ಬುಧವಾರ, ಜನವರಿ 27, 2021
23 °C

ಬೀದರ್‌: ಈದ್‌ ಮಿಲಾದ್ ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಪ್ರಯುಕ್ತ ನಗರದಲ್ಲಿ ನುವಾರ ಮುಸ್ಲಿಮರು ಈದ್‌ ಮಿಲಾದ್ ಹಬ್ಬವನ್ನು ಸರಳವಾಗಿ ಆಚರಿಸಿದರು.

ಪ್ರತಿವರ್ಷ ಬಸ್‌ ನಿಲ್ಧಾಣದ ಸಮೀಪದ ಈದ್ಗಾ ಮೈದಾನ, ನಗರದ ಜಾಮಿಯಾ ಮಸೀದಿ ಆವರಣ, ಚಿದ್ರಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪಾರ್ಥನೆ ಸಲ್ಲಿಸಲಾಗುತ್ತಿತ್ತು. ಕೋವಿಡ್‌ ಕಾರಣ ಮುಸ್ಲಿಮರು ಆಯಾ ಪ್ರದೇಶಗಳಲ್ಲಿರುವ ಮಸೀದಿಗಳಲ್ಲೇ ಪ್ರಾರ್ಥನೆ ಮಾಡಿ ಪರಸ್ಪರ ಹಬ್ಬದ ಶುಭಾಶಯ ಕೋರಿದರು. ಈ ಬಾರಿ ನಗರದಲ್ಲಿ ಮೆರವಣಿಗೆ ನಡೆಯಲಿಲ್ಲ.

ಓಲ್ಡ್‌ಸಿಟಿಯ ಮಸೀದಿಗಳಿಗೆ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಮೆಹಮೂದ್‌ ಗವಾನ್‌ ವೃತ್ತ ಅಲಂಕಾರಿಕ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿತ್ತು.

ಆಂಬುಲೆನ್ಸ್ ಸೇವೆಗೆ ಚಾಲನೆ

ಬೀದರ್‌: ಸಾಮಾಜಿಕ ಸೇವೆಯ ಉದ್ದೇಶದಿಂದ ಜಮಾಅತೆ ಇಸ್ಲಾಮಿ ಹಿಂದ್‌ನ ಬೀದರ್‌ ಘಟಕದ ವತಿಯಿಂದ ಈದ್‌ ಮಿಲಾದ್‌ ಅಂಗವಾಗಿ ಇಲ್ಲಿಯ ಜಾಮಾ ಮಸೀದಿ ಆವರಣದಲ್ಲಿ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಲಾಯಿತು.

ಶಾಸಕ ರಹೀಂ ಖಾನ್, ಡಿವೈಎಸ್‌ಪಿ ಬಸವೇಶ್ವರ್ ಹೀರಾ ಹಾಗೂ ಜಮಾಅತೆ ಇಸ್ಲಾಮಿ ಹಿಂದ್‍ನ ರಾಜ್ಯ ಉಪಾಧ್ಯಕ್ಷ ಮುಹಮ್ಮದ್ ಯೂಸುಫ್ ಕನ್ನಿ ಮಾತನಾಡಿದರು.

ಜಮಾಅತೆ ಇಸ್ಲಾಮಿ ಕಲಬುರರ್ಗಿ ಪ್ರಾಂತದ ಸಂಚಾಲಕ ಝಾಕೀರ್ ಹುಸೇನ್, ಅಧ್ಯಕ್ಷ ಮಹಮ್ಮದ್ ನಿಜಾಮುದ್ದೀನ್, ಮುಹಮ್ಮದ್ ಆಸಿಫುದ್ದೀನ್, ಮಹಮ್ಮದ್ ತಾಹಾಕಲಿಮುಲ್ಲಾ, ಮುಹಮ್ಮದ್ ಆರಿಫುದ್ದೀನ್, ಮುಜ್‍ತಬಾ ಖಾನ್, ಮುಹಮ್ಮದ್ ಮೌಅಝಮ್, ಮಹಮ್ಮದ್ ಶೊಬುದ್ದೀನ್, ರಫೀಕ್ ಅಹ್ಮದ, ಝಫರುಲ್ಲಾ ಖಾನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು