ಚಿಟಗುಪ್ಪ: ತಾಲ್ಲೂಕಿನ ಇಟಗಾ ಗ್ರಾಮದ ಹೊರವಲಯದಲ್ಲಿರುವ ಶಿವಸಿದ್ಧ ಯೋಗಾಶ್ರಮ ಮುಕ್ತಿಮಠದಲ್ಲಿಯ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಮಹಾ ಶಿವರಾತ್ರಿ ದಿನ ಭಕ್ತರ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಕೋಟಿ ಲಿಂಗೇಶ್ವರ ದೇವಾ ಲಯದಲ್ಲಿ 12 ಅಡಿ ಎತ್ತರದ ಶಿವಲಿಂಗ ಪ್ರತಿಷ್ಠಾಪಿಸಲಾಗಿದೆ. ದೇಗುಲದಲ್ಲಿಯ ಲಿಂಗ ಮೂರ್ತಿಯ ಸುತ್ತ 63 ಶಿವ ಶರಣರ ಹಾಗೂ ಅಷ್ಟ ವಿನಾಯಕ ಮೂರ್ತಿಗಳಿವೆ.ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರಗಳ ಸಂತರ, ಮಹಾತ್ಮರ, ಅಧ್ಯಾತ್ಮ ಸಾಧಕರ ಮೂರ್ತಿಗಳನ್ನೂ ಇಲ್ಲಿ ಕೆತ್ತಲಾಗಿದೆ.

10ನೇ ಶತಮಾನದಿಂದ 21ನೇ ಶತಮಾನದವರೆಗಿನ ಬಹುಪಾಲು ಶಿವನ ಆರಾಧಕ ಋಷಿ-ಮುನಿಗಳ, ಪವಾಡ ಪುರುಷರ ದರ್ಶನ ಇಲ್ಲಿ ಭಕ್ತರಿಗೆ ಒದಗುತ್ತದೆ.

ದೇವಾಲಯದ ನಾಲ್ಕು ದಿಕ್ಕುಗಳ ಗೋಡೆಗಳು ಶಿವ ಆರಾಧಕರ ಪ್ರತಿಕೃತಿಗಳಿಂದ ಕಂಗೊಳಿಸುತ್ತಿವೆ. ದೇವಾಲಯದ ಪಕ್ಕ 12 ಜ್ಯೋತಿರ್ಲಿಂಗ ದೇವಾಲಯವೂ ಇದೆ.

ವಿಶೇಷ ಪೂಜೆ: ದೇವಾಲಯದಲ್ಲಿ ಪ್ರತಿವರ್ಷ ಮಹಾ ಶಿವರಾತ್ರಿ ಅಂಗವಾಗಿ ವಿಶೇಷ ಬಿಲ್ವಾರ್ಚನೆ, ಮಹಾಭಿಷೇಕ ಪೂಜೆ, ಅನ್ನಸಂತರ್ಪಣೆ ಕಾರ್ಯಗಳು ನಡೆಯುತ್ತವೆ. ರಾತ್ರಿ ಚನ್ನಮಲ್ಲೇಶ್ವರ ತ್ಯಾಗಿ ಅವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯುತ್ತದೆ. ನಂತರ ಸಂಗೀತ ಕಲಾವಿದರಿಂದ ಭಜನೆ ಕಾರ್ಯಕ್ರಮ ಆಯೋಜಿಸಲಾಗುತ್ತದೆ.

‘ದೇವರ ದರ್ಶನಕ್ಕೆ ಬರುವ ಭಕ್ತರಿಗೆ ನೇರವಾಗಿ ದರ್ಶನ ಪಡೆಯುವ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಮುಕ್ತಿಮಠದ ನೀಲಕಂಠ ಇಸ್ಲಾಂಪುರ ಹೇಳುತ್ತಾರೆ.

ದೇವಾಲಯಕ್ಕೆ ಬರುವ ಭಕ್ತರಿಗೆ ವಿಶ್ರಾಂತಿ, ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಇಂದ್ರಣ್ಣ ಮೈಲೂರ, ಅಣ್ಣೆಪ್ಪ ಇಸ್ಲಾಂಪುರ ತಿಳಿಸಿದ್ದಾರೆ.

‘ಮಹಾಶಿವರಾತ್ರಿ ಪೂಜೆಗೆ ಇಲ್ಲಿಗೆ ಬರುವ ಭಕ್ತರಿಗೆ ಮಠದಿಂದ ಬಿಲ್ವಪತ್ರೆ, ವಿವಿಧ ಬಗೆಯ ಪುಷ್ಪಗಳು, ಪೂಜಾ–ಸಾಮಗ್ರಿಗಳನ್ನು ವಿತರಿಸಿ ಸಾಮೂಹಿಕ ಇಷ್ಟಲಿಂಗ ಪೂಜೆ ನೆರವೇರಿಸುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ’ ಎಂದು ಪೀಠಾಧಿಪತಿ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ‘ಉಪವಾಸ, ಪೂಜೆ ಮತ್ತು ಜಾಗರಣೆ ಶಿವರಾತ್ರಿ ಆಚರಣೆಯ ಪ್ರಮುಖವಾದ ಮೂರು ಅಂಗಗಳಾಗಿವೆ. ಹೀಗಾಗಿ ಎಲ್ಲರೂ ಜಾಗರಣೆ, ಉಪವಾಸ, ಶಿವದೇಗುಲಗಳಲ್ಲಿ ವಿಶೇಷ ಪೂಜೆ ಮಾಡುವ ಮೂಲಕ ಆತ್ಮಶುದ್ಧಿ ಮಾಡಿಕೊಳ್ಳಬೇಕು’ ಎಂದು ಸೋಮೇಶ್ವರ ಶಿವಾಚಾರ್ಯರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.