ಗುರುವಾರ , ಡಿಸೆಂಬರ್ 12, 2019
17 °C

ಗುಜರಿ ಅಂಗಡಿ ಬೆಂಕಿ: ಅಪಾರ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೀದರ್: ನಗರದ ಹೈದರಾಬಾದ್‌ ರಸ್ತೆಯ ಬದಿಯಲ್ಲಿರುವ ಗೃಹ ಬಳಕೆ ಸಾಮಗ್ರಿಗಳ ಗುಜರಿ ಅಂಗಡಿಗೆ ಭಾನುವಾರ ಸಂಜೆ ಬೆಂಕಿ ಹತ್ತಿಕೊಂಡು ಅಪಾರ ಹಾನಿಯಾಗಿದೆ.

ಸಂಜೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಅಂಗಡಿ ತುಂಬ ಆವರಿಸಿಕೊಂಡಿತು. ಗಾಬರಿಗೊಂಡ ಸ್ಥಳೀಯರು ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದರು.

ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಷ್ಟರಲ್ಲಿ ಅಂಗಡಿಯಲ್ಲಿದ್ದ ಕುರ್ಚಿ, ಟೇಬಲ್, ಗ್ಲಾಸ್, ಎಲ್ ಸಿಡಿ ಟಿವಿ, ಸೌಂಡ್ ಬಾಕ್ಸ್‌ಗಳು ಸುಟ್ಟು ಕರಕಲಾಗಿದ್ದವು. ಮಾರ್ಕೆಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪ್ರತಿಕ್ರಿಯಿಸಿ (+)