ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆ ಜಾನಪದ ಸಾಹಿತ್ಯದ ಕಾಶಿ- ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಬಣ್ಣನೆ

Last Updated 25 ಸೆಪ್ಟೆಂಬರ್ 2021, 4:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ‘ಬೀದರ್ ಜಿಲ್ಲೆ ಜಾನಪದ ಕಾಶಿ. ಇಲ್ಲಿ ಜಾನಪದ ಸಾಹಿತ್ಯವು ವಿಪುಲವಾಗಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹಾರಕೂಡದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಹಿರೇಮಠ ಸಂಸ್ಥಾನದಿಂದ ಪ್ರಕಟಿಸಿದ ಹಿರಿಯ ಜಾನಪದ ತಜ್ಞ ಎಚ್.ಕಾಶಿನಾಥರೆಡ್ಡಿ ಅವರ ಅಭಿನಂದನಾ ಗ್ರಂಥ ‘ಜಾನಪದ ಕಾಶಿ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಗ್ರಂಥಗಳನ್ನು ಪ್ರಕಟಿಸಿ ಹಿರೇಮಠ ಸಂಸ್ಥಾನದಿಂದ ಉತ್ತಮ ಕಾರ್ಯಗೈಯಲಾಗುತ್ತಿದೆ. ಕಾಶಿನಾಥರೆಡ್ಡಿ ಅವರು ಜಾನಪದ ವಿದ್ವಾಂಸರಾಗಿದ್ದು, ಅವರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರಕುವಂತೆ ಪ್ರಯತ್ನಿಸುತ್ತೇನೆ. ಜಾನಪದಕಾಶಿ ಗ್ರಂಥ ಉತ್ತಮವಾಗಿ ಮೂಡಿಬಂದಿದೆ. ಸಂಪಾದಕ ಡಾ.ಗವಿಸಿದ್ದಪ್ಪ ಪಾಟೀಲ ಅವರು ಈ ಬೃಹತ್ ಗ್ರಂಥದಲ್ಲಿ ಕಾಶಿನಾಥರೆಡ್ಡಿ ಅವರ ಬಗೆಗೆ ಸಮಗ್ರ ಮಾಹಿತಿ ಒದಗಿಸಿದ್ದಾರೆ.

ಗ್ರಂಥಗಳ ಮುನ್ನುಡಿ ಹಾಗೂ ಬೆನ್ನುಡಿ ಓದಿದರೆ ಸಾಕು, ಗ್ರಂಥ ಎಂಥದ್ದು ಎಂಬುದು ಗೊತ್ತಾಗುತ್ತದೆ’ ಎಂದರು.

ಸಾಹಿತಿ ಡಾ.ಗವಿಸಿದ್ದಪ್ಪ ಪಾಟೀಲ ಮಾತನಾಡಿ,‘ಕಾಶಿನಾಥರೆಡ್ಡಿ ಅವರು ಜಾನಪದ ಸಾಹಿತ್ಯದ ಎಲ್ಲ ಪ್ರಕಾರದ ಗೀತೆಗಳನ್ನು ಸಂಗ್ರಹಿಸಿದ್ದಾರೆ. ಈ ಭಾಗದಲ್ಲಿಯೇ ಇವರಂತೆ ಕಾರ್ಯಗೈದವರು ಬೇರೊಬ್ಬರಿಲ್ಲ’ ಎಂದರು.

ಎಚ್.ಕಾಶಿನಾ ಥರೆಡ್ಡಿ, ಡಾ.ಜಯದೇವಿ ಗಾಯಕವಾಡ, ಮಲ್ಲಿನಾಥ ಹಿರೇಮಠ, ಅಂಬಾರಾಯ ಉಗಾಜಿ ಮಾತನಾಡಿದರು.

ಡಾ.ಚನ್ನವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ನಿವೃತ್ತ ಉಪ ಕಾರ್ಯದರ್ಶಿ ಬಿ.ಕೆ.ಹಿರೇಮಠ, ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ರಾಮಪ್ಪ ಗುದಗೆ, ಮೇಘರಾಜ ನಾಗರಾಳೆ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

ಸಂಗೀತಗಾರರಾದ ಕಾರ್ತಿಕಯ್ಯ ಸ್ವಾಮಿ, ಶರಣಪ್ಪ ಜಮಾದಾರ, ದಿಲೀಪಕುಮಾರ ದೇಸಾಯಿ ಅವರು ಸಂಗೀತ ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT