ಸೋಮವಾರ, ಆಗಸ್ಟ್ 8, 2022
22 °C

ಕಮಲನಗರ: ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ರೈತರು ಮುಂಗಾರು ಹಂಗಾಮು ಬೀಜ ಪಡೆಯಲು ನಿತ್ಯ ರೈತ ಸಂಪರ್ಕ ವಿತರಣೆ ಕೇಂದ್ರಗಳಿಗೆ ಪರದಾಡುವಂತಾಗಿದೆ.

ಶುಕ್ರವಾರ ಕಮಲನಗರ ತಾಲ್ಲೂಕಿನ ಬೆಳಕುಣಿ(ಬಿ) ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಸೋಯಾ, ಉದ್ದು ಬೀಜ ಪಡೆಯಲು ಮುಗಿಬಿದ್ದಿರುವುದು ಕಂಡು ಬಂತು.

ಹಗಲು ರಾತ್ರಿ ಎನ್ನದೆ ಬೀಜ ಪಡೆಯಲು ಪರದಾಡುವುದು ಮುಂದುವರಿದಿದೆ. ಕೆಲ ರೈತರು ರಾತ್ರಿ ಹೊತ್ತಿನಲ್ಲೂ ಹಾಸಿಗೆ ಹಿಡಿದು ಕೊಂಡು ಬಂದು ಕೇಂದ್ರ ಸ್ಥಾನ ಹೊರವಲಯದಲ್ಲಿಯೇ ಬೀಡು ಬಿಟ್ಟಿದ್ದಾರೆ.

ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ಕೇಂದ್ರ-ರಾಜ್ಯ ಸರ್ಕಾರದ ಮೊದಲ ಕಂತಿನ ಹಣ ಬಿಡುಗಡೆ ಆಗಿದೆ. ಈ ಹಣ ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಹಣ ಪಡೆಯಲು ಕೂಡ ಬ್ಯಾಂಕ್‍ಗಳ ಮುಂದೆ ರೈತರ ಸಾಲು ನಿತ್ಯ ಕಂಡು ಬರುತ್ತಿದೆ.

ಈಗಾಗಲೇ ಮುಂಗಾರು ಬಿತ್ತನೆಗೆ ರೈತರು ಸಿದ್ಧವಾಗಿದ್ದು, ಬೀಜಗೊಬ್ಬರ ಖರೀದಿಗೆ ಹಣದ ಅವಶ್ಯಕತೆ ಇದೆ. ತಮ್ಮ ಖಾತೆಯಲ್ಲಿ ಹಣವಿದ್ದರೂ ರೈತರಿಗೆ ಲಾಕ್ ಡೌನ್ ಸಂಕಷ್ಟ ತಂದೊಡ್ಡಿದೆ. ಹಣ ಪಡೆಯಲು ಬಂದರೆ ಪಟ್ಟಣದಲ್ಲಿ ಪೊಲೀಸರ ಕಾಟ ತಪ್ಪಿಸಿಕೊಳ್ಳಲಾಗುತ್ತಿಲ್ಲ. ದಂಡ ತಪ್ಪಿದ್ದಲ್ಲ. ದಂಡ ತುಂಬಿ ಮತ್ತೇ ರೈತ ಸಂಪರ್ಕ ಕೇಂದ್ರ ಮುಂದೆ ಸರದಿಯಲ್ಲಿ ನಿಲ್ಲುವುದು ಕೂಡ ತಪ್ಪುತ್ತಿಲ್ಲ ಎನ್ನುತ್ತಾರೆ ರೈತರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು