ಗುರುವಾರ , ಡಿಸೆಂಬರ್ 3, 2020
24 °C

ಕೋವಿಡ್‌ ವಾರಿಯರ್‌ಗಳಿಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ನಿತ್ಯ ಮನೆಯ ಮುಂದೆ ನಗರಸಭೆಯ ವಾಹನದಲ್ಲಿ ಬರುವ ಪೌರಕಾರ್ಮಿಕರಿಗೆ ಘನತ್ಯಾಜ್ಯ ಕೊಟ್ಟು ನಗರದಲ್ಲಿ ಸ್ವಚ್ಛತೆ ಕಾಪಾಡಬೇಕು’ ಎಂದು ಜೈ ಶ್ರೀರಾಮ ಚಾರಿಟಬಲ್ ಸಂಸ್ಥೆಯ ಉಪಾಧ್ಯಕ್ಷ ಶ್ರೀಕಾಂತ ಪಾಟೀಲ ಹೇಳಿದರು.

ಇಲ್ಲಿಯ ವಿದ್ಯಾನಗರ ಬಡಾವಣೆಯಲ್ಲಿ ಆಯೋಜಿಸಿದ್ದ ಕೋವಿಡ್‌ ವಾರಿಯರ್‌ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪೊಲೀಸ್ ಮಾತನಾಡಿ, ‘ಪೌರ ಕಾರ್ಮಿಕರ ಸೇವೆ ಅನನ್ಯವಾಗಿದೆ. ಪ್ರತಿಯೊಬ್ಬರು ಪೌರಕಾರ್ಮಿಕರನ್ನು ಗೌರವಿಸಬೇಕು’ ಎಂದು ಹೇಳಿದರು.

ಮೇಲ್ವಿಚಾರಕ ವಿನೋದಕುಮರ ಬಾಬುರಾವ್, ಸಿದ್ರಾಮ ನದಶೆಟ್ಟಿ, ವಾಹನ ಚಾಲಕ ಪ್ರಸಾದ ಶಿರೋಮಣಿ, ಪ್ರವೀಣಕುಮಾರ, ಪೌರಕಾರ್ಮಿಕರಾದ ಗಣೇಶ ರೋಶನ್, ಅರ್ಜುನ್ ರೋಶನ, ಪ್ರಕಾಶ ಸದಾಶಿವ, ರಾಜಕುಮಾರ ನರಸಪ್ಪ, ಸಂಜುಕುಮಾರ ಮಹಾದೇವ, ಎಲೆಕ್ಟ್ರೀಶನ್ ಪ್ರಭುರಾವ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಸಂಸ್ಥೆಯ ಮೊಹನ ನರಸಿಂಗರಾವ್, ಮಹೇಶ ಎಂಜಿನಿಯರ್, ಪ್ರಭಾಕರ್ ಜಟ್ಲಾ, ಸಂಜುರೆಡ್ಡ, ಪ್ರಭು ಆಲೂರೆ, ರಾಜಶೇಖರ ಗದ್ದೆ, ರಾಚಪ್ಪ ಪಾಟೀಲ, ಜಗದೀಶ ಜಟ್ಲಾ, ಜಗದೀಶ ರಗಟೆ, ರಾಜು ಡಿ.ಜೆ. ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.