ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್: ಕುಡಿಯುವ ನೀರು ಪೋಲು, ಸ್ಪಂದಿಸದ ಆಡಳಿತ

Last Updated 30 ನವೆಂಬರ್ 2021, 4:25 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಹುಡಗಿ ಗ್ರಾಮದ ವಿವಿಧ ಬಡಾವಣೆಗಳಲ್ಲಿ ಅಳವಡಿಸಿದ ಕುಡಿಯುವ ನೀರಿನ ಸಣ್ಣ ಟ್ಯಾಂಕ್‌ಗಳಿಂದ ನೀರುನಿರಂತರವಾಗಿ ಪೋಲಾಗುತ್ತಿದೆ. ಅವುಗಳನ್ನು ದುರಸ್ತೆ ಮಾಡದೆ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿದೆ.

ಗ್ರಾಮದಲ್ಲಿ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕವಿದ್ದು, ಕೋಳವೆ ಬಾವಿಗಳು ಸದಾ ಚಾಲನೆಯಲ್ಲಿ ಇರುವುದರಿಂದ ಸಾಕಾಷ್ಟು ನೀರು ಪೋಲಾಗುತ್ತಿದೆ. ಸಾರ್ವಜನಿಕರ ನೀರು ಬಳಕೆಗೆ ನಿರ್ದಿಷ್ಟ ಸಮಯ ನಿಗದಿ ಮಾಡಿದರೆ ನೀರಿನ ವ್ಯರ್ಥತೆಯನ್ನು ತಡೆಯಬಹುದು ಎನ್ನುತ್ತಾರೆ ಗ್ರಾಮಸ್ಥ ಕಲ್ಲಪ್ಪ.

ಗ್ರಾಮದ ಬಹುತೇಕ ಚರಂಡಿಗಳು ಪ್ಲಾಸ್ಟಿಕ್, ಕಲ್ಲು, ಕಟ್ಟಿಗೆಯಂತಹ ತ್ಯಾಜ್ಯಗಳಿಂದ ಆವೃತ್ತವಾಗಿವೆ. ಚರಂಡಿಯ ಕೊಳಚೆ ನೀರು ಸರಾಗವಾಗಿ ಹರಿದು ಹೋಗದೆ ರಸ್ತೆ ಮೇಲೆ ಹರಿದು, ಅದು ಕೆಸರು ಗದ್ದೆಯಂತೆ ಆಗಿದೆ. ಜತೆಗೆ ಗಬ್ಬು ವಾಸನೆ ಬರುತ್ತಿದರು. ಇದರಿಂದ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಎಂದು ನಿವಾಸಿ ಶಶಿಕುಮಾರ ನುಡಿದರು.

ಗ್ರಾಮ ಪಂಚಾಯಿತಿಯ ಸ್ವಚ್ಛತಾ ಸಿಬ್ಬಂದಿ ಚರಂಡಿಯಲ್ಲಿನ ತ್ಯಾಜ್ಯ ತೆರವುಗೊಳಿಸುತ್ತಿಲ್ಲ. ಕೊಳಚೆ ನೀರು ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದ್ದು, ಅನೇಕರು ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುತ್ತಾರೆ ನಿವಾಸಿ ಅನೀಲ.

ಗ್ರಾಮದ ಹಳೆ ಮುಖ್ಯದ್ವಾರದ ಮೇಲ್ಭಾಗದ ಕಮಾನು (ಆರ್ಚ್‌) ಶೀಥಿಲ ಅವ್ಯಸ್ಥೆಗೆ ತಲುಪಿದ್ದು, ಕೆಲ ಭಾಗ ಕುಸಿದು ಬಿದ್ದಿದೆ. ಕುಸಿದು ಬಿದ್ದ ಕಟ್ಟಡ ಭಾಗವನ್ನು ತಕ್ಷಣವೇ ಮರು ನಿರ್ಮಿಸಬೇಕು. ಗ್ರಾಮದ ಎಲ್ಲ ಬಡಾವಣೆಗಳ ಚರಂಡಿಗಳನ್ನು ಸ್ವಚ್ಛಗೊಳಿಸಿ, ಫಾಗಿಂಗ್ ಮಾಡುವ ವ್ಯವಸ್ಥೆಯನ್ನು ಪ್ರತಿ ವಾರವೂ ನಡೆಯಬೇಕು ಎಂದು ಗ್ರಾಮಸ್ಥ ಕಲ್ಲಪ ಮನವಿ ಮನವಿ ಮಾಡಿದರು.

*ಮುಖ್ಯದ್ವಾರದ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಶಾಸಕ ರಾಜಶೇಖರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿದೆ. ಚರಂಡಿಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು

- ಆನಂದ, ಗ್ರಾಮ ಪಂಚಾಯಿತಿ ಅಧ್ಯಕ್ಷ

*ಗ್ರಾಮಕ್ಕೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದೆ. ಪಿಡಿಒ ಅವರಿಗೂ ಈ ಬಗ್ಗೆ ತಿಳಿಸಿದ್ದೇನೆ. ಮನೆಗಳಿಗೆ ಭೇಟಿ ನೀಡಿ ನೀರಿನ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸಿದ್ದೇನೆ

- ಮುರುಗೇಪ್ಪ, ತಾ.ಪಂ ಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT