ ಹೆಚ್ಚಳ
Last Updated 17 ಸೆಪ್ಟೆಂಬರ್ 2022, 9:04 IST
ಅಕ್ಷರ ಗಾತ್ರ

ಬೀದರ್‌: ತರಕಾರಿ ಸಾಮ್ರಾಜ್ಯದಲ್ಲಿ ತುರಾಯಿಬಿಟ್ಟ ತರಕಾರಿಗಳು ಈ ವಾರ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಪ್ರಯತ್ನಿಸಿದರೂ ಖಾದ್ಯ ಪ್ರಿಯರ ಅಚ್ಚುಮೆಚ್ಚಿನ ಸೊಪ್ಪು ಗ್ರಾಹಕರಿಗೆ ಶಾಕ್‌ ನೀಡಿವೆ.

ಕಳೆದ ವಾರದ ಪ್ರತಿ ಕ್ವಿಂಟಲ್‌ಗೆ ₹ 3 ಸಾವಿರದಂತೆ ಮಾರಾಟವಾಗಿದ್ದ ಕೊತಂಬರಿ ದಿಢೀರ್ ₹ 12 ಸಾವಿರ ತಲುಪಿ ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಚೌತಿ ಹಬ್ಬ ಮುಗಿದರೂ ಅಡುಗೆ ಸ್ವಾದ ಹೆಚ್ಚಿಸಲು ಬೇಕೇ ಬೇಕು ಎಂದು ಕೊತಂಬರಿ ಮಾರುಕಟ್ಟೆಯಲ್ಲಿ ಬೀಗ ತೊಡಗಿದೆ. ಕೊತಂಬರಿಯ ಬೆಲೆ ಕೇಳಿ ಗ್ರಾಹಕರು ಮೂಗಿನ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದಾರೆ.

ಮೆಂತೆ ಸಹ ತಾನೇನು ಮೆತ್ತಗಲ್ಲ ಎಂದು ತೋರಿಸಿಕೊಟ್ಟರೆ, ಸಬ್ಬಸಗಿಯೂ ಬೆಲೆಯ ಅಟ್ಟ ಏರಿ ಕುಳಿತಿದೆ. ಚವಳೆಕಾಯಿ, ಹಿರೇಕಾಯಿ, ತುಪ್ಪದ ಹಿರೇಕಾಯಿ, ಗಜ್ಜರಿ, ಹೂಕೋಸು ಪ್ರತಿ ಕೆ.ಜಿಗೆ ₹ 80ರಂತೆಯೇ ಮಾರಾಟವಾಗುತ್ತಿದೆ. ನಾಲ್ಕು ವಾರಗಳಿಂದ ಬೀನ್ಸ್ ಮಾತ್ರ ತರಕಾರಿ ಮಾರುಕಟ್ಟೆಯಲ್ಲಿ ಬಾಗಲು ಸಿದ್ಧವಿಲ್ಲ. ಒಟ್ಟಾರೆ ಗ್ರಾಹಕರನ್ನು ಚಿಂತೆಗೇಡು ಮಾಡಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಎಲೆಕೋಸು, ಹೂಕೋಸು, ಗಜ್ಜರಿ, ಬೀನ್ಸ್, ಹಿರೇಕಾಯಿ, ಬೆಂಡೆಕಾಯಿ, ಚವಳೆಕಾಯಿ, ತುಪ್ಪದ ಹಿರೇಕಾಯಿ ಹಾಗೂ ನುಗ್ಗೆಕಾಯಿ ಬೆಲೆ ಸ್ಥಿರವಾಗಿದೆ.

ಪ್ರತಿ ಕ್ವಿಂಟಲ್‌ಗೆ ಮೆಣಸಿನಕಾಯಿ ಬೆಲೆ ₹ 3 ಸಾವಿರ, ಬದನೆಕಾಯಿ ₹ 2 ಸಾವಿರ, ಸೌತೆಕಾಯಿ ₹ 1 ಸಾವಿರ ಕಡಿಮೆಯಾಗಿದೆ. ಟೊಮೆಟೊ, ಡೊಣಮೆಣಸಿನ ಕಾಯಿ ಬೆಲೆ ₹ 3 ಸಾವಿರ, ಮೆಂತೆ, ಸಬ್ಬಸಗಿ, ಪಾಲಕ್ ₹ 2 ಸಾವಿರ, ಕರಿಬೇವು ₹ 1 ಸಾವಿರ ಹಾಗೂ ಕೊತಂಬರಿ ಬೆಲೆ ₹ 9 ಸಾವಿರ ಹೆಚ್ಚಾಗಿದೆ.

‘ರಾಜ್ಯದ ವಿವಿಧೆಡೆ ಅತಿವೃಷ್ಟಿಯಿಂದಾಗಿ ಸೊಪ್ಪು ನೀರಿನಲ್ಲಿ ಕೊಳೆತು ಹಾಳಾಗಿದೆ. ನೆರೆಯ ಜಿಲ್ಲೆಗಳಿಂದಲೂ ಬೀದರ್ ಮಾರುಕಟ್ಟೆಗೆ ಸೊಪ್ಪು ನಿರೀಕ್ಷೆಯಷ್ಟು ಬಂದಿಲ್ಲ. ಇದೇ ಕಾರಣಕ್ಕೆ ಸೊಪ್ಪಿನ ಬೆಲೆಯಲ್ಲಿ ಹೆಚ್ಚಳವಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ನೆರೆಯ ತೆಲಂಗಾಣದ ಹೈದರಾಬಾದ್‌ನಿಂದ ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಗಜ್ಜರಿ, ನುಗ್ಗೆಕಾಯಿ, ಚವಳೆಕಾಯಿ, ಬೀಟ್‌ರೂಟ್‌, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಜಿಲ್ಲೆಯ ಚಿಟಗುಪ್ಪ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಕರಿಬೇವು, ಕೊತಂಬರಿ, ಬದನೆಕಾಯಿ, ಬೆಂಡೆಕಾಯಿ, ಎಲೆಕೋಸು ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ
........................................................................

ಈರುಳ್ಳಿ 20-30,20-30
ಬೆಳ್ಳುಳ್ಳಿ 30-40,0-40
ಆಲೂಗಡ್ಡೆ 20-30,20-30
ಮೆಣಸಿನಕಾಯಿ 60-80,40-50
ಎಲೆಕೋಸು 30-40,30-40
ಹೂಕೋಸು 60-80,60-80
ಗಜ್ಜರಿ 60-80,60-80
ಬೀನ್ಸ್ 100-120,100-120
ಟೊಮೆಟೊ 20-30,50-60

ಬದನೆಕಾಯಿ 50-60,30-40
ಬೆಂಡೆಕಾಯಿ 50-60,50-60
ಹಿರೇಕಾಯಿ 60-80,60-80
ನುಗ್ಗೆಕಾಯಿ 100-120,100-120


ಡೊಣಮೆಣಸಿನ ಕಾಯಿ 30-40, 50-60
ಚವಳೆಕಾಯಿ 60-80,60-80
ಸೌತೆಕಾಯಿ 30-40,20-30
ತುಪ್ಪದ ಹಿರೇಕಾಯಿ 60-80,60-80

ಮೆಂತೆ 80-100,100-120
ಸಬ್ಬಸಗಿ 50-60,60-80
ಕರಿಬೇವು 20-30,30-40
ಕೊತಂಬರಿ 20-30,100-120
ಪಾಲಕ್ 50-60,60-80

............................

ಪೇಟೆ ಧಾರಣಿ

(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)

ಕಡಲೆ ಕಾಳು ₹ 3,611– ₹4,275

ಉದ್ದಿನ ಕಾಳು ₹ 6.700-₹ 8,001

ಹೆಸರು ಕಾಳು ₹ 6,200–₹7,795

ಜೋಳ ₹ 2,600–₹3,300
ನುಚ್ಚು ಅಕ್ಕಿ ₹ 2,300–₹2,900
ಅಕ್ಕಿ ₹ 4,400–₹6,000
ಸೋಯಾಬಿನ್ ₹ 5,200–₹5,379

ತೊಗರಿ ₹ 6,666–₹7,651
ಗೋಧಿ ₹ 2,000–₹3,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT