ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಕರೆಗೆ ₹25 ಸಾವಿರ ಪರಿಹಾರಕ್ಕೆ ಒತ್ತಾಯ

Published : 5 ಸೆಪ್ಟೆಂಬರ್ 2024, 16:34 IST
Last Updated : 5 ಸೆಪ್ಟೆಂಬರ್ 2024, 16:34 IST
ಫಾಲೋ ಮಾಡಿ
Comments

ಜನವಾಡ: ‘ಮಳೆಯಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ರಾಜ್ಯ ಸರ್ಕಾರ ಎಕರೆಗೆ ₹25 ಸಾವಿರ ಪರಿಹಾರ ಕೊಡಬೇಕು’ ಎಂದು ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಆಗ್ರಹಿಸಿದರು.

ಬೀದರ್ ತಾಲ್ಲೂಕಿನ ಮನ್ನಳ್ಳಿ, ಯಾಕತಪುರ, ನಾಗೋರಾ ಮೊದಲಾದ ಗ್ರಾಮಗಳಲ್ಲಿ ಗುರುವಾರ ಬೆಳೆ ಹಾನಿ ವೀಕ್ಷಿಸಿ ಅವರು ಮಾತನಾಡಿದರು.
‘ಹಿಂದಿನ ಬಿಜೆಪಿ ಸರ್ಕಾರದಂತೆ ಪೂರ್ಣ ಮನೆ ಹಾನಿಗೆ ₹5 ಲಕ್ಷ, ಭಾಗಶಃ ಹಾನಿಗೆ ₹2.5 ಲಕ್ಷ ಹಾಗೂ ಅಲ್ಪ ಹಾನಿಗೆ ₹ 50 ಸಾವಿರ ಪರಿಹಾರ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಈಗಿನ ರಾಜ್ಯ ಸರ್ಕಾರ ಮನೆ ಹಾನಿಗೆ ಗರಿಷ್ಠ ₹1.20 ಲಕ್ಷ ಪರಿಹಾರ ನಿಗದಿಪಡಿಸಿ, ಜನರಿಗೆ ಅನ್ಯಾಯ ಮಾಡಿದೆ. ಸಂತ್ರಸ್ತರಿಗೆ ಐದಾರು ಸಾವಿರ ಪರಿಹಾರ ಕೊಟ್ಟು ಅವರ ನೋವಿನೊಂದಿಗೆ ಚೆಲ್ಲಾಟವಾಡುತ್ತಿದೆ’ ಎಂದು ಟೀಕಿಸಿದರು.

‘ಸಂತ್ರಸ್ತರಿಗೆ ಪರಿಹಾರ ಕೊಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಕಳೆದ ತಿಂಗಳು ಅತಿವೃಷ್ಟಿಯಿಂದ ಹಾನಿಗೀಡಾದ ಸಂತ್ರಸ್ತರಿಗೆ ಪರಿಹಾರ ಒದಗಿಸಿಲ್ಲ. ಅಧಿಕಾರಿಗಳು ಕೂಡಲೇ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಕಾಲಹರಣ ಮಾಡದೆ ಪರಿಹಾರ ವಿತರಿಸುವಂತೆ ಸರ್ಕಾರ ಜಿಲ್ಲಾಡಳಿತಕ್ಕೆ ಸೂಚಿಸಬೇಕು’ ಎಂದು ಒತ್ತಾಯಿಸಿದರು.

ಬೀದರ್ ದಕ್ಷಿಣದಲ್ಲಿ ಒಂದು ವಾರದ ಮಳೆಯಿಂದಾಗಿ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿನ ಉದ್ದು, ಸೋಯಾಬೀನ್, ಕಬ್ಬು, ತೊಗರಿ ಮೊದಲಾದ ಬೆಳೆಗಳು ಹಾನಿಯಾಗಿವೆ. ಕಾರಂಜಾ ಜಲಾಶಯದ ಹಿನ್ನೀರಿನಿಂದಲೂ ಸಾಕಷ್ಟು ನಷ್ಟವಾಗಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ 200ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ಕೆಲ ಮನೆಗಳು ಸಂಪೂರ್ಣ ಕುಸಿದರೆ, ಇನ್ನು ಹಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದರು. ಮುಖಂಡರಾದ ಅನಿಲ್ ಪನ್ನಾಳೆ, ರಾಜರೆಡ್ಡಿ ನಾಗೂರೆ, ಸಂಗಮೇಶ, ಕಂದಾಯ ನಿರೀಕ್ಷಕ ನಾಗರಾಜ, ಗ್ರಾಮ ಲೆಕ್ಕಿಗ ಅಯೂಬ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT