ಗುರುವಾರ , ಜುಲೈ 7, 2022
20 °C
ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಸುಭಾಷ ರಗಟೆ ಅಭಿಮತ

ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಅಗತ್ಯ: ಸುಭಾಷ ರಗಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ‘ರೈತರ ಬೆಳೆಗಳಿಗೆ ಸರ್ಕಾರ ವೈಜ್ಞಾನಿಕ ಬೆಲೆ ನಿಗದಿಗೊಳಿಸುವುದು ಅತ್ಯಂತ ಅವಶ್ಯಕವಾಗಿದೆ’ ಎಂದು ರೈತ ಸಂಘದ ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಸುಭಾಷ ರಗಟೆ ಹೇಳಿದ್ದಾರೆ.

ತಾಲ್ಲೂಕಿನ ಹಿರೇನಾಗಾಂವದಲ್ಲಿ ರೈತ ಮುಖಂಡ ಬಸವರಾಜ ತಂಬಾಕೆ ಅವರ ಜನ್ಮದಿನದ ಪ್ರಯುಕ್ತ ರೈತ ಸಂಘದಿಂದ ಆಯೋಜಿಸಲಾಗಿದ್ದ ಕೃಷಿ ಕೃತ್ಯ ಕಾಯಕದ ಚಿಂತನಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬರೀ ಒಂದೇ ಬೆಳೆ ಬೆಳೆದರೆ ಸಾಲದು. ಮಿಶ್ರ ಬೆಳೆ ಬೆಳೆದರೆ ರೈತರಿಗೆ ಉಳಿಗಾಲವಿದೆ. ಇಳುವರಿ ಹೆಚ್ಚಳಕ್ಕೆ ಆಧುನಿಕ ಕೃಷಿ ಪದ್ಧತಿ ಅಳವಡಿಕೆಯೂ ಅಗತ್ಯವಾಗಿದೆ’ ಎಂದರು.

‘ರಾಜ್ಯದಲ್ಲಿನ ರೈತರ ಸಮಸ್ಯೆಗಳಿಗಾಗಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ, ಕೆ.ಎಸ್.ಪುಟ್ಟಣ್ಣಯ್ಯ, ಬಸವರಾಜ ತಂಬಾಕೆ, ಪ್ರಕಾಶ ರಾಜೇಶ್ವರ, ಮಡಿವಾಳಪ್ಪ ಅವರು ನಿರಂತರವಾಗಿ ಹೋರಾಟ ಮಾಡಿರುವುದನ್ನು ಸ್ಮರಿಸಬಹುದು. ಇವರೆಲ್ಲರ ಬದುಕು ಕೃಷಿ ಕಾಯಕದವರಿಗೆ ಪ್ರೇರಣೆಯಾಗಿದೆ’ ಎಂದರು.

ಜಯಪ್ರಕಾಶ ಸದಾನಂದೆ ಮಾತನಾಡಿ, ‘ರೈತರು ಸಂಘಟಿತರಾಗಿ ಹಾಗೂ ಜಾಗೃತರಾಗಿದ್ದರೆ ಮಾತ್ರ ಉಳಿಗಾಲವಿದೆ’ ಎಂದರು.

ನಾಗಶೆಟ್ಟಿ ಪಂಢರಗೇರಾ ಮಾತನಾಡಿ,‘ರಾಸಾಯನಿಕ ಬಳಕೆಯಿಂದ ಮನುಷ್ಯನ ಆರೋಗ್ಯದ ಜತೆಗೆ ಜಮೀನಿನ ಆರೋಗ್ಯವೂ ಕೆಡುತ್ತಿದೆ. ಆದ್ದರಿಂದ ಸಾವಯವ ಕೃಷಿಗೆ ಮಹತ್ವ ನೀಡಬೇಕು’ ಎಂದು ಹೇಳಿದರು.

ಹಿರಿಯರಾದ ರಾಮ ಮಜಗೆ, ಶರಣಪ್ಪ ಧನ್ನೂರ, ಶಂಭುಲಿಂಗ ದೇವಕರ್, ವಿಠಲ್ ಸೋನಾರ, ಶರಣು ಸಾಹು, ಅರುಣಕುಮಾರ, ಚಂದ್ರಕಾಂತ ಮಾಸ್ತರ್, ಶೇಖರ, ರಾಹುಲ್, ಗುಂಡಪ್ಪ ಕುದಮೂಡ, ಶರಣಪ್ಪ ರಾಮಬಾಣ, ಹಣಮಂತ ಬಿರಾದಾರ, ಬಾಬುರಾವ ಹಾಗೂ ಇತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು