ಸೋಮವಾರ, ಜನವರಿ 17, 2022
21 °C

ತಾಳಮಡಗಿಯಲ್ಲಿ ಭೂಕಂಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ 8ರಿಂದ ನಿರಂತರವಾಗಿ ಮೇಲಿಂದ ಮೇಲೆ ಹಲವು ಬಾರಿ ದೊಡ್ಡ ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಭಾರಿ ಶಬ್ಧ ಕೇಳಿಸಿದೆ.

ಭಯ, ಭೀತರಾದ ಜನರು ಮಕ್ಕಳೊಂದಿಗೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಗ್ರಾಮದ ಪಂಚಾಯಿತಿ ಎದುರುಗಡೆಯ ಕಟ್ಟೆಯ ಮೇಲೆ ಪುರುಷರು ಬಂದು ಕುಳಿತಿದ್ದಾರೆ. ಮಹಿಳೆಯರು ತಮ್ಮ ಮನೆಯ ಹೊರಗಡೆಯ ಕಟ್ಟೆಗಳ ಮೇಲೆ ನಡುಕ ಹುಟ್ಟಿಸುವ ಚಳಿಯಲ್ಲಿ ನಡುಗುತ್ತ ಮಧ್ಯ ರಾತ್ರಿವರೆಗೂ ಕುಳಿತು ಕಾಲ ಕಳೆಯುವಂತಾಗಿದೆ.

ಶನಿವಾರ ಶಾಸಕ ರಾಜಶೇಖರ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ನಾಗರಿಕರೊಂದಿಗೆ ಚರ್ಚೆ ನಡೆಸಿ ಮಾತನಾಡಿ, ಈಗಾಗಲೇ ಶಾಮತಾಬಾದ ಗ್ರಾಮಕ್ಕೆ ತಜ್ಞರ ತಂಡ ಭೇಟಿ ನೀಡಿ ಮಾಹಿತಿ ಪಡೆದಿದೆ, ಇಲ್ಲಿಯೂ ಕೇಂದ್ರದ ವಿಜ್ಞಾನಿಗಳ ತಂಡ ಕರೆಸಲು ಜಿಲ್ಲಾಧಿಕಾರಿಗೆ ಸೂಚಿಸಿ ಅವರಿಂದ ಪರಿಶೀಲನೆ ನಡೆಸುವ ಕಾರ್ಯ ಮಾಡಲಾಗುತ್ತದೆ, ಯಾವುದಕ್ಕೂ ಧೈರ್ಯ ಕಳೆದುಕೊಳ್ಳಬಾರದು ಸರ್ಕಾರ ಜೊತೆಗಿದೆ ಎಂದು
ಹೇಳಿದರು.

ತಾಲ್ಲೂಕು ಮಟ್ಟದ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.