ಶನಿವಾರ, ಡಿಸೆಂಬರ್ 14, 2019
21 °C

‘ಉತ್ತಮ ಜೀವನಕ್ಕೆ ಹಾಸ್ಯ ಅವಶ್ಯಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ‘ಉತ್ತಮ ಜೀವನಕ್ಕೆ ಹಾಸ್ಯ ಅವಶ್ಯಕ. ಪ್ರತಿಯೊಬ್ಬರೂ ನಗು, ನಗುತ ಜೀವನ ಸಾಗಿಸಬೇಕು’ ಎಂದು ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ಹೇಳಿದರು.

ಕರಿಬಸವೇಶ್ವರ ಯುವಕ ಸಂಘದ ವತಿಯಿಂದ ತಾಲ್ಲೂಕಿನ ಹುಡಗಿ ಗ್ರಾಮದ ನಿಸರ್ಗ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಹಾಸ್ಯ ಸಂಜೆ ಮತ್ತು ಕರಿಬಸವೇಶ್ವರ ಯುವ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾಸ್ಯ ಇರಬೇಕು. ಆಗ ಜೀವನಕ್ಕೆ ಅರ್ಥ ಬರುತ್ತದೆ. ಹಾಸ್ಯವಿಲ್ಲದ ಜೀವನ ವ್ಯರ್ಥ. ಕಲ್ಯಾಣ ಕರ್ನಾಟಕ ಭಾಗದ ಸಾಹಿತ್ಯ, ಸಂಸ್ಕೃತಿ ಮತ್ತು ಭಾಷೆಯ ಸೊಗಡಿನಲ್ಲಿ ಸಾಕಷ್ಟು ಹಾಸ್ಯ ಅಡಗಿದೆ ಎಂದರು.

ಯುವ ಜನಾಂಗ ದೇಶದ ಸಾಹಿತ್ಯ, ಪರಂಪರೆ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಕನ್ನಡ ನಾಡು, ನುಡಿ ಸಂರಕ್ಷಣೆಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಕಲಾವಿದರಾದ ಗುಂಡಣ್ಣ ಡಿಗ್ಗಿ, ಬಿ.ಮಹಾಮನಿ, ವೈಜಿನಾಥ ಸಜ್ಜನಶೆಟ್ಟಿ, ನವಲಿಂಗ ಪಾಟೀಲ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಹುಡಿಗಿ ಹಿರೇಮಠ ಸಂಸ್ಥಾನದ ವಿರೂಪಾಕ್ಷ ಶಿವಾಚಾರ್ಯರು ಆಶಿರ್ವಚನ ನೀಡಿದರು.

ಹುಡುಗಿ ವೀರಕ್ತಮಠದ ಚನ್ನಮಲ್ಲದೇವರು ಸಾನ್ನಿಧ್ಯ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕಂಟೆಪ್ಪ ದಾನ, ತಹಶೀಲ್ದಾರ್ ನಾಗಯ್ಯ ಹಿರೇಮಠ. ಡಿವೈಎಸ್‍ಪಿ ಎಸ್‍.ಬಿ ಮಹೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಕುಂತಲಾ ಸಂಗಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸೋಮನಾಥ ಪಾಟೀಲ, ಕರಿಬಸವೇಶ್ವರ ಯುವ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಗುರು ಮುಗಳಿ, ಅನೀಲ ಖನಶೆಟ್ಟಿ, ಮಹಾಂತೇಶ ನಂದಿ, ವಿಶ್ವನಾಥ ಪೆದ್ದಿ ಹಾಗೂ ಸಾಗರ ನಂದಿ ಇದ್ದರು.

ಪ್ರತಿಕ್ರಿಯಿಸಿ (+)