ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಹಿಗ್ಗಿದ ಹಿರೇಕಾಯಿ, ಬಳಲಿದ ಬದನೆಕಾಯಿ

ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೆಕಾಯಿ, ಬೀನ್ಸ್ ಕಾರುಬಾರು
Last Updated 9 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಗಣೇಶನ ಹಬ್ಬ ಮುಗಿದರೂ ಬಹುತೇಕ ತರಕಾರಿ ಬೆಲೆ ಕಡಿಮೆಯಾಗಿಲ್ಲ. ಸೊಪ್ಪು ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಇಲ್ಲ. ಆದರೆ, ನಿತ್ಯ ಬಳಕೆಯ ತರಕಾರಿಗಳು ಮಾತ್ರ ಗ್ರಾಹಕರ ಬೆಂಬಲಕ್ಕೆ ನಿಂತಿವೆ.

ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಮೆಣಸಿನಕಾಯಿ, ಎಲೆಕೋಸು, ಹೂಕೋಸು, ಗಜ್ಜರಿ, ನುಗ್ಗೆಕಾಯಿ, ಚವಳೆಕಾಯಿ, ಪಾಲಕ್ ಬೆಲೆ ಸ್ಥಿರವಾಗಿದೆ. ಪ್ರತಿ ಕ್ವಿಂಟಲ್‌ಗೆ ಬೆಂಡೆಕಾಯಿ, ಹಿರೇಕಾಯಿ, ತುಪ್ಪದ ಹಿರೇಕಾಯಿ ಬೆಲೆ ₹ 2 ಸಾವಿರ, ಬೀನ್ಸ್ ಹಾಗೂ ಸೌತೆಕಾಯಿ ₹ 1 ಸಾವಿರ ಹೆಚ್ಚಾಗಿದೆ. ಟೊಮೆಟೊ ಬೆಲೆ ₹ 3 ಸಾವಿರ, ಬದನೆಕಾಯಿ, ಡೊಣಮೆಣಸಿನ ಕಾಯಿ, ಸಬ್ಬಸಗಿ, ಮೆಂತೆ ಸೊಪ್ಪು, ಕೊತಂಬರಿ ₹ 2 ಸಾವಿರ ಹಾಗೂ ಕರಿಬೇವು ₹ 1 ಸಾವಿರ ಕಡಿಮೆಯಾಗಿದೆ.

ಜಿಲ್ಲೆಯ ಜನರ ನೆಚ್ಚಿನ ನುಗ್ಗೆಕಾಯಿ, ಬೀನ್ಸ್ ಬೆಲೆ ಪ್ರತಿ ಕೆ.ಜಿಗೆ ₹ 120ರಂತೆ ಇದೆ. ಮೆಂತೆ ಸೊಪ್ಪಿನ ಬೆಲೆ ಶತಕ ಬಾರಿಸಿದೆ. ಹಿರೇಕಾಯಿ, ತುಪ್ಪದ ಹಿರೇಕಾಯಿ, ಚವಳೆಕಾಯಿ, ಹೂಕೋಸು, ಗಜ್ಜರಿ ಪ್ರತಿ ಕೆ.ಜಿಗೆ ₹ 80ರಂತೆ ಮಾರಾಟವಾಗುತ್ತಿದೆ.

‘ಮಳೆ ಇರುವ ಕಾರಣ ಬಳ್ಳಿಗಳ ಮೇಲೆ ಬೆಳೆಯುವ ತರಕಾರಿ ಹೆಚ್ಚು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆಯಾಗಿದೆ. ನಗರದಲ್ಲಿ ಗಣೇಶನ ಹಬ್ಬ ಮುಗಿದ ಕಾರಣ ಸೊಪ್ಪಿನ ಬೆಲೆಯಲ್ಲೂ ಇಳಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಗಜ್ಜರಿ, ನುಗ್ಗೆಕಾಯಿ, ಡೊಣ ಮೆಣಸಿನಕಾಯಿ, ತೊಂಡೆಕಾಯಿ, ಚವಳೆಕಾಯಿ, ಬೀಟ್‌ರೂಟ್‌, ಪಡವಲಕಾಯಿ, ಹಾಗಲಕಾಯಿ ನಗರದ ತರಕಾರಿ ಸಗಟು ಮಾರುಕಟ್ಟೆಗೆ ಬಂದಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಆವಕವಾಗಿದೆ.

ಬೆಳಗಾವಿ ಜಿಲ್ಲೆಯಿಂದ ಹಸಿ ಮೆಣಸಿನಕಾಯಿ, ಕೊತಂಬರಿ, ಜಿಲ್ಲೆಯ ಚಿಟಗುಪ್ಪ, ಹುಮನಾಬಾದ್‌ ಹಾಗೂ ಭಾಲ್ಕಿ ತಾಲ್ಲೂಕಿನಿಂದ ಕರಿಬೇವು, ಕೊತಂಬರಿ, ಬದನೆಕಾಯಿ, ಬೆಂಡೆಕಾಯಿ, ಎಲೆಕೋಸು ಹಾಗೂ ಸೊಪ್ಪು ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ, ಈ ವಾರ

ಈರುಳ್ಳಿ:20-30, 20-30
ಬೆಳ್ಳುಳ್ಳಿ:40-50, 30-40
ಆಲೂಗಡ್ಡೆ:20-30, 20-30
ಮೆಣಸಿನಕಾಯಿ:60-80, 60-80
ಎಲೆಕೋಸು:30-40, 30-40
ಹೂಕೋಸು:60-80, 60-80
ಗಜ್ಜರಿ:60-80, 60-80
ಬೀನ್ಸ್:80-100, 100-120
ಟೊಮೆಟೊ:50-60, 20-30
ಬದನೆಕಾಯಿ:60-80, 50-60
ಬೆಂಡೆಕಾಯಿ:30-40, 50-60
ಹಿರೇಕಾಯಿ:50-60, 60-80
ನುಗ್ಗೆಕಾಯಿ:100-120, 100-120
ಡೊಣಮೆಣಸಿನ ಕಾಯಿ: 50-60,30-40
ಚವಳೆಕಾಯಿ:60-80, 60-80
ಸೌತೆಕಾಯಿ:20-30, 30-40
ತುಪ್ಪದ ಹಿರೇಕಾಯಿ: 50-60, 60-80
ಮೆಂತೆ:100-120, 80-100
ಸಬ್ಬಸಗಿ:60-80, 50-60
ಕರಿಬೇವು:30-40, 20-30
ಕೊತಂಬರಿ:40-50, 20-30
ಪಾಲಕ್:50-60, 50-60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT