ಜಿಲ್ಲೆಯಲ್ಲಿ ಒಪಿಡಿ ಬಂದ್

ಮಂಗಳವಾರ, ಜೂಲೈ 16, 2019
25 °C
doctors strike: opd closed

ಜಿಲ್ಲೆಯಲ್ಲಿ ಒಪಿಡಿ ಬಂದ್

Published:
Updated:

ಬೀದರ್: ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಖಾಸಗಿ ವೈದ್ಯರು ಜಿಲ್ಲೆಯಲ್ಲಿ ಸೋಮವಾರ ಹೊರ ರೋಗಿಗಳ ವಿಭಾಗ(ಒಪಿಡಿ) ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಐಎಂಎ ದೇಶವ್ಯಾಪಿ ಮುಷ್ಕರದ ಕರೆಯ ಪ್ರಯುಕ್ತ ನಗರದಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಒಪಿಡಿ ಬಂದ್ ಆಗಿದ್ದವು. ತುರ್ತು ಸೇವೆಗಳನ್ನು ಮಾತ್ರ ಒದಗಿಸಲಾಯಿತು. ಹೀಗಾಗಿ ರೋಗಿಗಳು ಪರದಾಡಿದರು.

‘ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 6 ಗಂಟೆವರೆಗೂ ಒಪಿಡಿ ಬಂದ್ ಇರಲಿವೆ. ತುರ್ತು ಸೇವೆಗಳಿಗೆ ತೊಂದರೆಯಾಗದಂತೆ ವೈದ್ಯರ ಪ್ರತಿಭಟನೆ ನಡೆಸಲಾಗಿದೆ’ ಎಂದು ಐಎಂಎ ಬೀದರ್ ಘಟಕದ ಅಧ್ಯಕ್ಷ ಡಾ. ರಘು ಕೃಷ್ಣಮೂರ್ತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !