ಶನಿವಾರ, ಜನವರಿ 28, 2023
24 °C
ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇಂಡಕ್ಷನ್ ಪ್ರೊಗ್ರಾಂ

ಭಾಷಾ ಜ್ಞಾನದಿಂದ ಉದ್ಯೋಗ: ಸುಚೇತಕುಮಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ವಿವಿಧ ಭಾಷೆಗಳ ಜ್ಞಾನವು ಉದ್ಯೋಗ ಕಂಡುಕೊಳ್ಳಲು ನೆರವಾಗುತ್ತದೆ ಎಂದು ಎಸ್.ಎಸ್. ಕನ್ಸಲ್ಟೆನ್ಸಿಯ ಸಂಪನ್ಮೂಲ ವ್ಯಕ್ತಿ ಸುಚೇತಕುಮಾರ ಹೇಳಿದರು.

ನಗರದ ಶರಣಬಸವ ಕ್ಯಾಂಪಸ್‍ನಲ್ಲಿ ಇರುವ ಲಿಂಗರಾಜ ಅಪ್ಪ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಇಂಡಕ್ಷನ್ ಪ್ರೊಗ್ರಾಂನ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಪಾನಿ ಸೇರಿದಂತೆ ವಿವಿಧ ಭಾಷೆಗಳನ್ನು ಕಲಿತು ಉದ್ಯೋಗ ಗಿಟ್ಟಿಸಿಕೊಂಡ ಅನೇಕ ಉದಾಹರಣೆಗಳು ಇವೆ. ಪದವಿ, ಕೌಶಲ, ಸಂವಹನ ಕಲೆ ಜತೆಗೆ ಅನೇಕ ಭಾಷೆಗಳ ಜ್ಞಾನವೂ ಬಹಳ ಅವಶ್ಯಕವಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಯಶಸ್ಸಿಗಾಗಿ ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಬೇಕು ಎಂದು ಹೈದರಾಬಾದ್‍ನ ಬದ್ರೂಕಾ ಎಜುಕೇಷನ್ ಸೊಸೈಟಿಯ ನಿರ್ದೇಶಕ ಅಭಿರಾಮ ಕೃಷ್ಣ ಕಿವಿಮಾತು ಹೇಳಿದರು.

ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ಸಾಧನೆ ಛಲ ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಇಂಡಕ್ಷನ್ ಕಾರ್ಯಕ್ರಮವು ಯಶಸ್ಸಿನ ಮಾರ್ಗ, ಜ್ಞಾನ ವೃದ್ಧಿ ಬಗೆ, ಜೀವನ ಮೌಲ್ಯ ಸೇರಿದಂತೆ ವಿವಿಧ ವಿಷಯಗಳ ಜ್ಞಾನ ನೀಡುತ್ತದೆ ಎಂದು ಹೇಳಿದರು.

ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಶರಣಬಸವಪ್ಪ ಅಪ್ಪ, ದಾಕ್ಷಾಯಣಿ ತಾಯಿ, ಚಿ. ದೊಡ್ಡಪ್ಪ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಹಾಗೂ ನಿರ್ದೇಶಕ ಶರಣಬಸಪ್ಪ ದೇಶಮುಖ ಅವರ ಪ್ರೇರಣೆ ಹಾಗೂ ಸಹಕಾರದಿಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಡಾ. ವಿವೇಕ ಜಲಾದೆ, ಡಾ. ಭದ್ರಪ್ಪ ಹರಳಯ್ಯ, ವಿಜಯಾನಂದ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.