ಶುಕ್ರವಾರ, ಆಗಸ್ಟ್ 12, 2022
28 °C
ಜಿಲ್ಲೆಯ 83 ಮಂದಿಗೆ ಕೋವಿಡ್‌ ವೈರಾಣು ದೃಢ

ಕೋವಿಡ್‌ ಸೋಂಕಿನಿಂದ ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಸೇರಿ ಇಬ್ಬರು ಮೃತಪಟ್ಟಿರುವುದು ಶುಕ್ರವಾರ ದೃಢಪಟ್ಟಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ–146ಕ್ಕೆ ಏರಿದೆ.

ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ ಗುಂಡಪ್ಪ ಬಿರಾದಾರ ಹಾಗೂ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ‌ ನಿರ್ದೇಶಕ ಚಂದ್ರಕಾಂತ ವಗದಾಳೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ನಗರದ ಮೈಲೂರಿನ ನಿವಾಸಿ 50 ವರ್ಷದ ಮಹಿಳೆ ತೀವ್ರ ಉಸಿರಾಟ ಸಮಸ್ಯೆಯಿಂದಾಗಿ ಆಗಸ್ಟ್ 31 ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಸೆಪ್ಟೆಂಬರ್ 4 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಮೃತರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಯಲಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್‌ ಬಂದಿದೆ.

ಬೀದರ್‌ನ ನ್ಯೂಆದರ್ಶ ಕಾಲೊನಿಯ 65, 31 ವರ್ಷದ ಪುರುಷ, 16 ವರ್ಷದ ಬಾಲಕಿ, 45, 72 ವರ್ಷದ ಮಹಿಳೆ, ಶಾಹಿನ್‌ ಕೋವಿಡ್‌ ಸೆಂಟರ್‌ನ 32 ವರ್ಷದ ಮಹಿಳೆ, ಭೀಮನಗರದ 23 ವರ್ಷದ ಯುವಕ, ಅಗ್ರಿಕಲ್ಚರ್‌ಕಾಲೊನಿಯ 26ವರ್ಷದ ಮಹಿಳೆ, ವಿದ್ಯಾನಗರದ 34, 36 ವರ್ಷದ ಪುರುಷ, ಗುಂಪಾದ 24, 45 ವರ್ಷದ ಪುರುಷ, 45 ವರ್ಷದ ಮಹಿಳೆ, ಶಹಾಗಂಜ್‌ನ 35 ವರ್ಷದ ಪುರುಷನಿಗೆ ಕೋವಿಡ್‌ ಸೋಂಕು ದೃಡಪಟ್ಟಿದೆ.

ಬಸವಕಲ್ಯಾಣದ 20 ವರ್ಷದ ಯುವಕ, 48 ವರ್ಷದ ಮಹಿಳೆ, ಆದರ್ಶ ಕಾಲೊನಿಯ 47 ವರ್ಷದ ಪುರುಷ, ಭಾಲ್ಕಿಯ ಅಂಬೆಸಂಘ್ವಿಯ 60 ವರ್ಷದ ಪುರುಷ, ಜೈನಾಪುರದ 22 ವರ್ಷದ ಮಹಿಳೆ, ಕೆಎಚ್‌ಬಿ ಕಾಲೊನಿಯ 54 ವರ್ಷದ ಮಹಿಳೆ, ಮದಕಟ್ಟಿಯ 29 ವರ್ಷದ ಮಹಿಳೆ, ಚಿಟಗುಪ್ಪ ತಾಲ್ಲೂಕಿನ 27 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

ಹುಮನಾಬಾದ್‌ನ 62 ವರ್ಷದ ಮಹಿಳೆ, ಔರಾದ್ ತಾಲ್ಲೂಕಿನ ಡೋಂಗರಗಾಂವದ 47 ವರ್ಷದ ಪುರುಷ, ಕಮಲನಗರ ತಾಲ್ಲೂಕಿನ ಸಂಗಮದ 45 ವರ್ಷದ ಪುರುಷ, ಬೋರಾಳದ 52 ವರ್ಷದ ಮಹಿಳೆಗೆ ಕೋವಿಡ್‌ ಸೋಂಕು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ 83 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಕೋವಿಡ್ ವೈರಾಣು ಪೀಡಿತರ ಸಂಖ್ಯೆ 4959ಕ್ಕೆ ತಲುಪಿದೆ. 487 ಪ್ರಕರಣಗಳು ಸಕ್ರಿಯವಾಗಿವೆ. ಕೋವಿಡ್ ಆಸ್ಪತ್ರೆಯಿಂದ 19 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಈವರೆಗೆ 4228 ಮಂದಿ ಬಿಡುಗಡೆ ಹೊಂದಿದ್ದಾರೆ.

ಕೋವಿಡ್ ಸೋಂಕಿನಿಂದ ಅನಿಲ ಗುಂಡಪ್ಪ ನಿಧನ
ಔರಾದ್ ತಾಲ್ಲೂಕಿನ ಸಂತಪುರ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಅನಿಲ ಗುಂಡಪ್ಪ ಬಿರಾದಾರ( 53) ಕೋವಿಡ್‌ ಸೋಂಕಿನಿಂದಾಗಿ ಭಾನುವಾರ ನಿಧನರಾಗಿದ್ದಾರೆ.

ಜ್ವರ ಹಾಗೂ ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರ ವೈದ್ಯಕೀಯ ವರದಿ ಪಾಸಿಟಿವ್‌ ಬಂದಿತ್ತು. ಔರಾದ್‌ ತಾಲ್ಲೂಕಿನ ಜೊನ್ನಿಕೇರಿ ಗ್ರಾಮದ ಹೊಲದಲ್ಲಿ ಮೃತರ ಅಂತ್ಯಕ್ರಿಯೆ ನಡೆಯಿತು.

ಔರಾದ್ ಮಾಜಿ ಶಾಸಕ ಗುಂಡಪ್ಪ ವಕೀಲ ಅವರ ಕಿರಿಯ ಪತ್ರ ಹಾಗೂ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಅವರ ಸಹೋದರ. ಅನಿಲ ಅವರಿಗೆ ಇನ್ನಿಬ್ಬರು ಸಹೋದರಿಯರು ಇದ್ದಾರೆ.

ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ‌ ನಿರ್ದೇಶಕ ಚಂದ್ರಕಾಂತ ವಗದಾಳೆ ಸಹ ಭಾನುವಾರ ಮೃತಪಟ್ಟಿದ್ದಾರೆ. ಅವರಿಗೂ ಕೋವಿಡ್‌ ಸೋಂಕು ತಗುಲಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು