ಮಂಗಳವಾರ, 23 ಏಪ್ರಿಲ್ 2024
ADVERTISEMENT
ಈ ಕ್ಷಣ :
ADVERTISEMENT
ADVERTISEMENT
ಬೆಂಗಳೂರಿನಲ್ಲಿ ಗೂಂಡಾ ರಾಜ್ಯ; ರಿಯಲ್‌ ಎಸ್ಟೇಟ್‌ ಸರ್ಕಾರದ ಕೂಟಕ್ಕೆ ಕೆ.ಜೆ. ಜಾರ್ಜ್‌ ಖಜಾಂಚಿ: ಬಿಜೆಪಿ ‘ಚಾರ್ಜ್‌ ಶೀಟ್‌’
Last Updated 1 ಮಾರ್ಚ್ 2018, 10:08 IST
ಅಕ್ಷರ ಗಾತ್ರ
ಬೆಂಗಳೂರು: ವಿಧಾನಸಭೆ ಚುನಾವಣೆಗೆ ಪಕ್ಷಗಳ ಮಧ್ಯೆ ಕೆಸರೆರಚಾಟ ದಿನೇ ದಿನೆ ಹೆಚ್ಚುತ್ತಲೇ ಇದ್ದು, ರಾಜ್ಯ ಕಾಂಗ್ರೆಸ್‌ ವಿರುದ್ಧ ಬಿಜೆಪಿಯು ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನದ ಅಂಗವಾಗಿ ಸಿದ್ಧಪಡಿಸಿರುವ ‘ಲೆಕ್ಕಕೊಡಿ ಬೆಂಗಳೂರಿನ ಜನರಿಗೆ’ ‘ಚಾರ್ಜ್‌ ಶೀಟ್‌’ಅನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್‌ ಜಾವಡೇಕರ್‌ ಗುರುವಾರ ಬಿಡುಗಡೆ ಮಾಡಿದರು.
15 ಪುಟಗಳ ‘ಚಾರ್ಜ್‌ ಶೀಟ್‌’ ಬಿಡುಗಡೆ ಮಾಡಿದ ಪ್ರಕಾಶ್‌ ಜಾವಡೇಕರ್‌ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಗೂಂಡಾ ರಾಜ್ಯ ಇದೆ. ನಾಯಕರ ಜೇಬು ತುಂಬಿಸುವುದೇ ಕಾಂಗ್ರೆಸ್‌ನ ಧ್ಯೇಯವಾಗಿದೆ ಎಂದು ಆಪಾದಿಸಿದರು.
ಬೆಂಗಳೂರಿನಲ್ಲಿ ಫೆ.2ರಂದು ‘ಬೆಂಗಳೂರು ರಕ್ಷಿಸಿ ಪಾದಯಾತ್ರೆ’ ಅಭಿಯಾನ ಆರಂಭವಾಗಲಿದೆ. ‘ಲೆಕ್ಕಕೊಡಿ ಬೆಂಗಳೂರಿನ ಜನರಿಗೆ’ ಪ್ರತಿಯನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಪಕ್ಷದ ಮಾಡಲಿದೆ ಎಂದು ಹೇಳಿದರು.
‘ಚಾರ್ಜ್‌ ಶೀಟ್‌’ ನಲ್ಲಿ ಪ್ರಸ್ತಾಪಿಸಿರುವ ಅಂಶಗಳು
* ಸ್ವರ್ಗವಾಗಿದ್ದ ಬೆಂಗಳೂರನ್ನು ನರಕ ಮಾಡಿದ ಕಾಂಗ್ರೆಸ್‌
* ‘ಬೆಂಗಳೂರು ಮಾಸ್ಟರ್‌ ‍ಪ್ಲಾನ್‌ 2031’ ಆಗಿದೆ ಕಾಂಗ್ರೆಸ್‌ ಪಕ್ಷಕ್ಕೆ ಹಗರಣದ ‘ಚೆಕ್‌ ಲೀಸ್ಟ್‌’
* ‘ಬೆಂಗಳೂರು ಸಿಟಿ‘ ಆಗಿದೆ ‘ಐಟಿ ಸಿಟಿ’ಯಿಂದ ‘ಕ್ರೈಂ ಸಿಟಿ’
* ಮಹಿಳೆಯರಿಗಿಲ್ಲ ಸುರಕ್ಷತೆ
* ಕಾಂಗ್ರೆಸ್‌ ಶಾಸಕ ಹ್ಯಾರಿಸ್‌ ಪುತ್ರ ಮಹಮ್ಮದ್‌ ನಲಪಾಡ್‌ ಉದ್ಯಮಿ ಪುತ್ರ ವಿದ್ವತ್ ಮೇಲೆ ನಡೆಸಿದ ಹಲ್ಲೆಯ ಅಂಶಗಳು ಸೇರಿದಂತೆ ಹಲವು ವಿಷಯಗಳನ್ನು ಇದರಲ್ಲಿ ಮುದ್ರಿಸಲಾಗಿದೆ.
'Bengaluru Rakshisi Padayatre' will begin from tomorrow with a pledge to revive our Bengaluru. A charge sheet was today released by BJP detailing @siddaramaiah's criminal neglect of Bengaluru. You can access the document here:https://t.co/8eRj15qgBp#BengaluruRakshisi pic.twitter.com/7Nh54k5Cdu
<script async="" src="https://platform.twitter.com/widgets.js" charset="utf-8"/>
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT