ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಹಿಗ್ಗಿದ ಜಿ.ಪಂ, ತಗ್ಗಿದ ತಾ.ಪಂ ಕ್ಷೇತ್ರಗಳು

ಚುನಾವಣಾ ಆಯೋಗದಿಂದ ಕ್ಷೇತ್ರಗಳ ಪುನರ್ ವಿಂಗಡಣೆ
Last Updated 12 ಫೆಬ್ರುವರಿ 2021, 14:54 IST
ಅಕ್ಷರ ಗಾತ್ರ

ಬೀದರ್: ಬರಲಿರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ ಹಿಗ್ಗಲಿದ್ದರೆ, ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ತಗ್ಗಲಿವೆ.

ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿರುವ ಕ್ಷೇತ್ರಗಳ ಪುನರ್ ವಿಂಗಡಣೆ ಪ್ರಕಾರ ಜಿಲ್ಲೆಯಲ್ಲಿ ಏಳು ಹೊಸ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಸೃಷ್ಟಿಯಾಗಲಿವೆ. ತಾಲ್ಲೂಕು ಪಂಚಾಯಿತಿಯ 19 ಕ್ಷೇತ್ರಗಳು ಕಡಿಮೆಯಾಗಲಿವೆ.ಜಿಲ್ಲೆಯಲ್ಲಿ ಸದ್ಯ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 34 ಇದ್ದು, ಇನ್ಮುಂದೆ 41ಕ್ಕೆ ಏರಿಕೆಯಾಗಲಿದೆ. ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಸಂಖ್ಯೆ 131 ರಿಂದ 112ಕ್ಕೆ ಕುಸಿಯಲಿದೆ.

ಕ್ಷೇತ್ರಗಳ ಪುನರ್ ವಿಂಗಡಣೆ ನಂತರ ಕಮಲನಗರ ತಾಲ್ಲೂಕಿನಲ್ಲಿ 4 ಜಿ.ಪಂ, 9 ತಾ.ಪಂ. ಕ್ಷೇತ್ರಗಳು, ಔರಾದ್ ತಾಲ್ಲೂಕಿನಲ್ಲಿ 5 ಜಿ.ಪಂ, 13 ತಾ.ಪಂ ಕ್ಷೇತ್ರಗಳು, ಭಾಲ್ಕಿ ತಾಲ್ಲೂಕಿನಲ್ಲಿ 7 ಜಿ.ಪಂ, 19 ತಾ.ಪಂ. ಕ್ಷೇತ್ರಗಳು, ಹುಮನಾಬಾದ್ ತಾಲ್ಲೂಕಿನಲ್ಲಿ 4 ಜಿ.ಪಂ, 11 ತಾ.ಪಂ ಕ್ಷೇತ್ರಗಳು, ಚಿಟಗುಪ್ಪ ತಾಲ್ಲೂಕಿನಲ್ಲಿ 4 ಜಿ.ಪಂ, 9 ತಾ.ಪಂ ಕ್ಷೇತ್ರಗಳು, ಬಸವಕಲ್ಯಾಣ ತಾಲ್ಲೂಕಿನಲ್ಲಿ 7 ಜಿ.ಪಂ, 19 ತಾ.ಪಂ ಕ್ಷೇತ್ರಗಳು, ಹುಲಸೂರು ತಾಲ್ಲೂಕಿನಲ್ಲಿ 2 ಜಿ.ಪಂ, 11 ತಾ.ಪಂ ಕ್ಷೇತ್ರಗಳು ಹಾಗೂ ಬೀದರ್ ತಾಲ್ಲೂಕಿನಲ್ಲಿ 8 ಜಿ.ಪಂ ಮತ್ತು 21 ತಾ.ಪಂ ಕ್ಷೇತ್ರಗಳು ಇರಲಿವೆ.

2016 ರಲ್ಲಿ ನಡೆದಿದ್ದ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 34 ಜಿಲ್ಲಾ ಪಂಚಾಯಿತಿ ಹಾಗೂ 131 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು ಇದ್ದವು. ಬೀದರ್ ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ 7, ಬಸವಕಲ್ಯಾಣ 7, ಭಾಲ್ಕಿ 6, ಔರಾದ್ 7 ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ 7 ಕ್ಷೇತ್ರಗಳಿದ್ದವು.

ಬೀದರ್ ತಾಲ್ಲೂಕಿನಲ್ಲಿ ತಾಲ್ಲೂಕು ಪಂಚಾಯಿತಿಯ 26 ಕ್ಷೇತ್ರಗಳು, ಬಸವಕಲ್ಯಾಣದಲ್ಲಿ 28, ಭಾಲ್ಕಿಯಲ್ಲಿ 24, ಔರಾದ್‍ನಲ್ಲಿ 26 ಹಾಗೂ ಹುಮನಾಬಾದ್ ತಾಲ್ಲೂಕಿನಲ್ಲಿ 27 ಕ್ಷೇತ್ರಗಳು ಇದ್ದವು.

ಜನಸಂಖ್ಯೆ ಆಧಾರದಲ್ಲಿ ಸ್ಥಾನ: ಜಿಲ್ಲಾಧಿಕಾರಿ ಕಚೇರಿಯಿಂದ ನೀಡಲಾದ ಗ್ರಾಮೀಣ ಪ್ರದೇಶದ ಜನಸಂಖ್ಯೆ ಆಧಾರದ ಮೇಲೆ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‍ರಾಜ್ ಅಧಿನಿಯಮ 1993 ರ 121 ಮತ್ತು 16 ಗಳಿಗೆ ಉಲ್ಲೇಖ (2) ಮತ್ತು (3) ರಂತೆ ಮಾಡಲಾದ ತಿದ್ದುಪಡಿ ಪ್ರಕಾರ ತಾಲ್ಲೂಕುವಾರು ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಸದಸ್ಯ ಸ್ಥಾನಗಳನ್ನು ನಿಗದಿಪಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಆರ್. ಚಂದ್ರಶೇಖರ ತಿಳಿಸಿದ್ದಾರೆ.

ಹೊಸ ಕ್ಷೇತ್ರಗಳ ರಚನೆ ವೇಳೆ ಗ್ರಾಮೀಣ ಪ್ರದೇಶಗಳನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳನ್ನು ಒಡೆಯದೆ, ಪೂರ್ಣ ಪ್ರಮಾಣದ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ರಚನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.

ತಾಲ್ಲೂಕುವಾರು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು
ತಾಲ್ಲೂಕು ಹೊಸ ಕ್ಷೇತ್ರಗಳು
ಕಮಲನಗರ 4
ಔರಾದ್(ಬಿ) 5
ಭಾಲ್ಕಿ 7
ಹುಮನಾಬಾದ್ 4
ಚಿಟಗುಪ್ಪ 4
ಬಸವಕಲ್ಯಾಣ 7
ಹುಲಸೂರು 2
ಬೀದರ್ 8
ಒಟ್ಟು 41

ತಾಲ್ಲೂಕುವಾರು ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳು
ತಾಲ್ಲೂಕು ಪುನರ್ ವಿಂಗಡಣೆ ನಂತರದ ಕ್ಷೇತ್ರಗಳು
ಕಮಲನಗರ
9
ಔರಾದ್(ಬಿ) 13
ಭಾಲ್ಕಿ 19
ಹುಮನಾಬಾದ್ 11
ಚಿಟಗುಪ್ಪ 9
ಬಸವಕಲ್ಯಾಣ 19
ಹುಲಸೂರು 11
ಬೀದರ್ 21
ಒಟ್ಟು 112

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT