ಮಂಗಳವಾರ, ಮಾರ್ಚ್ 21, 2023
20 °C

ಹಾಳಾದ ರಸ್ತೆ: ಸಂಚಾರಕ್ಕೆ ತೊಂದರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

 

ಬೀದರ್: ಔರಾದ್ ತಾಲ್ಲೂಕಿನ ಕಂದಗೂಳದಿಂದ ನೆರೆಯ ತೆಲಂಗಾಣದ ಗೌಡಗಾಂವ್‍ಗೆ ಸಂಪರ್ಕ ಕಲ್ಪಿಸುವ ರಸ್ತೆ ತೀವ್ರ ಹದಗೆಟ್ಟಿರುವ ಕಾರಣ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಕಂದಗೂಳ, ಗೌಡಗಾಂವ ಹಾಗೂ ಔದತ್‍ಪುರ ಗ್ರಾಮಸ್ಥರು ತಿಳಿಸಿದ್ದಾರೆ.

ತೆಲಂಗಾಣ ಗಡಿವರೆಗಿನ 2 ಕಿ.ಮೀ. ರಸ್ತೆ ಹಾಳಾಗಿರುವುದರಿಂದ ಕಂದಗೂಳ, ಗೌಡಗಾಂವ್, ಔದತ್‍ಪುರ ನಾಗರಿಕರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಕಂದಗೂಳದ ಕಾಶೀನಾಥ ಪಾಟೀಲ, ಬಾಬುರಾವ್ ಚಿಟಮೆ, ಸೂರ್ಯಕಾಂತ ಕಾರಬಾರಿ, ಗೌಡಗಾಂವ್‍ನ ಸಂಜುಕುಮಾರ ಪಾಟೀಲ ಹಾಗೂ ಔದತಪುರದ ಭಗವಂತ ಔದತಪುರ ಹೇಳಿದ್ದಾರೆ.

ನಿತ್ಯ ಬಹಳಷ್ಟು ವಾಹನ ಸಂಚಾರ ಇರುವ ರಸ್ತೆ ಇದಾಗಿದೆ. ಆದರೂ, ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಪಾದಿಸಿದ್ದಾರೆ.

ಕೂಡಲೇ ರಸ್ತೆ ದುರಸ್ತಿಪಡಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.