ಬೀದರ್: ಗಾಂಧಿ ಜಯಂತಿ ಆಚರಣೆ

ಬೀದರ್: ನಗರದ ಗುಂಪಾ ರಸ್ತೆಯಲ್ಲಿರುವ ಕಿತ್ತೂರ ರಾಣಿ ಚನ್ನಮ್ಮ ಮಹಿಳಾ ಮಂಡಳ ವತಿಯಿಂದ ಸ್ವಧಾರ ಗೃಹದಲ್ಲಿ ಗಾಂಧಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಆರ್‌ಸಿಎ ಆಪ್ತ ಸಮಾಲೋಚಕ ಮನೋಹರ ಸಾಳಂಕೆ ಮಾತನಾಡಿ,‘ಗಾಂಧೀಜಿಯವರ ತತ್ವಗಳು ಹಾಗೂ ಆದರ್ಶಗಳು ಜಗತ್ತಿಗೆ ಮಾರ್ಗದರ್ಶಿಯಾಗಿವೆ. ಶಾಂತಿ, ಪ್ರೀತಿ, ಸಹಬಾಳ್ವೆಯಿಂದ ಉತ್ತಮ ರಾಷ್ಟ್ರ ನಿರ್ಮಾಣ ಮಾಡಬಹುದಾಗಿದೆ’ ಎಂದರು.
ಮುಖ್ಯ ಅತಿಥಿಯಾಗಿ ಸೈಯದ್ ಇಕ್ಬಾಲ್ ಪಾಷಾ ಪಟೇಲ್ ಭಾಗವಹಿಸಿದ್ದರು. ಸ್ವಧಾರ ಗ್ರಹದ ಮೇಲ್ವಿಚಾರಕಿ ಸವಿತಾ ವೆಂಕಟೇಶ, ಸ್ವಧಾರ ಗೃಹದ ಆಪ್ತ ಸಮಾಲೋಚಕಿ ವಿಲಾಸಸ್ಮತಿ ಸತೀಷ, ಸಾಂತ್ವಾನ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ ಶ್ರೀಹರಿ ಹಾಗೂ ರೇಷ್ಮಾ ಬೇಗಂ ಇದ್ದರು. ಪೂಜಾ ವಂದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.