ಬುಧವಾರ, ಜೂನ್ 29, 2022
26 °C

ಮಲ್ಕಾಪುರೆಗೆ ಶಾಸಕ ಕಾಶೆಂಪುರ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ವಿಧಾನ ಪರಿಷತ್ ಹಂಗಾಮಿ ಸಭಾಪತಿಯಾಗಿ ನೇಮಕಗೊಂಡ ರಘುನಾಥರಾವ್ ಮಲ್ಕಾಪುರೆ ಅವರನ್ನು ಬೀದರ್ ದಕ್ಷಿಣ ಶಾಸಕ ಬಂಡೆಪ್ಪ ಕಾಶೆಂಪುರ ನಗರದಲ್ಲಿ ಸನ್ಮಾನಿಸಿದರು.

ನಗರದ ಮಲ್ಕಾಪುರೆ ಅವರ ನಿವಾಸಕ್ಕೆ ಭೇಟಿ ನೀಡಿದ ಕಾಶೆಂಪುರ ಅವರು ಮಲ್ಕಾಪುರೆ ಅವರಿಗೆ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಶಾಸಕ ರಹೀಂಖಾನ್, ಮಹೇಶ ಚಿಂತಾಮಣಿ ಇದ್ದರು.

ಸಾಹಿತ್ಯ ಸಂಘದಿಂದ ಮಲ್ಕಾಪುರೆಗೆ ಸನ್ಮಾನ:

ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರನ್ನು ಸನ್ಮಾನಿಸಲಾಯಿತು.

ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಜಗನ್ನಾಥ ಹೆಬ್ಬಾಳೆ ಅವರು ಮಲ್ಕಾಪುರೆ ಅವರಿಗೆ ಶಾಲು ಹೊದಿಸಿ ಅಭಿನಂದಿಸಿದರು.

ಪ್ರೊ. ಎಸ್.ಬಿ.ಬಿರಾದಾರ, ನಿಜಲಿಂಗಪ್ಪ ತಗಾರೆ, ರಾಜಕುಮಾರ ಹೆಬ್ಬಾಳೆ, ಜಗನ್ನಾಥ ಪಾರಾ, ಅಶೋಕ ಎಲಿ, ಪ್ರೊ.ಎಸ್.ವಿ.ಕಲ್ಮಠ, ವಿ.ಎಂ.ಡಾಕುಳಗಿ, ಗಂಗಪ್ಪ ಸಾವಲೆ, ಶಾಂತಕುಮಾರ ಪಾಟೀಲ, ವೀರಭದ್ರಪ್ಪ ಉಪ್ಪಿನ್, ಪ್ರೊ. ರಾಜೇಂದ್ರ ಬಿರಾದಾರ, ಉಮಾಕಾಂತ ಪಾಟೀಲ, ಸಾವಿತ್ರಿಬಾಯಿ ಹೆಬ್ಬಾಳೆ, ಮಲ್ಲಮ್ಮ ಸಂತಾಜಿ, ಸುನೀತಾ ಕೂಡ್ಲಿಕರ್, ಬಸಯ್ಯ ಸ್ವಾಮಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಧನರಾಜ ಆನೆಕಲೆ, ಎಸ್.ಬಿ.ಕುಚಬಾಳ, ಸಂಜೀವಕುಮಾರ ಸ್ವಾಮಿ ಇದ್ದರು.

ನೌಕರರ ಸಂಘದಿಂದ ಸತ್ಕಾರ:

ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರನ್ನು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೀದರ್ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಸನ್ಮಾನಿಸಿದರು.

ಸಂಘದ ಕಾರ್ಯಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ, ಉಪಾಧ್ಯಕ್ಷರಾದ ಬಕ್ಕಪ್ಪ ನಿರ್ಣಾಕರ್, ಪಾಂಡುರಂಗ ಬೆಲ್ದಾರ್, ಸಹ ಕಾರ್ಯದರ್ಶಿ ಮನೋಹರ ಕಾಶಿ, ಪ್ರಚಾರ ಕಾರ್ಯದರ್ಶಿ ಸಂಜೀವ್ ಸೂರ್ಯವಂಶಿ, ರಾಜೇಂದ್ರ ಜೊನ್ನಿ ಕೇರಿ, ಮಲ್ಲಿಕಾರ್ಜುನ ಪಂಚಾಕ್ಷರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.