ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗಳಲ್ಲಿ ‘ಈದ್‌ ಉಲ್‌ ಫಿತ್ರ್‌’ ಸಂಭ್ರಮ

ಸರ್ಕಾರದ ಆದೇಶದ ಪಾಲನೆ: ಸಿಹಿ ಸವಿದು ಸಂಭ್ರಮಿಸಿದ ಜನ
Last Updated 26 ಮೇ 2020, 1:51 IST
ಅಕ್ಷರ ಗಾತ್ರ

ಬಸವಕಲ್ಯಾಣ: ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸದಿರುವುದನ್ನು ಬಿಟ್ಟರೆ ಎಂದಿನಂತೆ ಎಲ್ಲರ ಮನೆಗಳಲ್ಲಿ ರಂಜಾನ್ ಹಬ್ಬದ ಕೊನೆ ದಿನದ ಈದ್-ಉಲ್-ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕೊರೊನಾ ಲಾಕ್‌ಡೌನ್‌ ಕಾರಣ ಎಲ್ಲರಿಗೂ ಹೊಸ ಬಟ್ಟೆ ತೊಡುವುದು ಸಾಧ್ಯವಾಗಲಿಲ್ಲ. ಆದರೆ, ಉತ್ಸಾಹಕ್ಕೆ ಕೊರತೆ ಇರಲಿಲ್ಲ. ಕೆಲವರು ತಮ್ಮ ತಮ್ಮ ಮನೆಗಳಲ್ಲಿ ಹಾಗೂ ಇನ್ನೂ ಕೆಲವರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮನೆಗಳಿಗೆ ಹಿಂದಿರುಗಿ ಪರಸ್ಪರರಿಗೆ ಶುಭಾಶಯ ಕೋರಿದರು. ಕುರ್ಮ, ಚೊಂಗೆ, ಅನ್ನ, ಸಾಂಬಾರಿನ ಊಟ ಸವಿದರು.

‘ಈದ್ಗಾದಲ್ಲಿ ಪ್ರಾರ್ಥನೆ ಸಲ್ಲಿಸುವುದಕ್ಕೆ ಅನುಮತಿ ನೀಡಬೇಕು ಎಂದು ತಾಲ್ಲೂಕು ಆಡಳಿತಕ್ಕೆ ಕೇಳಿಕೊಳ್ಳಲಾಗಿತ್ತು. ಆದರೆ, ಅದಕ್ಕೆ ಆಸ್ಪದ ನೀಡಲಿಲ್ಲ’ ಎಂದು ಈದ್ಗಾ ಸಮಿತಿ ಕಾರ್ಯದರ್ಶಿ ಮುಜಾಹಿದ ಪಾಶಾ ಖುರೇಶಿ ತಿಳಿಸಿದ್ದಾರೆ.

‘ಇದು ಮುಸ್ಲಿಮರಿಗೆ ದೊಡ್ಡ ಹಬ್ಬವಾಗಿದ್ದರೂ ಕೊರೊನಾ ಲಾಕ್‌ಡೌನ್‌ ಕಾರಣ ಕಾನೂನನ್ನು ಗೌರವಿಸಿ ಬಹುತೇಕರು ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿದರು. ಮನೆಗಳಲ್ಲಿ ವಾಡಿಕೆಯಂತೆ ಯಾರೂ ಔತಣಕೂಟ ಏರ್ಪಡಿಸಿರಲಿಲ್ಲ. ಆದರೆ, ಕುಟುಂಬದ ಸದಸ್ಯರು ಸಿಹಿಯೂಟ ಹಾಗೂ ಇತರೆ ಊಟದ ಸವಿಯನ್ನು ಸವಿದು ಸಂಭ್ರಮಿಸಿದ್ದಾರೆ’ ಎಂದು ನೈಮೊದ್ದೀನ್ ಚಾಬೂಕಸವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT