ಮಂಗಳವಾರ, ಅಕ್ಟೋಬರ್ 20, 2020
21 °C

ಹಿರಿಯ ನಾಗರಿಕರಿಗೆ ಸಾಮಗ್ರಿ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ಜ್ಯೋತಿಬಾ ಫುಲೆ ವೃದ್ಧಾಶ್ರಮದ ಹಿರಿಯ ನಾಗರಿಕರಿಗೆ ವಿವೇಕ ದೀಪಕ ವಾಲಿ ಫೌಂಡೇಷನ್ ವತಿಯಿಂದ ಹಣ್ಣು, ಮಾಸ್ಕ್, ನೀರು ಬಿಸಿ ಮಾಡುವ ಉಪಕರಣ ಹಾಗೂ ಆಸ್ಕಿ ಮೀಟರ್ ವಿತರಿಸಲಾಯಿತು.

ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಹಾಗೂ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಫೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಮಗ್ರಿಗಳನ್ನು ವಿತರಿಸಲಾಯಿತು.

ವೃದ್ಧಾಶ್ರಮದ ಮುಖ್ಯಸ್ಥ ಅನಿಲಕುಮಾರ ಬೆಲ್ದಾರ್ ಮಾತನಾಡಿ, ‘ವಾಲಿ ಫೌಂಡೇಷನ್ ಹಿರಿಯ ನಾಗರಿಕರಿಗೆ ನೆರವಿಗೆ ಬರುವ ಮೂಲಕ ಮಾನವೀಯ ಕಾರ್ಯಗಳನ್ನು ಮಾಡುತ್ತಿದೆ’ ಎಂದರು.

ಫೌಂಡೇಷನ್ ಮುಖ್ಯಸ್ಥ ವಿವೇಕ ವಾಲಿ, ಉದ್ಯಮಿ ದೀಪಕ ವಾಲಿ, ರವಿ ಕೊಡಗೆ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.