ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆ ಉಳಿಯಲು ಕಲಾವಿದರಿಗೆ ಉತ್ತೇಜನ ನೀಡಿ: ಚಂದ್ರಗುಪ್ತ ಚಾಂದಕೋಟೆ

ಹಿರಿಯ ರಂಗಕರ್ಮಿ ಚಂದ್ರಗುಪ್ತ ಚಾಂದಕೋಟೆ ಹೇಳಿಕೆ
Last Updated 20 ಸೆಪ್ಟೆಂಬರ್ 2021, 13:14 IST
ಅಕ್ಷರ ಗಾತ್ರ


ಬೀದರ್‌: ‘ಜಿಲ್ಲೆಯಲ್ಲಿ ರಂಗ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ರಂಗ ಕಲಾವಿದರಿಗೆ ಉತ್ತೇಜನ ನೀಡುವ ಮೂಲಕ ರಂಗ ಕಲೆಯನ್ನು ಉಳಿಸುವ ಅಗತ್ಯವಿದೆ’ ಎಂದು ಹಿರಿಯ ರಂಗಕರ್ಮಿ ಚಂದ್ರಗುಪ್ತ ಚಾಂದಕೋಟೆ ಹೇಳಿದರು.

ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರ ಮೈಸೂರಿನ ರಂಗಾಯಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ರಂಗಭೀಷ್ಮ ಬಿ.ವಿ. ಕಾರಂತರ ಜನ್ಮದಿನದ ಅಂಗವಾಗಿ ರಂಗ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಂಗಭೀಷ್ಮ ಬಿ.ವಿ.ಕಾರಂತ ಅದ್ಭುತ ಕಲಾವಿದರು, ರಂಗಭೂಮಿಯನ್ನೆ ತಮ್ಮ ಜೀವನದ ಉಸಿರನ್ನಾಗಿಸಿಕೊಂಡವರು. ಅವರ ರಂಗಸೇವೆ ಅವಿಸ್ಮರಣೀಯವಾದ್ದದ್ದು’ ಎಂದು ಬಣ್ಣಿಸಿದರು.

ಮುಖ್ಯ ಅತಿಥಿ ಸಂಗ್ರಾಮ ಎಂಗಳೆ ಮಾತನಾಡಿ, ‘ಬಿ.ವಿ.ಕಾರಂತರ ಕಾರ್ಯವ್ಯಾಪ್ತಿ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಅನೇಕ ಕಡೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ರಂಗಭೂಮಿಯ ಜಂಗಮರು’ ಎಂದು ಹೇಳಿದರು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿ, ‘ಬಿ.ವಿ.ಕಾರಂತರ ರಂಗಭೂಮಿ ಸೇವೆಯನ್ನು ಪರಿಗಣಿಸಿ ಸರ್ಕಾರ ಪದ್ಮಶ್ರಿ ಪ್ರದಾನ ಮಾಡಿದೆ’ ಎಂದು ತಿಳಿಸಿದರು.
.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಎಸ್.ಎಂ.ಜನವಾಡಕರ್ ಮಾತನಾಡಿದರು. ಯುವ ಸಾಹಿತಿ ಸುಬ್ಬಣ್ಣ ಕರಕನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಲಾವಿದರಾದ ದೇವದಾಸ ಚಿಮಕೋಡ ಮತ್ತು ತಂಡದವರು ರಂಗಗೀತೆ, ವಿದ್ಯಾವತಿ ಮತ್ತು ತಂಡದವರು ಭಾವಗೀತೆ ಮತ್ತು ಕ್ರಾಂತಿಗೀತೆಗಳನ್ನು ಹಾಡಿದರು. ಸುಧಾಕರ ಎಲ್ಲಾನೋರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT