ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹6 ಕೋಟಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ

ಖೇರ್ಡಾ, ಭಂಡಾರ ಕುಮಟಾ, ದೋಪರವಾಡಿ, ಹಂದಿಕೇರಾ ಗ್ರಾಮಗಳಲ್ಲಿ ಅಹವಾಲು ಸ್ವೀಕಾರ
Last Updated 3 ಮಾರ್ಚ್ 2021, 2:02 IST
ಅಕ್ಷರ ಗಾತ್ರ

ಔರಾದ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಮಂಗಳವಾರ ತಾಲ್ಲೂಕಿನ ಎಕಂಬಾ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ₹6 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಖೇರ್ಡಾ(ಬಿ) ಗ್ರಾಮದ ಎಸ್ಸಿ ವಾರ್ಡ್‍ನಲ್ಲಿ ₹6 ಲಕ್ಷದ ಸಿಸಿ ರಸ್ತೆ, ₹10 ಲಕ್ಷ ಮೊತ್ತದ ಸಮುದಾಯ ಭವನ, ಭಂಡಾರ ಕುಮಟಾದಲ್ಲಿ ₹10 ಲಕ್ಷ ಮೊತ್ತದ 2 ಸಿಸಿ ರಸ್ತೆಗಳು, ಎಸ್ಸಿ ವಾರ್ಡ್‍ನಲ್ಲಿ ₹6 ಲಕ್ಷ ಮೊತ್ತದ ಸಿ.ಸಿ ರಸ್ತೆ, ₹5 ಲಕ್ಷ ಮೊತ್ತದ ಕಂಪೌಂಡ್ ಗೋಡೆ, ₹10 ಲಕ್ಷ ಮೊತ್ತದ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿದರು.

ಹಂದಿಕೇರಾ ಗ್ರಾಮದಲ್ಲಿ ₹5 ಲಕ್ಷ ಮೊತ್ತದ ಸಿಸಿ ರಸ್ತೆ, ₹5 ಲಕ್ಷದ ಚರ್ಚ್ ಕಂಪೌಂಡ್ ಗೋಡೆ, ₹15 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡ, ₹5 ಲಕ್ಷದ ಸಮುದಾಯ ಭವನ, ಮಾರುತಿ ತಾಂಡಾದಲ್ಲಿ ₹48.25 ಲಕ್ಷ ಮೊತ್ತದ ಜಲ ಜೀವನ್ ಮಿಷನ್ ಕಾಮಗಾರಿ, ಚಿರ್ಕಿ ತಾಂಡಾದಲ್ಲಿ ₹15 ಲಕ್ಷ ಮೊತ್ತದ ಸಂತ ಸೇವಾಲಾಲ್ ಭವನ, ಸೇವಾ ತಾಂಡಾದಲ್ಲಿ ₹25 ಲಕ್ಷ ಮೊತ್ತದ ನೀರಿನ ಟ್ಯಾಂಕ್, ₹5 ಲಕ್ಷದ ಸಮುದಾಯ ಭವನ, ಚಿರ್ಕಿ ತಾಂಡಾದಲ್ಲಿ ₹15 ಲಕ್ಷ ಮೊತ್ತದ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ವೇಳೆ ಸಚಿವರು ಖೇರ್ಡಾ(ಬಿ), ಭಂಡಾರ ಕುಮಟಾ, ದೋಪರವಾಡಿ, ಹಂದಿಕೇರಾ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು.

‘ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ಸಾರ್ವಜನಿಕ ರಸ್ತೆಗಳನ್ನು ಶುಚಿಯಾಗಿಡಬೇಕು. ಎಲ್ಲಿಯೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮಾರುತಿ ಚವ್ಹಾಣ್, ತಹಸೀಲ್ದಾರ್ ಎಂ.ಚಂದ್ರಶೇಖರ್, ಧುರೀಣ ರಾಮಶೆಟ್ಟಿ ಪನ್ನಾಳೆ, ಬಂಡೆಪ್ಪ ಕಂಟೆ, ಗಿರೀಶ್ ವಡೆಯರ್, ಕಿರಣ ಪಾಟೀಲ, ಅನೀಲ ವಾಡೇಕರ್, ಆನಂದ ದೇವಕತೆ, ಸಚಿನ್‌ ರಾಠೋಡ್, ವೀರೇಂದ್ರ ರಾಜಾಪೂರೆ, ವಸಂತ ವಕೀಲ್ ರಮೇಶ ವಾಘಮಾರೆ, ಸೂರ್ಯಕಾಂತ ಅಲಮಾಜೆ, ಪ್ರದೀಪ ಪವಾರ, ಹಣಮಂತ ಇದ್ದರು.

‘ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ’
ಔರಾದ್:
ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಾಲ್ಲೂಕಿನ ವಿವಿಧೆಡೆ ರಸ್ತೆ, ಶಾಲಾ ಕಟ್ಟಡ, ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಹಂಗರಗಾದಲ್ಲಿ ₹5 ಲಕ್ಷ ವೆಚ್ಚದ ಸಿ.ಸಿ ರಸ್ತೆ, ₹ 5 ಲಕ್ಷದ ಮಸೀದಿಗೆ ಹೋಗಲು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಲಿಂಗಿದಿಂದ ಧನಸಿಂಗ್ ತಾಂಡಾ ವರೆಗೆ ಸಿಸಿ ರಸ್ತೆ, ಬಾವಲಗಾಂವದಲ್ಲಿ ಸಿಸಿ ರಸ್ತೆ, ಸಾವರಗಾಂವದಲ್ಲಿ ಶಾಲಾ ಕಟ್ಟಡ ನಿರ್ಮಾಣ, ಹೊಕ್ರಾಣಾದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ಹಾಗೂ ಸಮುದಾಯ ಭವನ ಕಾಮಗಾರಿಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಈಗ ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಕಾಮಗಾರಿಗೆ ಆದ್ಯತೆ ನೀಡಲಾಗಿದೆ. ಎಲ್ಲೆಲ್ಲಿ ಸಮಸ್ಯೆ ಇದೆ ಎಂಬುದು ಪಟ್ಟಿ ಮಾಡಿ ಕಾಮಗಾರಿ ಕೈಗೊಳ್ಳಬೇಕು. ಯಾವುದೇ ಊರಿನ ಜನರಿಂದ ನೀರಿನ ಸಮಸ್ಯೆ ಬಗ್ಗೆ ದೂರು ಬಾರದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಿರೀಶ ವಡೆಯರ್, ರಾವಸಾಬ್ ಪಾಟೀಲ, ಧುರೀಣ ರಾಮಶೆಟ್ಟಿ ಪನ್ನಾಳೆ, ರಮೇಶ ದೇವಕತೆ, ಬಂಡೆಪ್ಪ ಕಂಟೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT