ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್‍ಸಿಗೊಂದು ಆಮ್ಲಜನಕ ಕಾನ್ಸೆಂಟ್ರೇಟರ್ ಉಚಿತ ವಿತರಣೆ

ಕೋವಿಡ್ ಮೂರನೇ ಅಲೆಗೂ ಮುನ್ನೆಚ್ಚರಿಕೆ ಕ್ರಮ: ಶಾಸಕ ಕಾಶೆಂಪೂರ್ ಹೇಳಿಕೆ
Last Updated 10 ಜೂನ್ 2021, 11:45 IST
ಅಕ್ಷರ ಗಾತ್ರ

ಕಮಠಾಣ: ಕೋವಿಡ್ ಎರಡನೇ ಅಲೆಯಿಂದ ಸಾಕಷ್ಟು ಜನ ಆಮ್ಲಜನಕ ಕೊರತೆಯಿಂದ ನರಳಾಡಿದ್ದಾರೆ. ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನು ಮನಗೊಂಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕ ಕಾನ್ಸೆಂಟ್ರೇಟರ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಹೇಳಿದರು.

ಬೀದರ್ ತಾಲ್ಲೂಕಿನ ಕಮಠಾಣ ಗ್ರಾಮದಲ್ಲಿ ತಮ್ಮ, ತಮ್ಮ ಸ್ನೇಹಿತರ ಹಾಗೂ ನಯೋನಿಕ್ ಟ್ರಸ್ಟ್ ವತಿಯಿಂದ ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲಾ ಒಂದರಂತೆ 10 ಆಮ್ಲಜನಕ ಕಾನ್ಸೆಂಟ್ರೇಟರ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಕಮಠಾಣ, ಆಣದೂರು, ಘೋಡಂಪಳ್ಳಿ, ಮನ್ನಳ್ಳಿ, ಬೇಮಳಖೇಡ, ಚಾಂಗಲೇರಾ, ಬಗದಲ್, ನಿರ್ಣಾ, ರಂಜೋಖೇಣಿ ಸೇರಿ ಒಂಬತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ಮನ್ನಾಎಖ್ಖೆಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ ಕಾನ್ಸೆಂಟ್ರೇಟರ್ ವಿತರಿಸಲಾಗಿದೆ ಎಂದು ತಿಳಿಸಿದರು.

10 ರಲ್ಲಿ 5 ಆಮ್ಲಜನಕ ಕಾನ್ಸೆಂಟ್ರೇಟರ್‌ಗಳು 5 ಲೀಟರ್ ಹಾಗೂ ಇನ್ನುಳಿದ 5 ಸಾಮಥ್ರ್ಯವುಳ್ಳವಾಗಿವೆ. 10 ಲೀಟರ್ ಸಾಮಥ್ರ್ಯದ ಕಾನ್ಸೆಂಟ್ರೇಟರ್‍ನಿಂದ ಇಬ್ಬರಿಗೆ ಆಮ್ಲಜನಕ ನೀಡಬಹುದು. ಬರುವ ದಿನಗಳಲ್ಲಿ ಇನ್ನೂ ತಲಾ ಒಂದು ಆಮ್ಲಜನಕ ಕಾನ್ಸೆಂಟ್ರೇಟರ್ ಕೊಡಲಾಗುವುದು ಎಂದು ಹೇಳಿದರು.

ಮೂರನೇ ಅಲೆ ಬರಬಹುದು ಎನ್ನುವ ಮುನ್ನೆಚ್ಚರಿಕೆಯಿಂದ ಸಾಕಷ್ಟು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕಮಠಾಣ ಆಸ್ಪತ್ರೆಗೆ ಜನರೇಟರ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯ ಡಾ. ಮನೋಜ್ ಬಿರಾದಾರ, ಶ್ರೀಮಂತ ಪಾಟೀಲ, ಕಿರಣ್ ಪಾಟೀಲ, ಕಮಠಾಣ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT