ಬೀದರ್: ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಈಶ್ವರ ಬಿ. ಖಂಡ್ರೆ ಅವರಿಗೆ ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಸರ್ಕಾರದಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆ ನೀಡಬೇಕೆಂದು ಬೀದರ್ ಜಿಲ್ಲಾ ಮಠಾಧೀಶರ ಒಕ್ಕೂಟ ಆಗ್ರಹಿಸಿದೆ.

ಜಿಲ್ಲೆಯ ವಿವಿಧ ಮಠಾಧೀಶರು ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಈ ಹಕ್ಕೊತ್ತಾಯ ಮಾಡಿದರು.

ಜಾತಿ, ಧರ್ಮ, ಮತ, ಪಂಥಗಳ ಭೇದವಿಲ್ಲದೆ ಸರ್ವರನ್ನೂ ಜೊತೆಗೆ ಕೊಂಡೊಯ್ಯುವ ಗುಣ ಈಶ್ವರ ಖಂಡ್ರೆ ಅವರಲ್ಲಿದೆ. ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಇದರಿಂದ ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಖಂಡ್ರೆ ಅವರ ಸದಾ ಜನಸೇವೆಯನ್ನು ಮೈಗೂಡಿಸಿಕೊಂಡು ತನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಹೀಗಾಗಿ ಲಿಂಗಾಯತ ಕೋಟಾದಲ್ಲಿ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಈಶ್ವರ ಖಂಡ್ರೆಯವರನ್ನು ಉಪಮುಖ್ಯಮಂತ್ರಿ ಮಾಡಿದರೆ ಬೀದರ್ ಜಿಲ್ಲೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗುತ್ತವೆ. ಬೀದರ್ ಜಿಲ್ಲೆಗೂ ಹೆಚ್ಚು ಪ್ರಾತಿನಿಧ್ಯ ದೊರಕಿದಂತಾಗುತ್ತದೆ ಎಂದರು.

ಬೀದರ್ ಜಿಲ್ಲೆಗೆ ಖಂಡ್ರೆ ಮತ್ತು ನಾಗಮಾರಪಳ್ಳಿ ಸೇರಿದಂತೆ ಹಲವರ ಕೊಡುಗೆ ಅಪಾರವಾಗಿದೆ. ಅದರಲ್ಲೂ ಸಚಿವ ಈಶ್ವರ ಖಂಡ್ರೆಯವರು ಸರ್ವಸಮಾಜವನ್ನು ಪ್ರತಿನಿಧಿಸುವ ಧೀಮಂತ ನಾಯಕರಾಗಿದ್ದಾರೆ. ಅವರಿಗೆ ಡಿಸಿಎಂ ಮಾಡುವುದರ ಮೂಲಕ ಈ ಭಾಗದ ಏಳಿಗೆಗೆ ನಾಂದಿ ಹಾಡಬೇಕು ಎಂದು ಆಗ್ರಹಿಸಿದರು.

ಹಲಬರ್ಗಾ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಬೀದರ್ ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ,

ಮುಚಳಂಬ ಪ್ರಣವಾನಂದ ಸ್ವಾಮೀಜಿ, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಹಿರೇನಾಗಾಂವ ಜಯಶಾಂತಲಿಂಗ ಸ್ವಾಮೀಜಿ, ಹುಡಗಿ ಚನ್ನಮಲ್ಲ ಸ್ವಾಮೀಜಿ, ಕಿಟ್ಟಾ ಸಿದ್ದೇಶ್ವರ ಶಿವಾಚಾರ್ಯರು, ಸಿಂಧನಕೇರಾ ಹೊನ್ನಲಿಂಗ ಸ್ವಾಮೀಜಿ, ಲಾಡಗೇರಿ ಗಂಗಾಧರ ಶಿವಾಚಾರ್ಯರು, ಯದಲಾಪುರ ಶಿವಶಂಕರ ಸ್ವಾಮೀಜಿ, ಸದಲಾಪುರ ಸಿದ್ಧಲಿಂಗ ಸ್ವಾಮೀಜಿ, ಸೊಂತ ಶಿವಕುಮಾರ ಸ್ವಾಮೀಜಿ, ಖೇಳಗಿ ಶಾಂತಲಿಂಗ ಸ್ವಾಮೀಜಿ, ಮರಕುಂದಾ ಶರಣಕುಮಾರ ದೇವರು, ಬೀದರ್ ಪ್ರಭುಕುಮಾರ ಸ್ವಾಮೀಜಿ, ಖಟಕ ಚಿಂಚೋಳಿ ಬಸವಲಿಂಗದೇವರು, ಸಿದ್ಧಬಸವ ಸ್ವಾಮೀಜಿ, ಚಿಲ್ಲರ್ಗಿ ಗುರುಪಾದ ಸ್ವಾಮೀಜಿ, ಮಂಠಾಳ ಚನ್ನಬಸವ ಸ್ವಾಮೀಜಿ, ಚಿಟಗುಪ್ಪ ಮರುಳಾರಾಧ್ಯ ಸ್ವಾಮೀಜಿ, ಬೇಮಳಖೇಡ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.