ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನಪದ ದೇಶದ ಸಂಸ್ಕೃತಿಯ ಪ್ರತಿಬಿಂಬ: ಡಾ. ಕಲ್ಲಪ್ಪ ಉಪ್ಪೆ ಅಭಿಮತ

Last Updated 26 ಸೆಪ್ಟೆಂಬರ್ 2021, 4:00 IST
ಅಕ್ಷರ ಗಾತ್ರ

ಔರಾದ್: ‘ಭಾರತ ಅನನ್ಯ ಭೌಗೋಳಿಕ ‌ರಚನೆ, ವೈವಿಧ್ಯಮಯ ಜನಸಮುದಾಯ, ವಿಭಿನ್ನ ಆಚರಣೆಗಳು ಇಡೀ ಜಗತ್ತಿಗೆ ಮಾದರಿ’ ಎಂದು ಜಾನಪದ ಹಬ್ಬದ ಸರ್ವಾಧ್ಯಕ್ಷ ಡಾ. ಕಲ್ಲಪ್ಪ ಉಪ್ಪೆ ಹೇಳಿದರು.

ಸಂಸ್ಕೃತಿ ಸಚಿವಾಲಯ ಹಾಗೂ ಜಾನಪದ ಪರಿಷತ್ ಸಹಯೋಗದಲ್ಲಿ ಸಂತಪುರನಲ್ಲಿ ಶನಿವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಭಾರತದ ಮೂಲ ಸಂಸ್ಕೃತಿ ಜಾನಪದದಲ್ಲಿ ಅಡಗಿದೆ. ಅದು ಗ್ರಾಮೀಣ ಪ್ರದೇಶದಲ್ಲಿ ಈಗಲೂ ವಿಜೃಂಭಿಸುತ್ತಿದೆ. ಇದು ನಮಗೆ ಹೆಮ್ಮೆಯ ಸಂಗತಿ’ ಎಂದು ಹೇಳಿದರು.

‘ಪಾಶ್ಚಿಮಾತ್ಯ ಸಂಸ್ಕೃತಿಗೆ ಹೋಲಿಸಿದರೆ ನಮ್ಮ ಸಂಸ್ಕೃತಿ ಮೌಲ್ಯಯುತವಾಗಿದೆ. ಮಾನವೀಯ ಮೌಲ್ಯಗಳು ಅಡಗಿವೆ. ಈ ಕಾರಣ ಜಗತ್ತಿನ ಅನೇಕ ದಾರ್ಶನಿಕರು ಇಲ್ಲಿಯ ಸಂಸ್ಕೃತಿ ಹಾಡಿ ಹೊಗಳಿದ್ದಾರೆ’ ಅವರು ಎಂದು ತಿಳಿಸಿದರು.

ಸಾನಿಧ್ಯ ವಹಿಸಿದ ಭಾಲ್ಕಿ ಮಠದ ಗುರುಬಸವ ಪಟ್ಟದ್ದೆವರು, ‘ಜಾನಪದ ಕಲೆ ಮತ್ತು ಕಲಾವಿದರು ಉಳಿಯಬೇಕು. ಒತ್ತಡದ ಬದುಕಿಗೆ ಜಾನಪದ ಮುಕ್ತಿ ನೀಡುತ್ತದೆ. ಯುವ ಪೀಳಿಗೆಗೆ ಜಾನಪದ ಮೌಲ್ಯ ಹೇಳಿಕೊಡಬೇಕು' ಎಂದರು.

ಅಧ್ಯಕ್ಷತೆ ವಹಿಸಿದ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯ ಬಂಡೆಪ್ಪ ಕಂಟೆ ಮಾತನಾಡಿ ‘ಆಧುನಿಕ ಜಗತ್ತಿನಲ್ಲೂ ಭಾರತೀಯ ಜಾನಪದ ಕಲೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವುದು ಹೆಮ್ಮೆಯ ಸಂಗತಿ’ ಎಂದರು.

ಪಟ್ಟಣ ಪಂಚಾಯತಿ ಅಧ್ಯಕ್ಷೆ ಅಂಬಿಕಾ ಪವಾರ್, ಗ್ರಾಮ ಪಂಚಾಯತಿ ಅಧ್ಯಕ್ಷ ಅನಿಲ ದೊಡ್ಡಮನಿ, ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಸೂರ್ಯಕಾಂತ ಅಲ್ಮಾಜೆ, ಡಾ.ಮಹೇಶ ಬಿರಾದಾರ, ರಾಮಶೆಟ್ಟಿ ಪನ್ನಾಳೆ, ಶರಣಪ್ಪ ಚಿಟ್ಮೆ, ಸಾಯಿಕುಮಾರ ಘೋಡ್ಕೆ, ಗಣಪತಿ ದೇಶಪಾಂಡೆ, ಅನೀಲ ಜಿರೋಬೆ, ಶಿವಕುಮಾರ ಪಾಂಚಾಳ ಇದ್ದರು. ಜಾನಪದ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಾಜಕುಮಾರ ಹೆಬ್ಬಳೆ ಸ್ವಾಗತಿಸಿದರು. ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೂರ್ಯಕಾಂತ ಸಿಂಗೆ ನಿರೂಪಿಸಿದರು.

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಶಿವಲಿಂಗ ಹೇಡೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಪ್ರಶಸ್ತಿ ಪಡೆದ ಮಲ್ಲಿಕಾರ್ಜುನ ಟಂಕಸಾಲೆ, ನಂದಾದೀಪ ಬೋರಾಳೆ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT