ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಬಾಬಾ ಸಾಹೇಬರಿಗೆ ಭಕ್ತಿಯ ನಮನ

ವಿವಿಧೆಡೆ ಡಾ.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ; ಮೇಣದಬತ್ತಿ ಬೆಳಗಿ ಗೌರವ ಸಲ್ಲಿಸಿದ ಅಭಿಮಾನಿಗಳು
Last Updated 6 ಡಿಸೆಂಬರ್ 2020, 13:05 IST
ಅಕ್ಷರ ಗಾತ್ರ

ಬೀದರ್‌: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 64ನೇ ಪರಿನಿರ್ವಾಣ ದಿನ ಆಚರಿಸಲಾಯಿತು. ಬಾಬಾ ಸಾಹೇಬ ಅವರ ಅನುಯಾಯಿ ಗಳು ಮನೆಗಳಲ್ಲೂ ದಲಿತ ಸೂರ್ಯನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೇಣದಬತ್ತಿ ಯನ್ನು ಬೆಳಗಿಸಿ ಭಕ್ತಿಭಾವ ಮೆರೆದರು.

ಸಮತಾ ಸೈನಿಕ ದಳ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ದಲಿತರು ಬಾಬಾಸಾಹೇಬ ಅಂಬೇಡ್ಕರ್‌ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಭಾರತೀಯ ಬೌದ್ಧ ಮಹಾಸಭಾದ ನೇತೃತ್ವದಲ್ಲಿ ಸಮತಾ ಸೈನಿಕ ದಳದ ಮಹಿಳಾ ಕಾರ್ಯಕರ್ತೆಯರು ನೀಲಿ ಅಂದಿನ ಶ್ವೇತ ವರ್ಣದ ಸೀರೆ ತೊಟ್ಟು ಜನವಾಡ ರಸ್ತೆಯಲ್ಲಿರುವ ಬೌದ್ಧ ವಿಹಾರದಿಂದ ಡಾ.ಅಂಬೇಡ್ಕರ್‌ ವೃತ್ತದ ವರೆಗೆ ಪಥಸಂಚಲನದ ಮೂಲಕ ಅಂಬೇಡ್ಕರ್‌ ವೃತ್ತಕ್ಕೆ ಬಂದರು. ನಂತರ ಪ್ರತಿಮೆ ಸಮ್ಮುಖದಲ್ಲಿ ಪರೇಡ್‌ ನಡೆಸಿ ಸೆಲ್ಯುಟ್‌ ಮಾಡಿ ಗೌರವ ವಂದನೆ ಸಲ್ಲಿಸಿದರು.

ಜ್ಞಾನಸಾಗರ ಭಂತೆ, ಶಾಸಕ ರಹೀಂ ಖಾನ್‌, ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ, ಜಿಲ್ಲಾಧಿಕಾರಿ ರಾಮ ಚಂದ್ರನ್‌ ಆರ್., ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಬೀದರ್ ಉಪ ವಿಭಾಗಾಧಿಕಾರಿ ಗರೀಮಾ ಪನ್ವಾರ್, ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ವಿಜಯಲಕ್ಷ್ಮಿ ಗೋಬಾಳಕರ್, ಸಹಾಯಕ ನಿರ್ದೇಶಕ ಅನಿಲಕುಮಾರ ಮೇಲ್ದೊಡ್ಡಿ, ಪರಿನಿರ್ವಾಣ ಆಯೋಜನಾ ಸಮಿತಿ ಗೌರವಾಧ್ಯಕ್ಷ ವಿನಯ ಮಾಳಗೆ, ಅಧ್ಯಕ್ಷ ಮಹೇಶ ಗೋರನಾಳಕರ್, ಕಾರ್ಯಾಧ್ಯಕ್ಷ ಸಂದೀಪ್ ಕಾಂಟೆ, ಗಂಗಮ್ಮಾ ಫುಲೆ, ಡಾ.ಸುಜಾತಾ ಹೊಸಮನಿ, ಶ್ರೀ‍ಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಅರುಣ ಕುದರೆ, ಉಮೇಶ ಸ್ವಾರಳ್ಳಿಕರ್, ಕಲ್ಯಾಣ ರಾವ್ ಭೋಸಲೆ, ವಿನೋದ ಅಪ್ಟೆ, ಪ್ರದೀಪ ನಾಟೇಕರ್,ಮಲ್ಲಿಕಾರ್ಜುನ ಚಿಟ್ಟಾ ಪಾಲ್ಗೊಂಡಿದ್ದರು.

ಜನತಾ ವೇದಿಕೆ: ಕರ್ನಾಟಕ ಜನತಾ ವೇದಿಕೆ ಬೀದರ್ ಜಿಲ್ಲಾ ಘಟಕ ವತಿಯಿಂದ ಶ್ರೀನಗರ ಕಾಲೊನಿಯ ವೇದಿಕೆ ಕಚೇರಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು.

ಜಿಲ್ಲಾ ಘಟಕದ ಅಧ್ಯಕ್ಷ ರಾಜಕುಮಾರ ಭಾವಿಕಟ್ಟಿ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ನಾಗೂರೆ, ಉಪಾಧ್ಯಕ್ಷ ಚಂದ್ರಕಾಂತ ಜಾಧವ, ಕಾರ್ಯದರ್ಶಿ ರಮೇಶ ಹಿಪ್ಪಳಗಾಂವ್, ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಕುಮಾರ ಮೊಗಡಂಪಳ್ಳಿಕರ್ ಇದ್ದರು.

ನೌಬಾದ್‌: ಆಟೋನಗರ ಚೌಳಿ ಕಮಾನ ಸಮೀಪದ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಪರಿನಿರ್ವಾಣ ದಿನ ಆಚರಿಸಲಾಯಿತು.

ಪ್ರೊ.ವಿಠಲದಾಸ ಪ್ಯಾಗೆ, ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯ ಘಟಕ ಅಧ್ಯಕ್ಷ ಸುಬ್ಬಣ್ಣ ಕರಕನಳ್ಳಿ ಮಾತನಾಡಿದರು.
ಕರ್ನಾಟಕ ನಿರ್ಮಾಣ ಸೇನೆ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೆನೋರ, ಮೊಗಲೊಪ್ಪ ಮಾಳಗೆ ಇದ್ದರು.

ಬಿಜೆಪಿ ಕಚೇರಿ: ನಗರದ ಬಿಜೆಪಿ ಜಿಲ್ಲಾ ಘಟಕದಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಪರಿನಿರ್ಮಾಣ ದಿನ ಆಚರಿಸಲಾಯಿತು.

ಬಿಜೆಪಿ ಮುಖಂಡರಾದ ಸೂರ್ಯ ಕಾಂತ ನಾಗಮಾರಪಳ್ಳಿ, ಈಶ್ವರ ಸಿಂಗ್‌ ಠಾಕೂರ್, ಬುಡಾ ಅಧ್ಯಕ್ಷ ಬಾಬು ವಾಲಿ, ಜಯಕುಮಾರ ಕಾಂಗೆ, ಲುಂಬಿಣಿ ಗೌತಮ, ಗುರುನಾಥ ಜ್ಯಾಂತೆ, ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ, ಮಹೇಶ ಸ್ವಾಮಿ ಪಾಲ್ಗೊಂಡಿದ್ದರು.

ಎಬಿವಿಪಿ ಕಚೇರಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೀದರ್ ನಗರದ ಘಟಕದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ಮಾಣ ದಿನ ಆಚರಿಸಲಾಯಿತು.

ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರೇವಣಸಿದ್ದ ಜಾಡರ್ ಮಾತನಾಡಿದರು. ಅರವಿಂದ್ ಸುಂದಳಕರ್, ಮಮೋಜ ಓಂಕಾರೆ, ಸಂಜು ಭದ್ರೆನೋರ್, ಶಿವಕಾಂತ ಬೆಳಕೊನೆಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT