ಗೋ ಮೂತ್ರದಲ್ಲಿ ರೋಗ ನಿರೋಧಕ ಶಕ್ತಿ

ಔರಾದ್: ಪಶು ಸಂಗೋಪನಾ ಸಚಿವ ಪ್ರಭು ಚವಾಣ್ ಅವರು ಶುಕ್ರವಾರ ಸಂಜೆ ಇಲ್ಲಿಯ ಅಮರೇಶ್ವರ ದೇವಸ್ಥಾನದಲ್ಲಿ ಗೋವು ಪೂಜೆ ನೆರವೇರಿಸಿದರು.
‘ಸರ್ಕಾರ ಗೋವು ಹತ್ಯೆ ನಿಷೇಧ ಕಾಯ್ದೆ ಜಾರಿ ತರುವ ಮೂಲಕ ಅವುಗಳ ರಕ್ಷಣೆ ಹಾಗೂ ಪೋಷಣೆಗೆ ವಿಶೇಷ ಕಾಳಜಿ ವಹಿಸಿದೆ. ಗೋವುಗಳ ಆರಾಧನೆಯಿಂದ ಶಾಂತಿ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ಹಿಂದೂ ಧಾರ್ಮಿಕ ಗ್ರಂಥಗಳು ಹೇಳುತ್ತವೆ. ದೀಪಾವಳಿಯ ಬಲಿಪಾಡ್ಯ ದಿನ ಗೋವು ಪೂಜೆಗೆ ವಿಶೇಷ ಮಹತ್ವ ಇದೆ. ಹೀಗಾಗಿ ರಾಜ್ಯದ ಎಲ್ಲೆಡೆ ಗೋವು ಪೂಜೆ ಆಚರಿಸಲಾಯಿತು’ ಎಂದು ಸಚಿವರು ಹೇಳಿದರು.
‘ಹಿಂದೂ ಧರ್ಮದಲ್ಲಿ ಗೋವುಗಳಿಗೆ ತಾಯಿ ಸ್ಥಾನ ಇದೆ. ಪುರಾಣ, ಉಪನಿಷತ್ತುಗಳಲ್ಲಿ ವಿಶೇಷ ಗೌರವ, ಸ್ಥಾನ ನೀಡಲಾಗಿದೆ. ಪ್ರತಿಯೊಬ್ಬ ಹಿಂದೂ ಗೋವುಗಳನ್ನು ಸಾಕಬೇಕು. ಗೋವು ಮೂತ್ರದಲ್ಲಿ ಅನೇಕ ರೋಗ ನಿರೋಧಕ ಶಕ್ತಿ ಇರುವುದು ದೃಢಪಟ್ಟಿದೆ. ಆಕಳ ಹಾಲಿಗೆ ದೇಶದಲ್ಲೆಡೆ ಬೇಡಿಕೆ ಇದೆ. ಮಕ್ಕಳ ಸಮಗ್ರ ಬೆಳೆವಣಿಗೆಗೆ ಈ ಹಾಲು ಅಮೃತ ಇದ್ದಂತೆ’ ಎಂದು ಅವರು
ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸಂತೋಷ ಪೋಕಲವಾರ, ಮುಖಂಡ ಶರಣಪ್ಪ ಪಂಚಾಕ್ಷರಿ, ಪ್ರಕಾಶ ಘುಳೆ, ಧೊಂಡಿಬಾ ನರೋಟೆ, ಶಿವಾಜಿರಾವ ಕಾಳೆ, ರಾಮಶೆಟ್ಟಿ ಪನ್ನಾಳೆ, ಕೇರಬಾ ಪವಾರ್, ಡಾ.ಕಲ್ಲಪ್ಪ ಉಪ್ಪೆ, ಬಸವರಾಜ ದೇಶಮುಖ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ಮುಖ್ಯಾಧಿಕಾರಿ ರವಿ ಸುಕುಮಾರ, ಪಶು ಸಂಗೋಪನಾ ಸಹಾಯಕ ನಿರ್ದೇಶಕ ರಾಜಕುಮಾರ ಬಿರಾದಾರ, ಅಶೋಕ ಅಲ್ಮಾಜೆ, ಆನಂದ ದ್ಯಾಡೆ, ಶಿವರಾಜ ಅಲ್ಮಾಜೆ, ಶಿವಾಜಿ ಕೊಳ್ಳೂರ್ ಮತ್ತು ಪ್ರಮುಖರು ಇದ್ದರು.
‘ಸನಾತನ ಧರ್ಮದ ಪ್ರತೀಕ’
ಚಿಟಗುಪ್ಪ: ‘ದೀಪವಾಳಿಯ ಬಲಿಪಾಡ್ಯಮಿಯ ದಿನದಂದು ಗೋವರ್ಧನ ಪೂಜೆಯ ಹೆಸರಿನಲ್ಲಿ ಗೋವುಗಳಿಗೆ ಪೂಜೆ ಸಲಿಸುವುದು ಸನಾತನ ಧರ್ಮದ ಸಂಪ್ರದಾಯ ಎಂದು ವೀರಭದ್ರೇಶ್ವರ ದೇಗುಲದ ಕಾರ್ಯದರ್ಶಿ ಸಂಜುಕುಮಾರ ದೇಸಾಯಿ ಹೇಳಿದರು.
ತಾಲ್ಲೂಕಿನ ಚಾಂಗಲೇರಾದ ವೀರಭದ್ರೇಶ್ವರ ದೇಗುಲದ ಗೋಶಾಲೆಯಲ್ಲಿಯ ಗೋವುಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಅರ್ಚಕ ರಾಮಯ್ಯ ಶಾಸ್ತ್ರಿ ಪೂಜೆಯ ವಿಧಿ ಪೂರೈಸಿ ಮಾತನಾಡಿ, ‘ಗೋವುಗಳಿಗೆ ಪೂಜೆ ಸಲ್ಲಿಸುವುದರಿಂದ ಕುಟುಂಬದಲ್ಲಿ ಶಾಂತಿ, ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಧೀರ್ಘಾಯುಷ್ಯ ಲಭಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.
ಪಶುವೈದ್ಯಾಧಿಕಾರಿ ಡಾ.ಸಂತೋಷ ರಡ್ಡಿ, ಡಾ.ಬಸವರಾಜ ಹಳ್ಳಿಖೇಡ್, ರಾಮಪ್ಪ, ವೀರಭದ್ರಪ್ಪ, ಪರಮೇಶ್ವರ ಪೂಜಾರಿ, ಅವಿನಾಶ್, ವೀರೇಶ್ ಇದ್ದರು.
‘ಹುಮನಾಬಾದ್; ಗೋವು ಪೂಜೆ ನಮ್ಮ ಸಂಸ್ಕೃತಿ’
ಹುಮನಾಬಾದ್: ಪುರಾಣ ಮತ್ತು ಉಪನಿಷತ್ತುಗಳಲ್ಲಿ ಗೋವುಗಳಿಗೆ ವಿಶೇಷ ಗೌರವ ನೀಡಲಾಗಿತ್ತು’ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆದೇಶದಂತೆ ಪಟ್ಟಣದ ವೀರಭದ್ರೇಶ್ವರ ದೇವಾಲಯದಲ್ಲಿ ಗೋವು ಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಪೂರ್ವಜರ ಕಾಲದಿಂದಲೂ ಗೋವುಗಳಿಗೆ ಅತ್ಯಂತ ಗೌರವ ನೀಡಿ ಪೂಜಿಸುವ ಪದ್ಧತಿಯನ್ನು ಇದೆ. ಈತ್ತಿಚೆಗೆ ದೇಸಿ ಗೋವು ತಳಿಗಳ ಸಂತತಿ ಕ್ಷೀಣಿಸುತ್ತಿದೆ. ದೇಸಿ ತಳಿಗಳ ಸಾಕಾಣಿಕೆ ಹೆಚ್ಚಿಸಬೇಕು’ ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಲ್ಲಿಕಾರ್ಜುನ ಮಾಶೆಟ್ಟೆ, ಅರಣು ಕುರಣೆ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಗೋವಿಂದ. ಕಂದಾಯ ನಿರೀಕ್ಷಕ ಮಾಹಾ ರುದ್ರಪ್ಪ, ಡಾ. ಪೃಥ್ವಿರಾಜ್, ರಾಜು ಕುಮಾರ್ ಇದ್ದರು.
ಹಳ್ಳಿಖೇಡ್ ಬಿ: ಹಳ್ಳಿಖೇಡ್ ಬಿ. ಸೀಮಿನಾಗನಾಥ ದೇವಾಲಯದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಗೋವು ಪೂಜೆ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಮಹಾಂತಯ್ಯ ತೀರ್ಥ ಅವರು ಪೂಜೆ ಸಲ್ಲಿಸಿ ಆರತಿ ಬೆಳಗಿದರು.
ಬಳಿಕ ಮಾತನಾಡಿದ ಅವರು, ‘ಗೋವು ಪೂಜೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಸಂಕೇತ. ಅವುಗಳ ಪೂಜೆ ಅತ್ಯಂತ ಶ್ರೇಷ್ಠವಾಗಿದೆ’ ಎಂದರು.
ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಗೋಂವಿದ್, ಡಾ.ಪೃಥ್ವಿರಾಜ, ರವಿಕುಮಾರ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.