ಬೀದರ್: ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈತರನ್ನು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆ ಸಂಕಷ್ಟಕ್ಕೆ ದೂಡಿದೆ.

ಮುಂಗಾರು ಹಂಗಾಮಿನ ಆರಂಭದಲ್ಲಿಯೇ ಹೆಸರು ಬೆಳೆದ ರೈತರಿಗೆ ಅತಿವೃಷ್ಟಿಯ ಬಿಸಿ ತಟ್ಟಿಲ್ಲ. ಸೆಪ್ಟೆಂಬರ್ ಹೊತ್ತಿಗೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಹೆಸರು ಕಾಳಿನ ರಾಶಿ ಕಾರ್ಯ ಮುಗಿದಿತ್ತು. ಆದರೆ, ಉದ್ದಿನ ರಾಶಿಯ ಸಿದ್ಧತೆಯಲ್ಲಿದ್ದ ರೈತರಿಗೆ ತೀವ್ರ ತೊಂದರೆಯಾಗಿದೆ.

ಸೆಪ್ಟೆಂಬರ್ 1ರಿಂದ 10ರ ವರೆಗೆ ಜಿಲ್ಲೆಯಾದ್ಯಂತ ಹೆಚ್ಚಿನ ಮಳೆಯಾಗಿತ್ತು. ಕೊನೆಯ ವಾರವೂ ಮಳೆರಾಯ ಪುನಃ ಆರ್ಭಟಿಸಿದ್ದರಿಂದ ಉದ್ದು ಸಂಪೂರ್ಣ ನೆಲಕಚ್ಚಿತು. ಹೀಗಾಗಿಯೇ ಉದ್ದು ಬೆಳೆ ಹೆಚ್ಚು ಹಾಳಾಗಿದೆ.

ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ, ಚಳಕಾಪುರ, ಕಣಜಿ, ಹುಣಜಿ, ಬೀದರ್ ತಾಲ್ಲೂಕಿನ ಶ್ರೀಮಂಡಲ, ಫತ್ತೆಪುರ, ಹುಲಸೂರಿನ ಹಲವು ಗ್ರಾಮಗಳಲ್ಲಿ ತೊಗರಿ ದೊಡ್ಡ ಪ್ರಮಾಣದಲ್ಲಿ ನೆಲಕಚ್ಚಿದೆ. ಕೃಷಿ ಇಲಾಖೆಯ ಪ್ರಾಥಮಿಕ ಸರ್ವೆ ಪ್ರಕಾರ ಶೇ 10ರಷ್ಟು ಬೆಳೆಗೆ ಹಾನಿ ಉಂಟಾಗಿದೆ.

ತೊಗರಿ ಮತ್ತು ಸೋಯಾಬಿನ್ ಜಿಲ್ಲೆಯ ಇನ್ನೆರಡು ಪ್ರಮುಖ ಬೆಳೆಗಳು. ಇನ್ನಷ್ಟೇ ಎರಡೂ ಬೆಳೆಗಳ ರಾಶಿ ಕಾರ್ಯ ನಡೆಯಬೇಕಿದೆ. ಸಣ್ಣಪುಟ್ಟ ಮಳೆ ಬಂದರೆ ಎರಡೂ ಬೆಳೆಗಳು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಆದರೆ, ಸತತ ಮಳೆಗೆ ತೇವಾಂಶ ಹೆಚ್ಚಾಗಿದ್ದರಿಂದ ಕೆಲವೆಡೆ ಬೆಳೆ ಹಾಳಾಗಿದೆ. ತೋಟಗಾರಿಕೆ ಬೆಳೆಗಳು ಸಹ ಇದಕ್ಕೆ ಹೊರತಾಗಿಲ್ಲ. ಟೊಮೆಟೊ, ಶುಂಠಿ ಹೆಚ್ಚು ನಷ್ಟವಾಗಿದೆ.

ಹೆಚ್ಚು ಮಳೆ ದಾಖಲು:

ಜೂನ್ನಿಂದ ಸೆಪ್ಟೆಂಬರ್ ವರೆಗೆ ಜಿಲ್ಲೆಯಲ್ಲಿ 650.30 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ, ಈ ಸಲ 678.90 ಮಿ.ಮೀ ವರ್ಷಧಾರೆಯಾಗಿದೆ. ಇನ್ನು, ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಬೆಳೆಗಳಿಗೆ ಹೆಚ್ಚು ಹಾನಿ ಉಂಟಾಗಿದೆ. ಬೀದರ್ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 168.80 ಮಿ.ಮೀ ವಾಡಿಕೆ ಮಳೆಯಾಗುತ್ತದೆ. ಆದರೆ, ಈ ಸಲ 237.60 ಮಿ.ಮೀ ಮಳೆ ಬಿದ್ದಿದೆ. ಸರಾಸರಿ ಮಳೆಗಿಂತ 68 ಮಿ.ಮೀ ಹೆಚ್ಚು ಮಳೆ ದಾಖಲಾಗಿದೆ.

ಹುಮನಾಬಾದ್, ಬೀದರ್, ಭಾಲ್ಕಿ, ಹುಲಸೂರ, ಬಸವಕಲ್ಯಾಣ ಹಾಗೂ ಚಿಟಗುಪ್ಪ ತಾಲ್ಲೂಕುಗಳಲ್ಲಿ ಅತ್ಯಧಿಕ ಮಳೆಯಾಗಿದೆ. ಸಹಜವಾಗಿಯೇ ಈ ತಾಲ್ಲೂಕುಗಳಲ್ಲಿ ಬೆಳೆ ಹಾನಿ ಪ್ರಮಾಣವೂ ಹೆಚ್ಚಿದೆ.

ಪರಿಹಾರಕ್ಕೆ ಆಗ್ರಹ:

‘ಹೋದ ವರ್ಷ ಮಳೆಯಿಲ್ಲದ ಕಾರಣ ಬೆಳೆಗಳು ಹಾಳಾಗಿದ್ದವು. ಈ ಸಲ ಹೆಚ್ಚಿನ ಮಳೆಗೆ ಹಾಳಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಸರ್ವೇ ಕೆಲಸ ಬೇಗ ಪೂರ್ಣಗೊಳಿಸಿ ಪರಿಹಾರ ಕೊಡಬೇಕು’ ಎಂದು ಖಟಕಚಿಂಚೋಳಿಯ ರೈತ ರೇವಣಸಿದ್ದಪ್ಪ ಆಗ್ರಹಿಸಿದರು.

‘ಹೊಲದಲ್ಲಿ ಮಳೆ ನೀರು ನಿಂತುಕೊಂಡಿದ್ದರಿಂದ 2 ಎಕರೆ ಉದ್ದು ಈಗಾಗಲೇ ಹಾಳಾಗಿ ಹೋಗಿದೆ. ಈಗ ತೊಗರಿ ಬೆಳೆಗೆ ಅಧಿಕ ತೇವಾಂಶದಿಂದ ರೋಗ ಕಾಣಿಸಿಕೊಂಡಿದೆ. ಇದೇ ರೀತಿ ಮಳೆ ಮುಂದುವರೆದರೆ ಒಂದು ಕಾಳು ಸಹ ಕೈಸೇರುವುದಿಲ್ಲ’ ಎಂದು ಶ್ರೀಮಂಡಲ ಗ್ರಾಮದ ರೈತ ರಾಜಕುಮಾರ ಗೋಳು ತೋಡಿಕೊಂಡರು.

‘ಸೆಪ್ಟೆಂಬರ್ ಮೊದಲ ವಾರ ಸುರಿದ ಮಳೆಯ ಸರ್ವೇ ಕಾರ್ಯ ಕೊನೆಗೊಂಡಿದೆ. ಆದರೆ, ಕೊನೆಯ ವಾರ ಪುನಃ ಮಳೆಯಾಯಿತು. ಅಕ್ಟೋಬರ್ನಲ್ಲೂ ಮಳೆ ಮುಂದುವರೆದಿದೆ. ಸರ್ವೇ ಕಾರ್ಯ ಮುಗಿಸಿದ ನಂತರ ರೈತರಿಗೆ ಪರಿಹಾರ ಕೊಡಲಾಗುವುದು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ಕನಿಷ್ಠ ಬೆಂಬಲ ಬೆಲೆಗೆ ಖರೀದಿ’

‘ಬೀದರ್ ಜಿಲ್ಲೆಯಾದ್ಯಂತ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ಹೆಸರು ಕಾಳು ಖರೀದಿ ಪ್ರಕ್ರಿಯೆ ಅಕ್ಟೋಬರ್ 3ರಿಂದಲೇ ಆರಂಭವಾಗಿದೆ’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ. ರೈತರು ಹೆಸರು ಕಾಳು ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಪ್ರತಿ ಕ್ವಿಂಟಲ್ ಹೆಸರು ಕಾಳು ₹8682ರ ದರಲ್ಲಿ ಖರೀದಿಸಲಾಗುವುದು ಎಂದು ಹೇಳಿದ್ದಾರೆ.

‘ಬೆಳೆ ಹಾನಿ ಸರ್ವೆ ಪ್ರಗತಿಯಲ್ಲಿ’

‘ಸೆಪ್ಟೆಂಬರ್ ಮೊದಲ ಹಾಗೂ ಕೊನೆಯ ವಾರ ಸುರಿದ ಮಳೆಗೆ ಬೆಳೆಗಳಿಗೆ ಹೆಚ್ಚಿನ ಹಾನಿಯಾಗಿದೆ. ಅತಿವೃಷ್ಟಿಯಿಂದ ಉದ್ದು ಹೆಚ್ಚಿನ ಪ್ರಮಾಣದಲ್ಲಿ ಹಾಳಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಹೆಸರು ಕಾಳಿನ ರಾಶಿ ಮುಗಿದಿದ್ದರಿಂದ ಸಮಸ್ಯೆ ಆಗಲಿಲ್ಲ. ತೊಗರಿ ಸೋಯಾ ಬೆಳೆ ಶೇ 10ರಷ್ಟು ಹಾಳಾಗಿದೆ. ಸತತವಾಗಿ ಮಳೆಯಾಗುತ್ತಿದ್ದು ಅದರೊಂದಿಗೆ ಸರ್ವೇ ಕಾರ್ಯ ಕೂಡ ಪ್ರಗತಿಯಲ್ಲಿದೆ. ಸರ್ವೇ ಮುಗಿದ ನಂತರ ಬೆಳೆ ಹಾನಿಯ ನಿಖರ ಮಾಹಿತಿ ಲಭ್ಯವಾಗಲಿದೆ. ಪ್ರತಿ ಹೆಕ್ಟೇರ್ಗೆ ₹8500 ಪರಿಹಾರ ನೀಡಲಾಗುತ್ತದೆ. ನೀರಾವರಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಪರಿಹಾರದ ಮೊತ್ತ ಬೇರೆ ಬೇರೆ ಇದೆ’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ಲಾ ಕೆ. ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.