ಬುಧವಾರ, ಜುಲೈ 28, 2021
21 °C
ಕೈಕಟ್ಟಿ ಕುಳಿತ ಅಧಿಕಾರಿಗಳು

ಸೋಯಾಬೀನ್‌ಗೆ ಹೆಚ್ಚಿದ ಬೇಡಿಕೆ: ಬಿತ್ತನೆ ಬೀಜಕ್ಕಾಗಿ ರೈತರ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಉತ್ತಮ ಮಳೆ ಸುರಿದು ಬಿತ್ತನೆ ಆರಂಭವಾದರೂ ತಾಲ್ಲೂಕಿನ ರೈತರಿಗೆ ಸೋಯಾಬೀನ್ ಬಿತ್ತನೆ ಬೀಜದ ಕೊರತೆ ಆಗಿದೆ. ರೈತರು ಬಿತ್ತನೆ ಬೀಜಕ್ಕಾಗಿ ಹಗಲು ರಾತ್ರಿ ಎನ್ನದೇ ಬೀಜ ವಿತರಣೆ ಕೇಂದ್ರದ ಮುಂದೆ ಚೀಟಿ ಪಡೆಯಲು ಸರತಿಯಲ್ಲಿಯೇ ಜಾಗರಣೆ ಮಾಡುವುದು ಮುಂದುವರೆದಿದೆ.

ಕಮಲನಗರ ತಾಲ್ಲೂಕಿಗೆ 9000 ಕ್ವಿಂಟಲ್ ಬೀಜದ ಬೇಡಿಕೆ ಇತ್ತು. ಇಲಾಖೆ ರೈತ ಸಂಪರ್ಕ ಕೇಂದ್ರಕ್ಕೆ ಮೊದಲ ಹಂತದಲ್ಲಿ 5400 ಕ್ವಿಂಟಲ್ ಬೀಜ ಪೊರೈಸಿದೆ. ಎಲ್ಲ ಉಪಕೇಂದ್ರ ಅಥವಾ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಸ್ಥಾಪಿಸಿದ ವಿತರಣೆ ಕೇಂದ್ರದಲ್ಲಿ ನಿಗದಿಪಡಿಸಿದ ದಿನಾಂಕಗಳ ಮೊದಲೇ ಬೀಜ ಕೊರತೆಯಾಗಿದೆ. ಇನ್ನೂ 3600 ಕ್ವಿಟಂಲ್ ಬೀಜದ ಅವಶ್ಯಕತೆ ಇದೆ.

ಎಲ್ಲೆಲ್ಲಿ ಕೊರತೆ: ತಾಲ್ಲೂಕಿನ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಬಾಲೂರು, ಮುರ್ಗ(ಕೆ), ಹೊಳಸಮುದ್ರ, ಖೇಡ್, ಹುಲಸೂರು, ಸೋನಾಳ, ದಾಬಕಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಮುತಖೇಡ್, ಚೌಂಡಿ ಮುಖ್ಖೇಡ್, ಗಂಗನಬಿಡ್, ಠಾಣಾಕುಶನೂರು ರೈತ ಸಂಪರ್ಕ ವ್ಯಾಪ್ತಿಯ ಕೊರೆಕಲ್, ಮುಧೋಳ(ಬಿ), ಠಾಣಾಕುಶನೂರು.ಮುಧೋಳ ರೈತ ಸಂಪರ್ಕ ಕೇಂದ್ರದ ಮುಧೋಳ(ಕೆ).

‘ಕಮಲನಗರ ಮತ್ತು ಔರಾದ್ ತಾಲ್ಲೂಕು ಸೇರಿ ಒಟ್ಟು 34 ಸಾವಿರ ಕ್ವಿಟಂಲ್ ಬೇಡಿಕೆಗೆ 28,000 ಕ್ವಿಂಟಲ್ ಬೀಜ ಬಂದಿದೆ. ಇನ್ನೂ 6000 ಕ್ವಿಂಟಲ್ ಬೀಜ ಕೊರತೆ ಇದೆ’ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

‘ಸೋಯಾಬೀನ್‌ ಬೀಜದ ಬೇಡಿಕೆ ಜಾಸ್ತಿಯಾಗಿದೆ. ಕಮಲನಗರ ವ್ಯಾಪ್ತಿಯ ಗ್ರಾಮಗಳಲ್ಲಿ ಶೇ70 –80ರಷ್ಟು ಬೀಜ ಪೂರೈಕೆಯಾಗಿದೆ’ ಎಂದು ಸಹಾಯಕ ಕೃಷಿ ಅಧಿಕಾರಿ ಇಂದಿರಾ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು