ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ಜನರ ಕಣ್ಣಿನ ಪೊರೆ ಉಚಿತ ಶಸ್ತ್ರಚಿಕಿತ್ಸೆ

Last Updated 29 ಜನವರಿ 2019, 10:29 IST
ಅಕ್ಷರ ಗಾತ್ರ

ಬೀದರ್‌: ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯ ಸಹಯೋಗದಲ್ಲಿ ನಗರಸಭೆ ಸದಸ್ಯ ಫಿಲೋಮನ್‌ರಾಜ್ ಪ್ರಸಾದ ಅವರು ನಗರದ ವಾರ್ಡ್ ಸಂಖ್ಯೆ 34 ರ ವ್ಯಾಪ್ತಿಯ ಪಕಲವಾಡದ ಹನುಮಾನ ಮಂದಿರದಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ 250 ಜನರ ಉಚಿತ ನೇತ್ರ ತಪಾಸಣೆ ಮಾಡಲಾಯಿತು.

ಈ ಪೈಕಿ 30 ಜನರ ನೇತ್ರ ಪೊರೆಯ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ನಗರಸಭೆ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಮಾತನಾಡಿ, ‘ಫಿಲೋಮನ್‌ರಾಜ್‌ ಪ್ರಸಾದ ಅವರು ಎರಡು ದಶಕದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು, ಅರ್ಹರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ತಲುಪಿಸುತ್ತಿದ್ದಾರೆ. ಉಚಿತ ಆರೋಗ್ಯ, ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರಗಳ ಮೂಲಕ ಬಡವರಿಗೆ ನೆರವಾಗುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಸಾಲಿನ್ಸ್ ನೇತ್ರ ಆಸ್ಪತ್ರೆ 50 ವರ್ಷಗಳಿಂದ ಜಿಲ್ಲೆಯಲ್ಲಿ ಅಂಧತ್ವ ನಿವಾರಣೆಗೆ ಶ್ರಮಿಸುತ್ತಿದೆ. ಶೇ 75 ರಷ್ಟು ನೇತ್ರ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸುತ್ತಿದೆ. ಈ ಮೂಲಕ ಬಡವರ ಬಾಳಲ್ಲಿ ಹೊಸ ಬೆಳಕು ಮೂಡಿಸುತ್ತಿದೆ’ ಎಂದು ತಿಳಿಸಿದರು.

‘ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯು ಮಾನವೀಯ ಸೇವೆಯ ಮೂಲಕ ಇಡೀ ಜಿಲ್ಲೆಯಲ್ಲಿ ಹೆಸರಾಗಿದೆ. ಆಸ್ಪತ್ರೆಯ ಸಹಕಾರದೊಂದಿಗೆ ವಾರ್ಡ್‌ನ ಜನರಿಗೆ ವೈದ್ಯಕೀಯ ಸೇವೆ ಒದಗಿಸಲು ಉಚಿತ ಶಿಬಿರ ಸಂಘಟಿಸಲಾಗಿದೆ’ ಎಂದು ಹೇಳಿದರು.

ಯಶವಂತ ಬಕಚೌಡಿ, ಜಾನ್, ಶಕೀಲ್ ಅಹಮ್ಮದ್, ಇಕ್ಬಾಲ್, ಇಮಾನುವೆಲ್ ಭಾಸ್ಕರ್, ಮಾಣಿಕ ಕಾಡವಾದ, ಸುಂದರ ರಾಜ, ಶಿರೋಮಣಿ ಮಾಳೆಗಾಂವ್, ಅರ್ಜುನ, ಧನರಾಜ ಹಿಪ್ಪಳಗಾಂವ್, ಜೈರಾಜ ಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT