ಶಾಲೆಯ ಆವರಣದಲ್ಲಿ ಸಂಪೂರ್ಣ ಕಾಂಪೌಂಡ್ ವ್ಯವಸ್ಥೆ ಇಲ್ಲ. ಶಾಲೆಯ ಮುಂಭಾಗದಲ್ಲಿ ವಿಶಾಲವಾದ ಆಟದ ಮೈದಾನ ಇದೆ. ವಿದ್ಯಾರ್ಥಿಗಳ ಆಟೋಟಕ್ಕೆ ಇರುವ ಈ ಸ್ಥಳದಲ್ಲಿ ಕುಡುಕರ ಕಾಟ ಹೆಚ್ಚಿದೆ. ರಜೆಯ ಸಂದರ್ಭದಲ್ಲಿ ಮದ್ಯದ ಬಾಟಲು, ಸಿಗರೇಟ್ ತುಂಡು, ಪ್ಲಾಸ್ಟಿಕ್ ಲೋಟಗಳು ಬಿದ್ದಿವೆ. ಕುಡುಕರು ಬಾಟಲಿಗಳನ್ನು ಒಡೆದು ಹಾಕುವುದರಿಂದ ಹಲವು ಬಾರಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಬಾಟಲಿಗಳನ್ನು ಸ್ವಚ್ಛಗೊಳಿಸುವುದೇ ಶಿಕ್ಷಕರ, ಮಕ್ಕಳ ಕೆಲಸವಾಗಿದೆ.