ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸಿಂಗ್ ಸ್ಮರಣಾರ್ಥ ಕ್ರಿಕೆಟ್ ಟೂರ್ನಿ 10 ರಿಂದ

Last Updated 3 ಡಿಸೆಂಬರ್ 2019, 15:36 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಸಾತೋಳಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ಸ್ಮರಣಾರ್ಥ ನಾಲ್ಕನೇ ಮುಕ್ತ ಕ್ರಿಕೆಟ್ ಟೂರ್ನಿ ಡಿ. 10 ರಿಂದ ನಡೆಯಲಿದೆ.

16 ತಂಡಗಳಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದ್ದು, ಹೆಸರು ನೋಂದಣಿಗೆ ಡಿ. 8 ಕಡೆಯ ದಿನವಾಗಿದೆ.

ಟೆನ್ನಿಸ್ ಬಾಲ್ ಬಳಸಲಾಗುವ ಟೂರ್ನಿಯ ಪ್ರತಿ ಪಂದ್ಯ ಎಂಟು ಓವರ್‌ಗಳದ್ದಾಗಿರಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್‌ನ ನಿಯಮಗಳು ಅನ್ವಯವಾಗಲಿವೆ.

ಟೂರ್ನಿಯಲ್ಲಿ ವಿಜೇತ ತಂಡವು ಧರ್ಮಸಿಂಗ್ ಸ್ಮರಣಾರ್ಥ ಟ್ರೋಫಿ ಹಾಗೂ ₹25 ಸಾವಿರ ನಗದು ಬಹುಮಾನ ಪಡೆಯಲಿದೆ. ರನ್ನರ್ ಅಪ್ ತಂಡ ₹15 ಸಾವಿರ ನಗದು ಬಹುಮಾನಕ್ಕೆ ಭಾಜನವಾಗಲಿದೆ.

ಲೀಗ್ ಹಂತದಿಂದ ಫೈನಲ್‌ವರೆಗೂ ಪ್ರತಿ ಪಂದ್ಯದ ಉತ್ತಮ ಆಟಗಾರನಿಗೆ ಪಂದ್ಯಪುರುಷ ಪ್ರಶಸ್ತಿ ದೊರೆಯಲಿದೆ. ಸರಣಿ ಶ್ರೇಷ್ಠ, ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್‌ಮನ್‌, ಬೌಲರ್ ಹಾಗೂ ಫೀಲ್ಡರ್ ಪ್ರಶಸ್ತಿ ಕೂಡ ಇರಲಿವೆ.

ಧರ್ಮಸಿಂಗ್ ಅವರ ಅಳಿಯ, ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ಅವರು ಧರ್ಮಸಿಂಗ್ ಅವರ ಸ್ಮರಣೆಯಲ್ಲಿ ಪ್ರತಿ ವರ್ಷ ಕ್ರಿಕೆಟ್ ಟೂರ್ನಿ ಸಂಘಟಿಸುತ್ತಿದ್ದಾರೆ. ಈ ಬಾರಿಯ ಟೂರ್ನಿ ನಾಲ್ಕನೆಯದ್ದಾಗಿದೆ.

ಟೂರ್ನಿಯಲ್ಲಿ ಹೆಸರು ನೋಂದಣಿಗೆ ಕ್ರಿಕೆಟ್ ತಂಡಗಳು ಮೊಬೈಲ್ ಸಂಖ್ಯೆ 88613 49254, 90089 72096, 76762 92598 ಅಥವಾ 99452 73786ಗೆ ಸಂಪರ್ಕಿಸಬಹುದು ಎಂದು ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT