ಕಮಲನಗರ: ‘ಆಧುನೀಕರಣದಿಂದ ಆರಣ್ಯ ನಾಶವಾಗುತ್ತಿದೆ. ಇದರಿಂದ ಪರಿಸರದ ಮೇಲೆ ದುಷ್ಪಾರಿಣಾಮವಾಗುತ್ತಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಠಾಣಾಕುಶನೂರ ಗೆಳೆಯರ ಬಳಗದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.
ಠಾಣಾಕುಶನೂರ ಗೆಳೆಯರ ಬಳಗದ ವತಿಯಿಂದ ಪ್ರತಿ ಭಾನುವಾರ ನಡೆಯುವ ಎರಡು ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಹೀಗಾಗಿ ಪ್ರಕೃತಿ ಮಾತೆಯ ಮಡಿಲಲ್ಲಿರುವ ನಾವು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು.
ಠಾಣಾಕುಶನೂರ ಗ್ರಾಮದ ಶ್ರೀರಾಮಚಂದ್ರ ಮಿಷನ್ ಧ್ಯಾನ ಕೇಂದ್ರದ ಆವರಣದಲ್ಲಿ ಆಲದ ಸಸಿ ನೆಡಲಾಯಿತು.
ಗೆಳೆಯರ ಬಳಗದ ಪದಾಧಿಕಾರಿಗಳಾದ ಬಂಡು ದೇಸಾಯಿ, ಗೋವಿಂದ ಲೋಣೆ, ಬಾಲಾಜಿ ವಾಘಮಾರೆ, ಮಾರುತಿ ಕೋಳಿ, ಮಾಣಿಕರಾವ ವಲ್ಲಾಪುರೆ, ಸುಂದರಾಜ, ಸೂರ್ಯಕಾಂತ ಕೋಟೆ ಹಾಗೂ ಮುಖಂಡರು ಉಪಸ್ಥಿತರಿದ್ದರು.