ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಣೇಶ ಲಡ್ಡು ₹1.71 ಲಕ್ಷಕ್ಕೆ ಹರಾಜು

Published : 14 ಸೆಪ್ಟೆಂಬರ್ 2024, 15:59 IST
Last Updated : 14 ಸೆಪ್ಟೆಂಬರ್ 2024, 15:59 IST
ಫಾಲೋ ಮಾಡಿ
Comments

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ‘ಹಲಬರ್ಗಾ ಕಾ ರಾಜಾ ಗಣೇಶ ಮಂಡಳಿ’ಯವರು ಪ್ರತಿಷ್ಠಾಪಿಸಿದ್ದ ಗಣೇಶನ ಕೈಯಲ್ಲಿದ್ದ ಪ್ರಸಾದದ ಲಡ್ಡು ₹1.71 ಲಕ್ಷಕ್ಕೆ ಹರಾಜಾಗಿದೆ.

ಶುಕ್ರವಾರ ಗಣೇಶ ವಿಸರ್ಜನೆ ವೇಳೆ ನಡೆದ ಹರಾಜಿನಲ್ಲಿ ಗ್ರಾಮದವರೇ ಆದ ಉದ್ಯಮಿ ಸಂತೋಷ ಶ್ರೀಮಾಳೆ ಲಡ್ಡು ಖರೀದಿಸಿದರು.

ಒಟ್ಟು 10 ಜನ ಹರಾಜಿನಲ್ಲಿ ಪಾಲ್ಗೊಂಡಿದ್ದರು. ಲಡ್ಡು ಖರೀದಿಸಿದ ಸಂತೋಷ ಶ್ರೀಮಾಳೆ ಅವರನ್ನು ಗಣೇಶ ಮಂಡಳಿಯ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.

ಗ್ರಾಮದ ರಾಚೋಟೇಶ್ವರ ಮಠದ ಪೀಠಾಧಿಪತಿ ಹಾವಗಿಲಿಂಗೇಶ್ವರ ಶಿವಾಚಾರ್ಯರು, ಗಣೇಶ ಮಂಡಳಿಯ ಪ್ರಮುಖರಾದ ದೀಪಕ್ ಪ್ರಭಾ, ಪಿಂಟು ಠಾಕೂರ್, ಮಹೇಶ ಸ್ವಾಮಿ, ಬಸು ಪ್ರಭಾ, ಪವನ್ ಮೂಲಗೆ, ಮದನ್ ಪ್ರಭಾ, ಸಾಗರ್ ಪಾಟೀಲ, ವಿವೇಕಾನಂದ ಸ್ವಾಮಿ, ವಿನೋದ ಕುಂಬಾರ, ಭದ್ರಪ್ಪ ಪ್ರಭಾ, ಕಿರಣ್ ಮೇತ್ರೆ, ಮಲ್ಲಿಕಾರ್ಜುನ, ಈಶ್ವರ ಮತ್ತಿತರರು ಇದ್ದರು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ‘ಹಲಬರ್ಗಾ ಕಾ ರಾಜಾ ಗಣೇಶ ಮಂಡಳಿ’ಯವರು ಪ್ರತಿಷ್ಠಾಪಿಸಿದ ಗಣೇಶನ ಕೈಯಲ್ಲಿದ್ದ ಲಡ್ಡು ಖರೀದಿಸಿದ ಉದ್ಯಮಿ ಸಂತೋಷ ಶ್ರೀಮಾಳೆ ಅವರನ್ನು ಸನ್ಮಾನಿಸಲಾಯಿತು
ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ‘ಹಲಬರ್ಗಾ ಕಾ ರಾಜಾ ಗಣೇಶ ಮಂಡಳಿ’ಯವರು ಪ್ರತಿಷ್ಠಾಪಿಸಿದ ಗಣೇಶನ ಕೈಯಲ್ಲಿದ್ದ ಲಡ್ಡು ಖರೀದಿಸಿದ ಉದ್ಯಮಿ ಸಂತೋಷ ಶ್ರೀಮಾಳೆ ಅವರನ್ನು ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT