ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌| ಅಬಕಾರಿ ದಾಳಿ: ₹ 1.44 ಲಕ್ಷ ಮೌಲ್ಯದ ಮದ್ಯ ವಶ

Last Updated 19 ಮಾರ್ಚ್ 2023, 16:16 IST
ಅಕ್ಷರ ಗಾತ್ರ

ಬೀದರ್‌: ಅಬಕಾರಿ ಇಲಾಖೆಯ ಸಿಬ್ಬಂದಿ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿ ನಾಲ್ಕು ಪ್ರಕರಣಗಳಲ್ಲಿ ₹ 1,44,521 ಮೌಲ್ಯದ ಬಿಯರ್, ಕಲಬೆರಕೆ ಸೇಂದಿ ಹಾಗೂ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೀದರ್‌ ನಗರದ ಚಿದ್ರಿ ಕ್ರಾಸ್‌ನಲ್ಲಿ ದ್ವಿಚಕ್ರವಾಹನದಲ್ಲಿ ಹೊರಟಿದ್ದ ಸೂರ್ಯಾಕಾಂತ ಸಂಪ್ರೆ ಎನ್ನವರನ್ನು ಬಂಧಿಸಿ ₹ 35,444 ಮೌಲ್ಯದ 60.120 ಲೀಟರ್‌ ಮದ್ಯ ಹಾಗೂ 23.400 ಲೀಟರ್‌ ಬಿಯರ್ ವಶಪಡಿಸಿಕೊಂಡಿದ್ದಾರೆ.

ಔರಾದ್ ಪಟ್ಟಣದಲ್ಲಿ ದ್ವಿಚಕ್ರವಾಹನ ಸವಾರರನ್ನು ತಡೆದು ಪರಿಶೀಲಿಸಿದಾಗ ಕಪ್ಪು ಬಣ್ಣದ 8 ಪ್ಲಾಸ್ಟಿಕ್ ಕವರ್‌ನಲ್ಲಿ ಕಲಬೆರಕೆ ಸೇಂದಿ ಪತ್ತೆಯಾಗಿದೆ. ಆರೋಪಿಗಳಾದ ಔರಾದ್‌ನ ಪ್ರಭು ವಿಶ್ವನಾಥ ಕೋಳಿ ಹಾಗೂ ಸಾಯಿನಾಥ ವೈಜಿನಾಥ ಉಪ್ಪರ ಎನ್ನುವರನ್ನು ಬಂಧಿಸಿ ಕಲಬೆರೆಕೆ ಸೇಂದಿ ವಶಪಡಿಸಿಕೊಳ್ಳಲಾಗಿದೆ.

ಬಸವಕಲ್ಯಾಣ ತಾಲ್ಲೂಕಿನ ಲಾಡವಂತಿ ಗ್ರಾಮದ ಜೈ ಭವಾನಿ ಚೈನಿಸ್ ಸೇಂಟರ್ ಮೇಲೆ ದಾಳಿ ನಡೆಸಿ ಅಬಕಾರಿ ಸಿಬ್ಬಂದಿ ₹ 19,982 ಮೌಲ್ಯದ 28.620 ಲೀ ಮದ್ಯ ಹಾಗೂ ₹ 2,595 ಮೌಲ್ಯದ ಬಿಯರ್ ವಶಪಡಿಸಿಕೊಂಡಿದ್ದಾರೆ. ಲಾಡವಂತಿಯ ನಾಗೇಂದ್ರ ವೆಂಕಟರಾವ್ ಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ರವೀಂದ್ರ ಪಾಟೀಲ್ ನಾನಾಗೌಡ ಪಾಟೀಲ, ದೌಲತ್ ರಾಯ್, ಸಿಬ್ಬಂದಿ ಧೋನಿ ಶೆಡ್ರಿಕ್ ಶಿವಶಂಕರ್ ವಿಷ್ಣುವರ್ಧನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT