ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಧೂರಿ ಗಣೇಶ ಉತ್ಸವ ಆಚರಣೆಗೆ ನಿರ್ಧಾರ

ಮಂಟಪಗಳಲ್ಲಿ ಮಹಾ ಪುರುಷರ ಭಾವಚಿತ್ರ ಅಳವಡಿಸಲು ಸಲಹೆ
Last Updated 17 ಆಗಸ್ಟ್ 2022, 15:38 IST
ಅಕ್ಷರ ಗಾತ್ರ

ಬೀದರ್: ನಗರದಲ್ಲಿ ಗಣೇಶ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಗಣೇಶ ಮಹಾ ಮಂಡಳ ನಿರ್ಧರಿಸಿದೆ.
ನಗರದ ರಾಮ ಮಂದಿರದಲ್ಲಿ ನಡೆದ ಗಣೇಶ ಮಹಾ ಮಂಡಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಗಣೇಶ ಉತ್ಸವ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಸಹಕರಿಸಬೇಕು ಎಂದು ಗಣೇಶ ಮಹಾ ಮಂಡಳದ ನೂತನ ಅಧ್ಯಕ್ಷ ಚಂದ್ರಶೇಖರ ಪಾಟೀಲ ಗಾದಗಿ ಕೋರಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲೇ ಗಣೇಶ ಹಬ್ಬ ಬಂದಿರುವ ಕಾರಣ ಎಲ್ಲ ಗಣೇಶ ಮಂಡಳಿಗಳು ಮಂಟಪಗಳಲ್ಲಿ ದೇಶಭಕ್ತರ, ಮಹಾ ಪುರುಷರ ಭಾವಚಿತ್ರಗಳನ್ನು ಅಳವಡಿಸಿ, ಅವರನ್ನು ಸ್ಮರಿಸಬೇಕು ಎಂದು ಹೇಳಿದರು.
ಎರಡು ವರ್ಷ ಕೋವಿಡ್ ಕಾರಣ ಗಣೇಶ ಉತ್ಸವ ಆಚರಣೆಗೆ ತೊಡಕು ಉಂಟಾಗಿತ್ತು. ಈ ಬಾರಿ ಸಾರ್ವಜನಿಕ ಗಣೇಶ ಮಂಡಳಿಗಳು ಉತ್ಸವವನ್ನು ಅದ್ಧೂರಿಯಾಗಿ ಅಚರಿಸಬೇಕು ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಮಹಾ ಮಂಡಳದ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ತಿಳಿಸಿದರು.
ಮಂಟಪಗಳಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಲೊಗೊ ಅಳವಡಿಸಬೇಕು. ಬಾಲ ಗಂಗಾಧರ ತಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರ ಹಾಕಬೇಕು. ಐದು ದಿನ ನಗರ ರಾಷ್ಟ್ರಭಕ್ತಿಯಲ್ಲಿ ಪ್ರಜ್ವಲಿಸಬೇಕು. ಮನೆ ಮನೆಯೂ ಭಗವಾಮಯವಾಗಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ನಂದಕಿಶೋರ ವರ್ಮಾ ಮಾತನಾಡಿ, ಸರ್ಕಾರದ ನಿಯಮ ಪಾಲನೆಯೊಂದಿಗೆ ವಿಜೃಂಭಣೆಯಿಂದ ಗಣೇಶ ಉತ್ಸವ ಆಚರಿಸೋಣ ಎಂದರು.
ಸಭೆಯಲ್ಲಿ ಗಣೇಶ ಮಹಾ ಮಂಡಳದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಗಣೇಶ ಮಹಾ ಮಂಡಳ ಪದಾಧಿಕಾರಿಗಳು:

ಶಂಕರ ಪಾಟೀಲ ಮುನೇನಕೊಪ್ಪ (ಗೌರವಾಧ್ಯಕ್ಷ), ಚಂದ್ರಶೇಖರ ಪಾಟೀಲ ಗಾದಗಿ (ಅಧ್ಯಕ್ಷ), ಸೂರ್ಯಕಾಂತ ನಾಗಮಾರಪಳ್ಳಿ (ಕಾರ್ಯಾಧ್ಯಕ್ಷ), ರೇವಣಸಿದ್ದಪ್ಪ ಜಲಾದೆ, ದೀಪಕ್ ವಾಲಿ, ಈಶ್ವರ ಸಿಂಗ್ ಠಾಕೂರ್, ಮಹೇಶ ಪಾಲಂ, ಭರತ ಶೆಟಕಾರ್, ಬಸವರಾಜ ಪವಾರ್, ಸತೀಶ ಮೊಟ್ಟಿ, ಭೂಷಣ ಪಾಠಕ್, ಸಚಿನ್ ನವಲಕಲೆ, ರಾಜಾರಾಮ ಚಿಟ್ಟಾ, ಶಶಿ ಹೊಸಳ್ಳಿ, ಹಣಮಂತ ಬುಳ್ಳಾ, ಕೃಷ್ಣ, ಗಣೇಶ ಭೋಸ್ಲೆ, ರೋಶನ್ ವರ್ಮಾ (ಉಪಾಧ್ಯಕ್ಷರು), ಬಾಬು ವಾಲಿ (ಪ್ರಧಾನ ಕಾರ್ಯದರ್ಶಿ), ಮನೋಹರ ದಂಡೆ, ವಿಕ್ರಮ ಮುದಾಳೆ, ಸುಭಾಷ ಮಡಿವಾಳ, ಪ್ರಶಾಂತ ಬಾವಗಿ, ಸುರೇಶ ಮಾಶೆಟ್ಟಿ, ಶಿವಪುತ್ರ ವೈದ್ಯ, ಮಹೇಶ್ವರ ಸ್ವಾಮಿ, ಅರುಣ ಬಸವನಗರ, ರಾಜು ಬಿರಾದಾರ, ನಿಲೇಶ ರಕ್ಷಾಳ, ಅಂಬರೀಷ್ ಬಟನಾಪುರೆ, ವಿನೋದ ಪಾಟೀಲ, ವೀರೇಶ ಸ್ವಾಮಿ, ಶ್ರೀಮಂತ ಸಪಾಟೆ, ಉತ್ತಮ ಮುದಾಳೆ, ಗಣೇಶ ಭೋಸ್ಲೆ, ನಿತಿನ್ ನವಲಕಲೆ, ಜಗದೀಶ ಬಿರಾದಾರ, ಕೃಷ್ಣ ಶಿವಸೇನಾ (ಕಾರ್ಯದರ್ಶಿಗಳು), ರಜನೀಶ ವಾಲಿ (ಕೋಶಾಧ್ಯಕ್ಷ), ನಂದಕಿಶೋರ ವರ್ಮಾ (ಸ್ವಾಗತ ಸಮಿತಿ ಅಧ್ಯಕ್ಷ), ಸುಭಾಷ ಚೋಳಕರ್, ಚಂದ್ರಶೇಖರ ಗಾದಾ (ಕಾರ್ಯದರ್ಶಿಗಳು), ಸುನೀಲ್ ದಳವೆ, ಅಶೋಕ ದಿಡಗೆ, ಕಲ್ಯಾಣರಾವ್ ಬಿರಾದಾರ (ಅಲಂಕಾರ ಸಮಿತಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT