ಭಾನುವಾರ, ನವೆಂಬರ್ 27, 2022
26 °C

ಖಟಕಚಿಂಚೋಳಿ: ಮಳೆಯಲ್ಲೇ ಭಕ್ತರ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಮಹಾರಾಷ್ಟ್ರದ ತುಳಜಾಪುರಕ್ಕೆ ಪಾದಯಾತ್ರೆ ಹೊರಟ ಭಕ್ತರಿಗೆ ಸಮೀಪದ ಸಿಂದಬಂದಗಿ ಗ್ರಾಮಸ್ಥರು ಗುರುವಾರ ಪ್ರಸಾದ ವ್ಯವಸ್ಥೆ ಮಾಡಿದರು.

ಬೆಳಿಗ್ಗೆ 6ರಿಂದ ಪ್ರಾರಂಭವಾದ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚುತ್ತಲೇ ಇತ್ತು. ಮುಂಜಾನೆ ಚಹಾ, ಅಲ್ಪ ಉಪಹಾರ ವಿತರಿಸಿದರು. ಮಧ್ಯಾಹ್ನ ಅನ್ನ, ಸಾಂಬಾರ, ಸಿಹಿ ತಿಂಡಿ ಹಾಗೂ ಬಾಳೆಹಣ್ಣು ನೀಡಿದರು.

ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ, ತಂಪಾದ ಗಾಳಿ ಬೀಸುತ್ತಿತ್ತು. ಮಧ್ಯಾಹ್ನದ ವೇಳೆಗೆ ಮಳೆ ಜೋರಾಯಿತು. ಆದರೂ ಪಾದಯಾತ್ರಿಗಳು ಮಳೆಯನ್ನೂ ಲೆಕ್ಕಿಸದೆ ಹುಮ್ಮಸ್ಸಿನಿಂದ ಹೆಜ್ಜೆ ಹಾಕಿದರು.

ಪ್ರತಿ ವರ್ಷದಂತೆ ಈ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಜನರು ತುಳಜಾಪುರಕ್ಕೆ ನಡೆದುಕೊಂಡು ಹೋಗುತ್ತಿದ್ದೇವೆ. ಮಳೆ ಇದೆ ಎಂದು ನಿಂತರೆ ಹುಣ್ಣಿಮೆಗೆ ತುಳಜಾಪುರಕ್ಕೆ ತಲುಪಲು ಆಗುವುದಿಲ್ಲ. ಆದ್ದರಿಂದ ಮಳೆಯನ್ನು ಲೆಕ್ಕಿಸದೆ ಹಿರಿಯರು, ಮಹಿಳೆಯರು ಹಾಗೂ ಯುವಕರು ಜೈ ಮಾತಾದಿ ಎನ್ನುತ್ತಾ ಹೋಗುತ್ತಿದ್ದೇವೆ ಎಂದು ಬೀದರ್‌ನ ಸತೀಶ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.