ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಶಾಹೀನ್‍ ಸಂಸ್ಥೆಯಿಂದ ಉಚಿತ ಆಂಬುಲೆನ್ಸ್ ಸೇವೆ

ಕೋವಿಡ್‌ ಪೀಡಿತರನ್ನು ಆಸ್ಪತ್ರೆಗೆ ದಾಖಲಿಸಲು ನೆರವು
Last Updated 24 ಏಪ್ರಿಲ್ 2021, 12:35 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಶಾಹೀನ್ ಶಿಕ್ಷಣ ಸಂಸ್ಥೆಯು ಕೋವಿಡ್ ಪೀಡಿತರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದೆ.

ಆಕ್ಸಿಜನ್ ಸೌಲಭ್ಯ ಹೊಂದಿರುವ ಸಂಸ್ಥೆಯ ಎರಡು ಆಂಬುಲೆನ್ಸ್‌ಗಳು ಹಗಲು, ರಾತ್ರಿ ಸೇವೆ ಒದಗಿಸಲಿವೆ. ಕರೆ ಬಂದ ತಕ್ಷಣ ಸ್ಥಳಕ್ಕೆ ಹಾಜರಾಗಿ ತೊಂದರೆಯಲ್ಲಿರುವವರನ್ನು ಬ್ರಿಮ್ಸ್ ಆಸ್ಪತ್ರೆಗೆ ತಲುಪಿಸಲಿವೆ.

ಈ ಸೇವೆಗೆ ಶನಿವಾರ ಚಾಲನೆ ನೀಡಿದ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಖದೀರ್, ‘ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿ ಇರುವ ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ಜನರಿಗೆ ಉಪಯುಕ್ತವಾಗಲಿದೆ. ತುರ್ತು ವೈದ್ಯಕೀಯ ಆರೈಕೆ ಹಾಗೂ ಚಿಕಿತ್ಸೆ ಅಗತ್ಯ ಇರುವವರೂ ಸೇವೆ ಪಡೆಯಬಹುದು’ ಎಂದರು.

‘ಮೊಬೈಲ್ ಸಂಖ್ಯೆ 88847 94444 ಅಥವಾ ಯೋಜನಾ ಸಂಯೋಜಕ ಅಮಿತ್ ಚಂದಾ 91644 47975 ಅವರನ್ನು ಸಂಪರ್ಕಿಸಬಹುದು’ ಎಂದು ಹೇಳಿದರು.

‘ನಗರದಲ್ಲಿ ನಮ್ಮ ಸಂಸ್ಥೆಯ ಕಟ್ಟಡಗಳಲ್ಲಿ ಎರಡು ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲು ಜಿಲ್ಲಾಡಳಿತಕ್ಕೆ ಅಗತ್ಯ ಸಹಕಾರ ನೀಡಿದ್ದೇವೆ. ಇಲ್ಲಿಒಟ್ಟು 400 ಬೆಡ್‍ಗಳ ಸೌಲಭ್ಯ ಇದೆ. ಈಗಾಗಲೇ 10 ಜನರಿಗೆ ಪ್ರವೇಶ ಕಲ್ಪಿಸಿ, ಚಿಕಿತ್ಸೆ ನೀಡಲಾಗುತ್ತಿದೆ’ ಎಂದುಅವರು ತಿಳಿಸಿದರು.

ಕಳೆದ ವರ್ಷ ಕೋವಿಡ್ ಹಾವಳಿ ಸಂದರ್ಭದಲ್ಲಿ ಶಾಹೀನ್ ಸಂಸ್ಥೆ ಕೋವಿಡ್ ಜಾಗೃತಿ ಕಾರ್ಯಕ್ರಮ, ಕ್ವಾರಂಟೈನ್ ಕೇಂದ್ರ, ಬಡವರಿಗೆ ಉಚಿತ ಆಹಾರ ಧಾನ್ಯ ಕಿಟ್ ವಿತರಣೆ, ಊರಿಗೆ ಮರಳಲು ಕಾರ್ಮಿಕರಿಗೆ ಬಸ್ ವ್ಯವಸ್ಥೆ, ಕೋವಿಡ್‍ನಿಂದ ಮೃತಪಟ್ಟವರ ಮಕ್ಕಳಿಗೆ ಪಿಯು ಉಚಿತ ಶಿಕ್ಷಣ ಮತ್ತಿತರ ಕಾರ್ಯಗಳನ್ನು ಕೈಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT