ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳಾರ(ಕೆ) ಗ್ರಾಮದಲ್ಲಿ 20 ಹಂದಿಗಳ ಸಾವು

Last Updated 12 ನವೆಂಬರ್ 2019, 17:09 IST
ಅಕ್ಷರ ಗಾತ್ರ

ಬೀದರ್‌: ತಾಲ್ಲೂಕಿನ ಕೊಳಾರ(ಕೆ) ಗ್ರಾಮದಲ್ಲಿ ಮಂಗಳವಾರ 20 ಹಂದಿಗಳು ಮೃತಪಟ್ಟಿವೆ. ಇದಕ್ಕೆ ಕಾರಣ ತಿಳಿದು ಬಂದಿಲ್ಲ.

ಹಂದಿ ಮಾಲೀಕರು ಭಯದಿಂದ ಸತ್ತ ಹಂದಿಗಳನ್ನು ಊರ ಹೊರಗಡೆ ಎಸೆದು ಬಂದಿದ್ದಾರೆ. ಮಾರಕ ರೋಗದಿಂದಾಗಿಯೇ ಹಂದಿಗಳು ಮೃತಪಟ್ಟಿರಬಹುದು ಎಂದು ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ. ಸೋಮವಾರ 8–10 ಹಂದಿಗಳು ಮೃತಪಟ್ಟಿದ್ದವು. ಮಂಗಳವಾರ ಮತ್ತೆ 10 ಹಂದಿಗಳು ಸಾವಿಗೀಡಾಗಿರುವುದು ಗ್ರಾಮದಲ್ಲಿ ಆತಂಕ ಸೃಷ್ಟಿಸಿದೆ.

ಹಿರಿಯರು ಗ್ರಾಮದಲ್ಲಿ ರಾತ್ರಿ ಡಂಗೂರ ಬಾರಿಸಿ ಮುನ್ನೆಚ್ಚರಿಕೆ ವಹಿಸುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ. ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

‘ಕೊಳಾರ ಗ್ರಾಮಕ್ಕೆ ವೈದ್ಯರ ತಂಡ ಕಳಿಸಿ ಹಂದಿಗಳ ರಕ್ತ ಮಾದರಿ ಪಡೆಯಲಾಗುವುದು. ಹಂದಿ ಮಾಲೀಕರೊಂದಿಗೆ ಸಮಾಲೋಚನೆ ನಡೆಸಲಾಗವುದು’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೌತಮ ಅರಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT