ಭಾಲ್ಕಿ: ಸರ್ಕಾರಿ ಶಾಲೆಗಳಲ್ಲಿ ಮಾಧ್ಯಮವಾರು ಶಾಲಾ ಡೈಸ್(ISE) ಕೋಡ್ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಹಾಗೂ ಎಲ್ಲಾ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಸಂಸದ ಸಾಗರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಒಂದೇ ಡೈಸ್ ಕೋಡ್ ಅಡಿಯಲ್ಲಿ ಕನ್ನಡ, ಮರಾಠಿ, ಇಂಗ್ಲಿಷ್, ಉರ್ದು (ಭಾಷೆಗಳ) ಮಾಧ್ಯಮದ ಶಾಲೆಗಳು ನಡೆಯುತ್ತಿವೆ. ಇದರಿಂದ ಶಿಕ್ಷಕರು ಹೆಚ್ಚುವರಿ ಆಗುತ್ತಿದ್ದಾರೆ. ಹಾಗಾಗಿ ಶೈಕ್ಷಣಿಕವಾಗಿ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಎಲ್ಲಾ ಬಹುಭಾಷಾ ಮಾಧ್ಯಮದ ಶಾಲೆಗಳಲ್ಲಿ ಮಾಧ್ಯಮವಾರು ಡೈಸ್ ಕೋಡ್ ನೀಡಿದಲ್ಲಿ ಈ ತೊಂದರೆ ಉಂಟಾಗುವುದಿಲ್ಲ. ಎಲ್ಲಾ ಬಹುಭಾಷಾ ಮಧ್ಯಮಗಳ ಶಾಲೆಗಳಲ್ಲಿ ಮಾಧ್ಯಮವಾರು ಶಾಲಾ ಡೈಸ್ ಕೋಡ್ ನೀಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ರವೀಂದ್ರ ರೆಡ್ಡಿ, ತಾಲ್ಲೂಕು ಅಧ್ಯಕ್ಷ ಸೂರ್ಯಕಾಂತ ಸುಂಟೆ, ಇಂದುಮತಿ ಕಲ್ಲೂರೆ, ಕೃಷ್ಣಾಬಾಯಿ ಲಾಂಚಕರ್, ಲಕ್ಷ್ಮಣ ಹೆಂಬಾಳೆ, ಮಹೇಶ ಮುಳೆ, ಶರಣಬಸಪ್ಪ ಬಿರಾದಾರ, ಹರಿನಾಥ ಪಾಟೀಲ, ದತ್ತು ಪಾಟೀಲ, ವಿಜಯಕುಮಾರ ನುದನೂರೆ, ಗಜಾನನ ಮುಳ್ಳಾ, ಅಶೋಕ ಕುಂಬಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ರಾಜಪ್ಪ ಪಾಟೀಲ, ಬಸವರಾಜ ಮಡಿವಾಳ, ಬಸವರಾಜ ನೇಳಗೆ, ಬಾಲಾಜಿ ಬೈರಾಗಿ, ಪ್ರಭಾವತಿ ಬಿಗೆ ಹಾಗೂ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.