ಗುರುವಾರ , ಜೂನ್ 30, 2022
23 °C
ಅರಣ್ಯ ಪ್ರದೇಶದಲ್ಲಿ ಬತ್ತಿದ ಜಲಮೂಲಗಳು: ನೀರಿನ ತೊಟ್ಟಿ ನಿರ್ಮಾಣ

ದಾಹ ನೀಗಿಸುವ ಅರಣ್ಯ ಇಲಾಖೆ

ವೀರೇಶ್‌ ಎನ್.ಮಠಪತಿ Updated:

ಅಕ್ಷರ ಗಾತ್ರ : | |

Prajavani

ಚಿಟಗುಪ್ಪ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ದೇವಗಿರಿ, ಭಾದ್ಲಾಪುರ್‌, ಕರಕನಳ್ಳಿ, ಚಾಂಗಲೇರಾ ಪ್ರದೇಶಗಳಲ್ಲಿಯ ಅರಣ್ಯ ಪ್ರದೇಶದಲ್ಲಿ ಬಹುತೇಕ ಗಿಡ ಮರಗಳು ಉರಿ ಬಿಸಿಲಿಗೆ ಒಣಗಿ ಎಲೆಗಳು ಉದುರಿ ನಿಂತಿವೆ ಎಲ್ಲೆಲ್ಲೂ ಬಿಸಿಲಿನ ತಾಪ ಹೆಚ್ಚಾಗಿದೆ.

ವನ್ಯಜೀವಿಗಳು ಆಹಾರ ಹಾಗೂ ನೀರು ಹುಡುಕಿಕೊಂಡು ಜನವಸತಿ ಪ್ರದೇಶಗಳತ್ತ ಸಂಚರಿಸಲಾರಂಭಿಸಿವೆ. ತಾಲ್ಲೂಕಿನ ನಿರ್ಣಾ ಗ್ರಾಮದಿಂದ ವಾಡಿ ಗೆ ಹೋಗುವ ರಸ್ತೆಯಲ್ಲಿ ರಾತ್ರಿ ಮೇಲಿಂದ ಮೇಲೆ ಚಿರತೆಯ ಮರಿಗಳು ಸಂಚರಿಸುತ್ತಿರುವುದು ನಾಗರಿಕರು ಕಂಡು ಭಯಭೀತರಾಗಿದ್ದಾರೆ. ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೂ ತರಲಾಗಿದೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಡಿ ಗ್ರಾಮದ ಶರಣಪ್ಪ ತಿಳಿಸಿದ್ದಾರೆ.

ದೇವಗಿರಿ ಅರಣ್ಯ ಪ್ರದೇಶದ ಮಧ್ಯದಲ್ಲಿ ಹರಿಯುತ್ತಿರುವ ಹಳ್ಳ ಸಂಪೂರ್ಣವಾಗಿ ಬತ್ತಿದೆ ಇಲ್ಲಿಯ ಬಹುತೇಕ ಸಣ್ಣ ಪ್ರಾಣಿಗಳು ಬಾಯಾರಿಕೆ ತಣಿಸಿಕೊಳ್ಳಲು ಇದೊಂದು ಹಳ್ಳ ಆಸರೆಯಾಗಿತು ಆದರೆ ನೀರು ಇಲ್ಲದಕ್ಕೆ ಕಾಡು ಪ್ರಾಣಿಗಳು, ಕೊಡಂಗಿಗಳು ನಾಡಿನತ್ತ ಸಂಚರಿಸುತ್ತಿವೆ. ಸುತ್ತಲಿನ ಹೊಲಗದ್ದೆಗಳಿಗೆ ತಂಡೋಪತಂಡವಾಗಿ ಸಂಚರಿಸಿ ಬೆಳೆ ತಿನ್ನುತ್ತಿವೆ. ಇದರಿಂದ ರೈತರು ಸಂಕಷ್ಟಪಡುವಂತಾಗಿದೆ.

ಕರಕನಳ್ಳಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನಿರ್ಮಿಸಲಾದ ಚೆಕ್ಕ್‌ ಡ್ಯಾಮ್‌ ನಲ್ಲಿ ನೀರು ಸಂಗ್ರಹ ಲಭ್ಯತೆ ಇಲ್ಲದಿರುವುದರಿಂದ ಅಲ್ಲಿಯ ಕಾಡು ಪ್ರಾಣಿ, ಪಕ್ಷಿಗಳಿಗೆ ಪರ್ಯಾಯ ವ್ಯವಸ್ತೆ ಮಾಡುವ ಕಾರ್ಯ ಅರಣ್ಯ ಇಲಾಖೆ ಸಿಬ್ಬಂದಿ ಮಾಡಬೇಕಿದೆ.

ಸದ್ಯ ತಾಲ್ಲೂಕು ಅರಣ್ಯ ಇಲಾಖೆ ತಾಲ್ಲೂಕಿನ ತಾಳಮಡಗಿ, ವಡ್ಡನಕೇರಾ ಗ್ರಾಮಗಳ ಮಧ್ಯದ ಅರಣ್ಯ ಪ್ರದೇಶದಲ್ಲಿ ಮಾತ್ರ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ಟ್ಯಾಂಕರ್‌ ಮೂಲಕ ನೀರು ಪೂರೈಸುತ್ತಿದೆ.

ತಾಲ್ಲೂಕಿನ ಶಾಮತಾಬಾದ್‌, ಕುಡಂಬಲ್‌, ವಳಖಿಂಡಿ ಇತರೆಡೆಗಳಲ್ಲಿ ಕಾಡು ಹಂದಿಗಳು ತರಕಾರಿ ಬೆಳೆ ಹಾಗೂ ಪಪ್ಪಾಯಿ, ಕಲ್ಲಂಗಡಿ ಇತರ ಹಣ್ಣಿನ ಗಿಡಗಳನ್ನು ಹಾಳು ಮಾಡುತ್ತಿವೆ.

‘ತಾಲ್ಲೂಕು ಅರಣ್ಯ ಇಲಾಖೆ ತಕ್ಷಣ ದೇವಗಿರಿ, ಚಾಂಗಲೇರಾ, ನಿರ್ಣಾ, ಉಡಬಾಳ ಮಧ್ಯದ ಅರಣ್ಯ ಪ್ರದೇಶ, ನಾಗನಕೇರಾ ಅರಣ್ಯ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿ ಟ್ಯಾಂಕರ್‌ ಮೂಲಕ ನೀರು ಸಂಗ್ರಹಿಸಿ ಪೂರೈಸುವ ಕಾರ್ಯ ಆರಂಭಿಸಬೇಕು’ ಎಂದು ಮುತ್ತಂಗಿ ಸಾವಯವ ಬೇಸಾಯ ರೈತ ಮಲ್ಲಯ್ಯ ಸ್ವಾಮಿ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು