ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಸಾವಿರ ಆಹಾರಧಾನ್ಯ ಕಿಟ್ ವಿತರಣೆ

ಶಾಸಕ ಶರಣು ಸಲಗರ ಕಾರ್ಯ ಮಾದರಿ: ಡಾ.ಶಿವಾನಂದ ಸ್ವಾಮೀಜಿ ಮೆಚ್ಚುಗೆ
Last Updated 15 ಜೂನ್ 2021, 3:17 IST
ಅಕ್ಷರ ಗಾತ್ರ

ಹುಲಸೂರ: ಇಲ್ಲಿನ ಶ್ರೀ ಗುರುಬಸವೇಶ್ವರ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ಶಾಸಕ ಶರಣು ಸಲಗರ ಅವರು ಬಡವರಿಗೆ ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ರವಾ ಒಳಗೊಂಡ 2 ಸಾವಿರ ಆಹಾರಧಾನ್ಯದ ಕಿಟ್‌ಗಳನ್ನು ವಿತರಿಸಿದರು.

‘ಸಿ.ಎಂ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಶರಣು ಸಲಗರ ಅವರನ್ನು ಸಚಿವರನ್ನಾಗಿಸಬೇಕು. ಇದರಿಂದಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುತ್ತದೆ’ ಎಂದು ಡಾ.ಶಿವಾನಂದ ಸ್ವಾಮೀಜಿ ಹೇಳಿದರು.

‘ಬಿ.ಎಸ್. ಯಡಿಯೂರಪ್ಪ ಅವರನ್ನು ಸಿ.ಎಂ ಸ್ಥಾನದಿಂದ ಇಳಿಸಿದರೆ ನಾಡಿನ ಮಠಾಧೀಶರೆಲ್ಲರೂ ಧರಣಿ ನಡೆಸುತ್ತೇವೆ. ಅವರು ರಾಜ್ಯದ ಅಭಿವೃದ್ಧಿಗಾಗಿ ಅನೇಕ ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರಿಂದ ಸಿ.ಎಂ ಪಟ್ಟ ಕಿತ್ತುಕೊಂಡರೆ ರಾಜ್ಯದ ಜನತೆ ತುಂಬಾ ನಷ್ಟ ಅನುಭವಿಸಬೇಕಾಗುತ್ತದೆ’ ಎಂದರು.

ಶಾಸಕ ಶರಣು ಸಲಗರ ಮಾತನಾಡಿ, ‘ಬಡತನದ ಹಲವು ಮುಖಗಳನ್ನು ನೋಡಿರುವ ನಾನು ಬಡ ಜನರ ಸೇವೆಯೇ ನನ್ನ ಉಸಿರಾಗಿಸಿಕೊಂಡಿದ್ದೇನೆ. ಹಸಿವಿನಿಂದ ಯಾರೂ ಬಳಲುಬಾರದು ಎಂಬ ಬಸವಣ್ಣನವರ ತತ್ವ ಪಾಲಿಸುವ ನಾನು ಈ ಸೇವೆ ಲಾಕ್‌ಡೌನ್‌ಗೆ ಸೀಮಿತವಲ್ಲ. ಮುಂದಿನ ದಿನಗಳಲ್ಲೂ ಕಷ್ಟ ಅನುಭವಿಸುತ್ತಿರುವ ಪ್ರತಿಯೊಬ್ಬ ಬಡವನ ನೆರವಿಗೆ ಧಾವಿಸುವೆ. ಬಡವರ ಕುರಿತಾಗಿ ನಮ್ಮ ಸರ್ಕಾರ ಯಾವಾಗಲೂ ಕಾಳಜಿ ವಹಿಸುತ್ತದೆ’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಮಲ್ಲಿಕಾರ್ಜುನ ಕುಂಬಾರ, ಜಿ.ಪಂ ಸದಸ್ಯ ಸುಧೀರ್ ಕಾಡಾದಿ, ಗ್ರಾ.ಪಂ ಅಧ್ಯಕ್ಷೆ ಮಂಗಲಾ ಡೊಣಗಾಂವ ಕರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್ ವಕಾರೆ, ತಾ.ಪಂ ಮಾಜಿ ಅಧ್ಯಕ್ಷ ಸಿದ್ರಾಮ ಕಾಮಣ್ಣ, ಜಿ.ಪಂ ಮಾಜಿ ಅಧ್ಯಕ್ಷೆ ಲತಾ ಹರಕೂಡೆ, ಸೂರ್ಯಕಾಂತ ಚಿಲ್ಲಾಬಟ್ಟೆ, ಗ್ರಾ.ಪಂ ಸದಸ್ಯೆ ಶಕುಂತಲಾ ಬಾಲಾಜಿ ಗೌಡಗಾಂವೆ, ಪ್ರಕಾಶ ಮೆಂಡೋಳೆ, ಸಂಗಮೇಶ ಭೋಪಳೆ, ಅರವಿಂದ್ ಹರ ಪಲ್ಲೆ, ಸೋಮನಾಥ ನಂದಗೆ, ದೇವಿಂದ್ರ ಭೋಪಳೆ, ಪ್ರಕಾಶ್ ಮಂಗಾ ಇದ್ದರು. ನಾಗೇಶ ಮೇತ್ರೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT