ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಲೀಪ್ ಕಾಡವಾದ ಸಾಧನೆ ಮಾದರಿ

ಮನೆಯಂಗಳದಲ್ಲಿ ಮಾತು: ಕಲಾವಿದ ಶಿವಕುಮಾರ ಪಾಂಚಾಳ ಹೇಳಿಕೆ
Last Updated 9 ಮೇ 2022, 14:35 IST
ಅಕ್ಷರ ಗಾತ್ರ

ಬೀದರ್: ಕಣ್ಣು ಕಾಣದಿದ್ದರೂ, ದೃಢ ಸಂಕಲ್ಪದಿಂದ ಸಾಧನೆ ಮಾಡಿ ತೋರಿಸಿದ ದಿಲೀಪ್ ಕಾಡವಾದ ಯುವಕರಿಗೆ ಮಾದರಿಯಾಗಿದ್ದಾರೆ ಎಂದು ಸಂಗೀತ ಕಲಾವಿದ ಶಿವಕುಮಾರ ಪಾಂಚಾಳ ನುಡಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕವು ಇಲ್ಲಿಯ ಕುಂಬಾರವಾಡದ ದಿಲೀಪ್ ಕಾಡವಾದ ಅವರ ಮನೆಯಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕಿನ ಕಾಡವಾದ ಗ್ರಾಮದ ದಿಲೀಪ್, ಬಹುಮುಖ ಪ್ರತಿಭೆಯಾಗಿದ್ದಾರೆ. ಗಾಯನ ಜತೆಗೆ ಹಾಡುಗಳಿಗೆ ನಿರ್ದೇಶನವನ್ನೂ ಮಾಡುತ್ತಾರೆ. ಕಂಪ್ಯೂಟರ್‍ನಲ್ಲಿ ಅವರು ಮಾಡುವ ಕಂಪೊಸಿಂಗ್, ಎಡಿಟಿಂಗ್ ಬೆರಗುಗೊಳಿಸುವಂಥದ್ದು ಎಂದು ಹೇಳಿದರು.
ಛಲವಿದ್ದರೆ ಸಾಧನೆಗೆ ಯಾವುದೂ ಅಡ್ಡಿಯಾಗಲಾರದು ಎನ್ನುವುದಕ್ಕೆ ನಿದರ್ಶನವಾಗಿದ್ದಾರೆ ಎಂದು ತಿಳಿಸಿದರು.

ದಿಲೀಪ್ ಕಾಡವಾದ ದಂಪತಿಯನ್ನು ಸನ್ಮಾನಿಸಲಾಯಿತು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಆಶಯ ನುಡಿ ಆಡಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು.

ಕಲಾವಿದರಾದ ಸುನೀಲ್ ಕಡ್ಡೆ, ರಮೇಶ ಕೊಳಾರ, ರಾಘವೇಂದ್ರ ಮುತ್ತಂಗಿ, ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಪರಮೇಶ್ವರ ಬಿರಾದಾರ, ಸುಬ್ಬಣ್ಣ ಕರಕನಳ್ಳಿ, ಪ್ರಭು ಮಾಲೆ ಇದ್ದರು.

ಸಿದ್ಧಾರೂಢ ಭಾಲ್ಕೆ ಸ್ವಾಗತಿಸಿದರು. ಶಿವಕುಮಾರ ಚನಶೆಟ್ಟಿ ನಿರೂಪಿಸಿದರು. ಅಶೋಕ ದಿಡಗೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT