ಶನಿವಾರ, ಮೇ 21, 2022
25 °C

ಬಗರ್‌ಹುಕುಂ ಸಾಗುವಳಿ: ಭೂಮಿ ಮಂಜೂರಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಬೇಕು ಎಂದು
ಅಖಿಲ ಭಾರತೀಯ ಕಿಸಾನ್ ಸಭಾ ಆಗ್ರಹಿಸಿದೆ.
ಸಭಾದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ನಿಯೋಗದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರ ಸಲ್ಲಿಸಿದರು.
ಜಿಲ್ಲೆಯ ಕಾಪಲಾಪುರ (ಜೆ) ಶಮಶೇರನಗರ, ಅತಿವಾಳ, ಹೊನ್ನಿಕೇರಿ, ಮರಕುಂದಾ, ಬಗದಲ್, ಕಮಠಾಣ, ಚಾಂಗಲೇರಾ, ಬೇಮಳಖೆಡ, ನಿರ್ಣಾ, ಬೆಳಕೇರಿ, ನಿಂಬೂರ, ಇಲ್ಯಾಳ, ಸುಂದಾಳ, ಲಿಂಗದಳ್ಳಿ, ಜಕನಾಳ, ಕರಂಜಿ, ಹಂದಿಕೇರಾ ಮೊದಲಾದ ಕಡೆಗಳಲ್ಲಿ ಭೂ ರಹಿತರು ಸರ್ಕಾರಿ ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ. ಆದರೆ, ಅವರ ಮೇಲೆ ಅರಣ್ಯ ಇಲಾಖೆಯ ದೌರ್ಜನ್ಯ ಹೆಚ್ಚಾಗಿದೆ ಎಂದು ದೂರಿದರು.
ತಾಲ್ಲೂಕುಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಬಗರ್‌ಹುಕುಂ ಸಕ್ರಮೀಕರಣ ಸಮಿತಿ ರಚಿಸಿ, ಬಗರ್ ಹುಕುಂ ಸಾಗುವಳಿದಾರರ ಹೆಸರಲ್ಲಿ ಭೂಮಿ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭಾದ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್ ಅಹಮ್ಮದ್, ಪ್ರಮುಖರಾದ ಶಿವರಾಜ ಕಮಠಾಣ, ಶಫಾಯತ್ ಅಲಿ, ಘಾಳೆಪ್ಪ ಕಪಲಾಪುರ (ಜೆ), ಗುರುಪಾದಯ್ಯ ಸ್ವಾಮಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.