ಹುಮನಾಬಾದ್: ಕೇಂದ್ರ ಸರ್ಕಾರದ ಆಡಿಪ್ ಯೋಜನೆಯಡಿಯಲ್ಲಿ ಅಂಗವಿಕಲರಿಗೆ ಉಚಿತ ಸಾಧನಾ ಸಲಕರಣೆ ಕಾರ್ಯಕ್ರಮಕ್ಕೆ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಅವರು ತಡವಾಗಿ ಬಂದಿದ್ದರಿಂದ ಯೋಜನೆಯ ಫಲಾನುಭವಿ ಅಂಗವಿಕಲರು ಇಲ್ಲಿಯ ಶಾಸಕರ ಕಚೇರಿಯ ಎದುರುಗಡೆ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗವೊಂದು ಸೋಮವಾರ ಜರುಗಿತು.

ಸೋಮವಾರ ಬೆಳಿಗ್ಗೆ 10.30ಕ್ಕೆ ಶಾಸಕರ ಕಚೇರಿ ಹತ್ತಿರ ಬರಬೇಕು ಎಂದು ಅಂಗವಿಕಲ ಅಧಿಕಾರಿಗಳ ಮಾಹಿತಿ ಮೇರಿಗೆ ನಾವು ಬೆಳಿಗ್ಗೆ 10ಗಂಟೆಗೆ ಶಾಸಕರ ಅಂಗವಿಕಲ ಫಲಾನುಭವಿಗಳು ಕಚೇರಿಗೆ ಆಗಮಿಸಿದ್ದರು. ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ ಮಧ್ಯಾಹ್ನ 3ಗಂಟೆ ಸುಮಾರಿಗೆ ಕಚೇರಿಗೆ ಬಂದು ಅಂಗವಿಕಲ ಸಲಕರಣೆಗಳು ವಿತರಣೆ ಮಾಡಿದರು.

ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಹುಮನಾಬಾದ್ನಲ್ಲಿ ನಡೆಯುವ ಯಾವುದೇ ಸರ್ಕಾರಿ ಕಾರ್ಯಕ್ರಮ ಶಿಷ್ಟಾಚಾರ ಪ್ರಕಾರ ನಡೆಯಬೇಕು. ಆದರೆ ಅಧಿಕಾರಿಗಳು ಪೌರಾಡಳಿತ ಸಚಿವ ರಹೀಂಖಾನ್ ಅಧ್ಯಕ್ಷತೆ ಎಂಬ ಆಹ್ವಾನ ಪತ್ರಿಕೆ ಮುದ್ರಿಸಿದ್ದರು. ಹುಮನಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಸರ್ಕಾರಿ ಕಾರ್ಯಕ್ರಮ ನಡೆದರೂ ಅದಕ್ಕೆ ಅಧ್ಯಕ್ಷತೆ ನಾನು ಇರುತ್ತೇನೆ. ಹೀಗಾಗಿ ಈ ಆಹ್ವಾನ ಪತ್ರಿಕೆ ಬದಲಿಸಬೇಕು ಎಂದು ಸೂಚನೆ ನೀಡಿದ್ದೇ. ಹೀಗಾಗಿ ಅಂಗವಿಕಲರಿಗೆ ಸಲಕರಣೆ ವಿತರಣೆ ಮಾಡುವಲ್ಲಿ ಸ್ವಲ್ಪ ತಡವಾಗಿದೆ’ ಎಂದು ಸ್ಪಷ್ಟಪಡಿಸಿದರು.

ನಿಜಾಮ್ ಷಾಹಿ ಆಡಳಿತ ಬಂದ್: ಮಾಜಿ ಶಾಸಕ ರಾಜಶೇಖರ ಪಾಟೀಲ ಅವರು ತಮ್ಮ ಗೃಹ ಕಚೇರಿ ಹತ್ತಿರ ಫಲಾನುಭವಿಗಳಿಗೆ ದ್ವಿಚಕ್ರ ವಾಹನ ವಿಚಾರಣೆ ಮಾಡಿದ್ದಾರೆ. ಇವರಿಗೆ ಯಾವ ಅಧಿಕಾರ ಇದೆ ಹೇಳಿ ವಿತರಣೆ ಮಾಡುವುದಕ್ಕೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದೆ ಎಂಬ ಉದ್ದೇಶದಿಂದ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಈ ನಿಮ್ಮ ನಿಜಾಮ್ ಷಾಹಿ ಆಡಳಿತ ಈಗ ಬಂದ್ ಆಗಿದೆ. ಇಲ್ಲಿ ಎಲ್ಲರೂ ಸಮಾನರೆ ಕಾನೂನಿಗೆ ಗೌರವ ಕೊಟ್ಟು ನಡೆಯಬೇಕು ಎಂದು ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ ಅವರು ಮಾಜಿ ಶಾಸಕ ರಾಜಶೇಖರ ಪಾಟೀಲ ವಿರುದ್ಧ ವಾಗ್ಧಾಳಿ ನಡೆಸಿದರು.

ಈ ಸಂದರ್ಭದಲ್ಲಿ ಸಂತೋಷ್ ಪಾಟೀಲ, ಮಾಣಿಕ್ ರೆಡ್ಡಿ, ಅರುಣ್ ಬಾವಗಿ, ಸಂಜು ವಾಡೇಕರ್, ಸುನೀಲ ಪತ್ರಿ ಸೇರಿದಂತೆ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.