ಸೋಮವಾರ, ಮೇ 23, 2022
30 °C

ಹೊಸ ಈದ್ಗಾದಲ್ಲಿ ನಮಾಜ್ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ನಗರದ ಪ್ರತಾಪುರ ರಸ್ತೆಯಲ್ಲಿನ ಹೊಸ ಈದ್ಗಾದಲ್ಲಿ ಮಂಗಳವಾರ ಬೆಳಿಗ್ಗೆ 9.30ಕ್ಕೆ ಈದ್ ಪ್ರಾರ್ಥನೆ ಮಾಡಲಾಗುತ್ತದೆ.

ಮೀರ ಫರ್ಕುಂದಾ ಅಲಿ ಈಮಾಮ್ ಅವರು ಈದ್ ಉಲ್ ಫಿತ್ರ್ ನಮಾಜ್ ನಡೆಯಲಿದೆ. ನಸೀರುದ್ದೀನ್ ಜನಾಬ್ ಅವರು ನಮಾಜ್‌ಗೆ ಮೊದಲು ಅಲ್ಲಿ ನೆರೆದ ಜನರನ್ನು ಉದ್ದೇಶಿಸಿ ಸಂದೇಶ ನೀಡಲಿದ್ದಾರೆ. ಮುಸ್ಲಿಂ ಬಾಂಧವರು ಸಕಾಲಕ್ಕೆ ನಮಾಜ್‌ಗೆ ಹಾಜರಿರಬೇಕು ಎಂದು ಈದ್ಗಾ ಸಮಿತಿ ಕಾರ್ಯದರ್ಶಿ ಮುಜಾಹಿದ್ ಪಾಶಾ ಕುರೇಶಿ ತಿಳಿಸಿದ್ದಾರೆ.

ಸಿದ್ಧತೆ: ಮುಸ್ಲಿಂ ಬಾಂಧವರು ಈದ್‌ಗಾಗಿ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಖರೀದಿ ಮಾಡಿದರು. ಸುರ್ಕುರ್ಮಾ ಹಾಗೂ ವಿವಿಧ ಸಿಹಿ ಖಾದ್ಯಗಳ ತಯಾರಿಕೆಗೆ ಸಾಮಗ್ರಿ ಖರೀದಿಸಿದರು. ಹೊಸ ಬಟ್ಟೆಗಳನ್ನು ಕೂಡ ಖರೀದಿಸಲಾಯಿತು. ಕೋವಿಡ್ ಕಾರಣ ಎರಡು ವರ್ಷಗಳಿಂದ ಈದ್ಗಾದಲ್ಲಿನ ನಮಾಜ್ ಗೆ ಹೆಚ್ಚಿನ ಜನರು ಸೇರಿರಲಿಲ್ಲ. ಈ ಸಲ ಸಾವಿರಾರು ಜನರು ಸೇರಿ ಪ್ರಾರ್ಥನೆ ಸಲ್ಲಿಸಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.